ಮಂಗಳೂರು : ಜೂನ್ 5 ರಿಂದ ಫುಟ್‍ಪಾತ್‍ ಅಂಗಡಿಗಳ ತೆರವು ಕಾರ್ಯಾಚರಣೆ ಪ್ರಾರಂಭ

Wednesday, June 3rd, 2020
mayor-diwakar

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿರುವ ಫುಟ್‍ಪಾತ್‍ಗಳನ್ನು ಅತಿಕ್ರಮಿಸಿ ಹಲವಾರು ಅಂಗಡಿಗಳು ಹಾಗೂ ಹೂವು, ಹಣ್ಣು, ತರಕಾರಿ ಮತ್ತು ಇನ್ನಿತರ ವಸ್ತುಗಳನ್ನು ಮಾರಾಟ ಮಾಡುತ್ತಿರುವುದರಿಂದ ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಈ ಕುರಿತು ಪಾಲಿಕೆಗೆ ಹಲವಾರು ದೂರುಗಳು ಬರುತ್ತಿರುವುದರಿಂದ ಟೈಗರ್ ಕಾರ್ಯಾಚರಣೆ ಆರಂಭವಾಗಲಿದೆ. ಫುಟ್‍ಪಾತ್‍ನಲ್ಲಿ ಇರುವ ಅಂಗಡಿ ತೆರವುಗೊಳಿಸಲಾಗುವುದು ಮತ್ತು ಇದರ ನಷ್ಟಕ್ಕೆ ವ್ಯಾಪಾರಸ್ಥರೇ ಜವಾಬ್ದಾರರಾಗಿರುತ್ತಾರೆ. ಜೂನ್ 5 ರಂದು ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಫುಟ್‍ಪಾತ್ ತೆರವುಗೊಳಿಸಲು ಟೈಗರ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಮೇಯರ್ ದಿವಾಕರ್ ಹೇಳಿದ್ದಾರೆ. ಪಾಲಿಕೆ ವ್ಯಾಪ್ತಿಯ […]

ಅನಧಿಕೃತ ವ್ಯಾಪಾರಿಗಳಿಗೆ ಬಿಸಿಮುಟ್ಟಿಸುವ ಟೈಗರ್ ಕಾರ್ಯಾಚರಣೆ: ಮೇಯರ್ ಹರಿನಾಥ್

Wednesday, August 31st, 2016
MCC

ಮಂಗಳೂರು: ಅನಧಿಕೃತ ವ್ಯಾಪಾರಿಗಳಿಗೆ ಬಿಸಿಮುಟ್ಟಿಸುವ ಟೈಗರ್ ಕಾರ್ಯಾಚರಣೆ ನಡೆಸಲು ಪಾಲಿಕೆ ತೀರ್ಮಾನಿಸಿದೆ. ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಈ ವಿಷಯ ಪ್ರಸ್ತಾಪಿಸಿದರು. ಸ್ಟೇಟ್‍ ಬ್ಯಾಂಕ್, ಮಣ್ಣಗುಡ್ಡೆ, ಕೇಂದ್ರ ಮಾರುಕಟ್ಟೆ ಪರಿಸರಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ಫುಟ್‍ಪಾತ್‍ಗಳಲ್ಲೇ ವ್ಯಾಪಾರ ಮಾಡುತ್ತಿರುವುದರಿಂದ ಪಾದಚಾರಿಗಳಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಫುಟ್‍ಪಾತ್‍ನಿಂದ ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸುವುದಾಗಿ ಮೇಯರ್ ನೀಡಿದ ಭರವಸೆ ಈಡೇರಿಲ್ಲ. ಈ ಹಿಂದೆ ಅವರ ಅನಧಿಕೃತ ವ್ಯಾಪಾರ ವಿರುದ್ಧ ಕಾರ್ಯಾಚರಣೆ ನಡೆಸಿದರೂ ಬಳಿಕ ಪಾಲಿಕೆ ತಟಸ್ಥ ಧೋರಣೆ […]