ಧರ್ಮಸ್ಥಳ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ

Thursday, October 24th, 2024
Veerendra-Hegde

ಉಜಿರೆ: ರಾಷ್ಟ್ರಕವಿ ಕುವೆಂಪು ಸಾರಿದ ವಿಶ್ವಮಾನವ ಸಂದೇಶವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಕ್ಷರಶಃ ಸೇವಾ ರೂಪದಲ್ಲಿ ಮಾಡಿ ತೋರಿಸಿದ್ದಾರೆ. ಜೈನಧರ್ಮಕ್ಕೂ ಹಿಂದೂ ಧರ್ಮಕ್ಕೂ ಅವಿನಾಭಾವ ಸಂಬಂಧವಿದ್ದು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ – ಎಲ್ಲಾ ರಂಗಗಳಲ್ಲಿಯೂ ಹೆಗ್ಗಡೆಯವರು ಹೊಗಳಿಕೆಗೆ ಹಿಗ್ಗದೆ, ಟೀಕೆಗಳಿಗೆ ಅಂಜದೆ, ಸ್ಥಿತಪ್ರಜ್ಞೆಯಿಂದ ಎಲ್ಲಾ ಮಠ-ಮಂದಿರಗಳಿಗೂ ಮಾದರಿಯಾಗಿ ಅನವರತ ಸೇವೆ ಮಾಡಿ ಧರ್ಮಸ್ಥಳದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಪಸರಿಸಿದ್ದಾರೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ ಹೇಳಿದರು. ಅವರು ಗುರುವಾರ ಧರ್ಮಸ್ಥಳದಲ್ಲಿ […]

ಉಜಿರೆ : ತಮ್ಮ ತಲೆಯ ಕೂದಲನ್ನು ಕೈಯಿಂದ ಎಳೆದು ತೆಗೆದ ವೀರ ಸಾಗರ ಮುನಿ

Friday, July 6th, 2018
Sagara Muni

ಉಜಿರೆ: ಹೊಸ್ಮಾರಿನ ಸಿದ್ದರವನ ಕ್ಷೇತ್ರದಲ್ಲಿ ಶುಕ್ರವಾರ ವೀರ ಸಾಗರ ಮುನಿ ಮಹಾರಾಜರ ಕೇಶಲೋಚನ ಕಾರ್ಯಕ್ರಮ ನಡೆಯಿತು. ಜೈನಧರ್ಮದ ಸಂಪ್ರದಾಯದಂತೆ ದಿಗಂಬರ ಮುನಿಗಳು ತಮ್ಮ ತಲೆಯ ಕೂದಲನ್ನು ಕೈಯಿಂದ ಎಳೆದು ತೆಗೆಯುವುದಕ್ಕೆ ಕೇಶಲೋಚನ ಎನ್ನುತ್ತಾರೆ. ಊರ-ಪರವೂರ ಶ್ರಾವಕ – ಶ್ರಾವಕಿಯರು ಪವಿತ್ರ ಕಾರ್ಯವನ್ನು ವೀಕ್ಷಿಸಿದರು. ಚಾತುರ್ಮಾಸ: 108 ಶ್ರೀ ವೀರ ಸಾಗರ ಮುನಿ ಮಹಾರಾಜರು ಕಾರ್ಕಳದಲ್ಲಿ ಚಾತುರ್ಮಾಸ ವೃತಾಚರಣೆ ಮಾಡಲಿದ್ದು ಇದೇ 11 ರಂದು ಬುಧವಾರ ಕಾರ್ಕಳ ಪುರಪ್ರವೇಶ ಮಾಡಲಿದ್ದಾರೆ. ಕಾರ್ಕಳದ ಜೈನಮಠದ ಲಲಿತಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು […]