Blog Archive

ದೇವೇಗೌಡರಿಗೆ 86ನೇ ಜನ್ಮದಿನದ ಸಂಭ್ರಮ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜೆಡಿಎಸ್‌‌ ವರಿಷ್ಠ

Friday, May 18th, 2018
ದೇವೇಗೌಡರಿಗೆ 86ನೇ ಜನ್ಮದಿನದ ಸಂಭ್ರಮ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜೆಡಿಎಸ್‌‌ ವರಿಷ್ಠ

ಹೈದರಾಬಾದ್: ಮಾಜಿ ಪ್ರಧಾನಿ, ಹಿರಿಯ ರಾಜಕಾರಣಿ, ಜೆಡಿಎಸ್‌‌ ವರಿಷ್ಠ ಹೆಚ್‌‌.ಡಿ.ದೇವೇಗೌಡ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಇಂದು 86ನೇ ವಸಂತಕ್ಕೆ ಕಾಲಿಟ್ಟಿರುವ ಗೌಡರು, ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. 1933ರ ಮೇ 18ರಂದು ಜನಿಸಿರುವ ದೇವೇಗೌಡರು, ದೇಶದ ಪ್ರಧಾನಿಯಾದ ಏಕೈಕ ಕನ್ನಡಿಗರು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ರಾಜ್ಯ ಮಾತ್ರವಲ್ಲದೇ ದೇಶಾದ್ಯಂತ ತಮ್ಮದೇ ಆದ ವರ್ಚಸ್ಸನ್ನು ಗೌಡರು ಹೊಂದಿದ್ದಾರೆ. 7 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದ ಅವರು 1994ರಿಂದ 1996ರವರೆಗೂ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದಾದ ನಂತರ […]

ಆನಂದ್ ಸಿಂಗ್ ಮರಳಿ ಬಿಜೆಪಿ ತೆಕ್ಕೆಗೆ , ಕುತೂಹಲ ಮೂಡಿಸಿದೆ ನಡೆ..!

Thursday, May 17th, 2018
anand-singh

ಬೆಂಗಳೂರು: ರಾಜ್ಯ ಸರ್ಕಾರ ರಚನೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನ ಕಸರತ್ತು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ ಪಕ್ಷಗಳಿಗೆ ಆಪರೇಷನ್ ಭೀತಿ ಎದುರಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಶಾಸಕರನ್ನು ಆಪರೇಷನ್ ಗೆ ಒಳಗಾಗದಂತೆ ರೆಸಾರ್ಟ್ ಮತ್ತು ಹೋಟೆಲ್ ಗಳಲ್ಲಿ ಕೂಡಿಹಾಕಿವೆ. ಇದರ ನಡುವೆ ಫಲಿತಾಂಶ ಪ್ರಕಟಗೊಂಡಂದಿನಿಂದ ನಾಪತ್ತೆಯಾಗಿರುವ ಶಾಸಕ ಆನಂದ್ ಸಿಂಗ್ ಬಗ್ಗೆ ವ್ಯಾಪಕ ಕುತೂಹಲ ಮೂಡಿದೆ. ಆನಂದ್ ಸಿಂಗ್ ಮರಳಿ ಬಿಜೆಪಿ ತೆಕ್ಕೆಗೆ ಮರಳಿದ್ದಾರೆ ಎನ್ನುವ ಮಾತುಗಳು ರಾಜಕೀಯವ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ. ಚುನಾವಣಾ […]

38 ಸ್ಥಾನ ಗೆದ್ದವರಿಗೇ ಆಸೆ ಇದ್ದಾಗ ಇನ್ನು 104 ಸ್ಥಾನ ಗೆದ್ದ ನಮಗೆ ಆಸೆ ಇರಲ್ವಾ: ಆರ್.ಅಶೋಕ್

Thursday, May 17th, 2018
R-Ashok

ಬೆಂಗಳೂರು: ಕರ್ನಾಟಕದ ಜನತೆ ನಮಗೆ ಹೆಚ್ಚಿನ ಸ್ಥಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ರಾಜ್ಯಪಾಲರು ಸಂವಿಧಾನಬದ್ಧ ಸ್ಥಾನ ನೀಡಿದ್ದಾರೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಅಧಿಕಾರದ ದುರಾಸೆ ಇದೆ. ಈ ದುರಾಸೆಯಿಂದ ಆಡಳಿತ ಮಾಡಲು ಹೊರಟಿದ್ದಾರೆ. ಡಿಪಾಸಿಟ್ ಕಳೆದುಕೊಂಡ ಸಚಿವರು ಕಾಂಗ್ರೆಸ್‌ನಲ್ಲಿದ್ದಾರೆ ಎಂದು ಲೇವಡಿ ಮಾಡಿದರು. 38 ಸ್ಥಾನ ಗೆದ್ದವರಿಗೇ ಆಸೆ ಇದ್ದಾಗ ಇನ್ನು 104 ಸ್ಥಾನ ಗೆದ್ದ ನಮಗೆ ಆಸೆ ಇರಲ್ವಾ ಎಂದು ಪ್ರಶ್ನಿಸಿದರು. ಈ ಮೊದಲು ಅವರು ನಾಯಿ, ನರಿಗಳ ತರಹ ಕಿತ್ತಾಡ್ತಿದ್ರು. […]

ಸರ್ಕಾರ ರಚಿಸಿಯೇ ಸಿದ್ಧ… ರಾಜ್ಯಪಾಲರಿಂದ ಆಹ್ವಾನದ ನಿರೀಕ್ಷೆ: ಹೆಚ್‌ಡಿಕೆ ಭರವಸೆ

Wednesday, May 16th, 2018
kumaraswamy-party

ಬೆಂಗಳೂರು: ಬಿಜೆಪಿ ಸರ್ಕಾರ ರಚನೆ ಕಸರತ್ತು ಚುರುಕು ಪಡೆಯುತ್ತಿದ್ದಂತೆ ಎಚ್ಚೆತ್ತ ಜೆಡಿಎಸ್‌-ಕಾಂಗ್ರೆಸ್‌‌ ಶಾಸಕಾಂಗ ಪಕ್ಷಗಳ ಸಭೆ ನಡೆಸಿತು. ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನ ಆಯ್ಕೆ ಮಾಡಿಕೊಂಡ ಎರಡು ಪಕ್ಷಗಳು 118 ಶಾಸಕರ ಸಹಿ ಪಡೆದು ರಾಜ್ಯಪಾಲರಿಗೆ ಪತ್ರ ಸಿದ್ಧಪಡಿಸಿದವು. ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಕಾಂಗ್ರೆಸ್‌ನ 78 ಹಾಗೂ ಇಬ್ಬರು ಪಕ್ಷೇತರರು ಮತ್ತು ಜೆಡಿಎಸ್‌ನ 38 ಶಾಸಕರು ರಾಜಭವನಕ್ಕೆ ತೆರಳಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 7 ಶಾಸಕರು ರಾಜ್ಯಪಾಲರನ್ನ ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ […]

ಅತಂತ್ರ ವಿಧಾನಸಭೆ: ಮರುಕಳಿಸಿದ ಹದಿನಾಲ್ಕು ವರ್ಷದ ಹಿಂದಿನ ಇತಿಹಾಸ!

Wednesday, May 16th, 2018
siddarmah

ಬೆಂಗಳೂರು: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮೈತ್ರಿ ಸರ್ಕಾರ ರಚನೆಗಾಗಿ ಮೂರು ಪಕ್ಷಗಳ ನಡುವೆ ಜಂಘೀ ಕುಸ್ತಿ ಆರಂಭಗೊಂಡಿದ್ದು, ಮೊದಲ ಪ್ರಯತ್ನದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸುವ ದಿಕ್ಕಿನತ್ತ ದಾಪುಗಾಲಿಟ್ಟಿವೆ. ಹದಿನಾಲ್ಕು ವರ್ಷದ ಹಿಂದಿನ ಇತಿಹಾಸ ಈ ಬಾರಿ ಮತ್ತೆ ಮರುಕಳಿಸಿದೆ. 2004ರ ವಿಧಾನಸಭೆ ಚುನಾವಣೆಯಲ್ಲಿ ಇದೇ ರೀತಿಯ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಆಗ ಮೊದಲ ಹಂತದಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ […]

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

Tuesday, May 15th, 2018
resigns

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಜನಾದೇಶ ಪಡೆಯುವ ಕಾಲ ಇದೀಗ ಬಂದಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೇ 12ರಂದು ಮತದಾನವಾಗಿದೆ. ಚುನಾವಣಾ ಪೂರ್ವ ಸಮೀಕ್ಷೆ, ಅಭಿಪ್ರಾಯಗಳ ಸಂಗ್ರಹ ಕುತೂಹಲಕಾರಿ ಫಲಿತಾಂಶವನ್ನು ನೀಡಿದೆ. ಆದರೆ, ಅಂತಿಮ ಜನಾದೇಶ ಇಂದು(ಮೇ 15) ಮಧ್ಯಾಹ್ನ ಹೊರಬೀಳಲಿದೆ.  ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಲ್ಲದೆ ಸರಿ ಸುಮಾರು 28ಕ್ಕೂ ಅಧಿಕ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 2,622 ಅಭ್ಯರ್ಥಿಗಳಿದ್ದು, ಪುರುಷ ಅಭ್ಯರ್ಥಿಗಳು 2,405, ಮಹಿಳೆಯರು […]

ಜೆಡಿಎಸ್-ಕಾಂಗ್ರೆಸ್ ಮೈತ್ರಿ, ಪ್ರಜಾತಂತ್ರದ ಕಟು ಅಣಕ!

Tuesday, May 15th, 2018
kumaraswamy

ಬೆಂಗಳೂರು: ಕರ್ನಾಟಕದ ಜನತೆಯ ಮತಗಳಿಗೆ, ಮತ ಪ್ರಹಾಪ್ರಭುವಿನ ನಾಲ್ಕು ಕಾಸಿನ ಕಿಮ್ಮತ್ತಿಲ್ಲದಂತೆ, ಪ್ರಜಾಪ್ರಭುತ್ವಕ್ಕೂ ಬೆಲೆಯಿಲ್ಲದಂತೆ ಕಾಂಗ್ರೆಸ್ ಪಕ್ಷ ಜಾತ್ಯತೀಯ ಜನತಾದಳಕ್ಕೆ ಸರಕಾರ ರಚಿಸಲು ಬೆಂಬಲ ನೀಡಿದೆ. ಕುಮಾರಸ್ವಾಮಿಯವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಜಾತ್ಯತೀತ ಜನತಾದಳವನ್ನು ಭಾರತೀಯ ಜನತಾ ಪಕ್ಷದ ‘ಬಿ ಟೀಮ್’ ಎಂದು ಪ್ರಚಾರ ಸಮಾವೇಶವೊಂದರಲ್ಲಿ ಬಹಿರಂಗವಾಗಿ ಜರಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಈಗ ಬಹಿರಂಗವಾಗಿಯೇ ಅದೇ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಇಲ್ಲಿ ಏನು ಬೇಕಾದರೂ ಆಗಬಹುದು. ಅವರಿಗೆ ಅಧಿಕಾರ ಸಿಗಬಾರದೆಂದು ಎಂಥ ಅಪವಿತ್ರ ಮೈತ್ರಿಗೂ […]

ಸರ್ಕಾರ ರಚಿಸಲು ಜೆಡಿಎಸ್ ಗೆ ಬೆಂಬಲ: ಸಿದ್ದರಾಮಯ್ಯ

Tuesday, May 15th, 2018
merged-jds

ಬೆಂಗಳೂರು: ಮತದಾರರ ತೀರ್ಪಿಗೆ ತಲೆಬಾಗಿದ್ದೇವೆ. ಜನರ ತೀರ್ಪನ್ನು ಒಪ್ಪಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಇದೇ ಮೊದಲ ಬಾರಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ಮಾತನಾಡಿದ ಸಿಎಂ, ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿಲ್ಲ. ಯಾರಿಗೂ ಸ್ವತಂತ್ರ ಸರ್ಕಾರ ರಚನೆ ಮಾಡಲು ಆಗಲ್ಲ. ಹೀಗಾಗಿ ಕಾಂಗ್ರೆಸ್ ಒಂದು ತೀರ್ಮಾನಕ್ಕೆ ಬಂದಿದೆ. ಜಾತ್ಯತೀತ ಹಿನ್ನೆಲೆಯಿರುವ ಪಕ್ಷಕ್ಕೆ ಬೆಂಬಲ, ಜೆಡಿಎಸ್ ಗೆ ಸರ್ಕಾರ ರಚಿಸಲು ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಹೇಳಿದರು. ಜನಾದೇಶವನ್ನು ಗೌರವಿಸುತ್ತೇವೆ. […]

ಯಶವಂತಪುರ ಜೆಡಿಎಸ್‌ಗೆ ಮುನ್ನಡೆ, ಜಗ್ಗೇಶ್‌ಗೆ ಮೂರನೇ ಸ್ಥಾನ

Tuesday, May 15th, 2018
jaggesh

ಬೆಂಗಳೂರು: ನರೇಂದ್ರ ಮೋದಿ ಪ್ರಚಾರ ನಡೆಸಿದ್ದ ಅಭ್ಯರ್ಥಿಗಳಲ್ಲೊಬ್ಬರಾಗಿರುವ ಜಗ್ಗೆಶ್‌ ಅವರು ಈ ಬಾರಿ ಮೂರನೇ ಸ್ಥಾನ ಪಡೆಯುವ ಎಲ್ಲ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಜಗ್ಗೆಶ್‌ ಸ್ಪರ್ಧಿಸಿದ್ದ ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜಯರವಿ ಗೌಡ 6370 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಲ್ಲಿ ಕಾಂಗ್ರೆಸ್‌ ಎರಡನೇ ಸ್ಥಾನದಲ್ಲಿ ನಿಂತಿದ್ದಾರೆ. ಮಲ್ಲೇಶ್ವರದಲ್ಲಿ ಡಾ. ಅಶ್ವತ್ಥ ನಾರಾಯಣ ಭರ್ಜರಿ ಜಯ ಜಗ್ಗೆಶ್‌ ಅವರಿಗೆ ಕೊನೆಯ ಗಳಿಗೆಯಲ್ಲಿ ಅಚ್ಚರಿಯ ರೀತಿಯಲ್ಲಿ ಬಿಜೆಪಿ ಟಿಕೆಟ್ ಸಿಕ್ಕು ಸ್ಪರ್ಧೆ ನಡೆಸಿದ್ದರು. ಈ ಕ್ಷೇತ್ರದಿಂದ ಶೋಭಾ […]

ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಈಗಾಗಲೇ ಒಳಒಪ್ಪಂದ ಮಾಡಿಕೊಂಡಿವೆ: ಐವನ್ ಡಿಸೋಜ

Thursday, May 10th, 2018
ivan-desouza

ಮಂಗಳೂರು: ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಈಗಾಗಲೇ ಒಳಒಪ್ಪಂದ ಮಾಡಿಕೊಂಡಿವೆ. ಚುನಾವಣೆಯ ಬಳಿಕ ಒಳಒಪ್ಪಂದ ಮಾಡಿಕೊಳ್ಳಬೇಕಾದ ಈ ಎರಡು ಪಕ್ಷಗಳು ಚುನಾವಣಾ ಪೂರ್ವದಲ್ಲೇ ಒಳ ಒಪ್ಪಂದ ಮಾಡಿಕೊಳ್ಳುವ ಮೂಲಕ ಜನತೆಗೆ ಅನ್ಯಾಯ ಎಸಗಿದೆ. ಅವರ ಈ ತಂತ್ರ ಚುನಾವಣೆಯಲ್ಲಿ ಫಲಿಸುವುದಿಲ್ಲ. ಈ ಬಾರೀ ಕಾಂಗ್ರೆಸ್ ಪಕ್ಷ 130ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದ್ದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ. ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, […]