ಯಕ್ಷಗಾನದಲ್ಲೂ ಡಬ್ಲ್ಯೂಡಬ್ಲ್ಯೂಇ: ಹಿರಿಯ ಕಲಾವಿದರ ಅಸಮಾಧಾನ

Wednesday, January 17th, 2018
yakshagana

ಮಂಗಳೂರು: ಇತ್ತೀಚೆಗೆ ಕರಾವಳಿಯ ಗಂಡುಕಲೆ ಹಾಗೂ ಸಾಂಪ್ರದಾಯಿಕ ಕಲೆ ಯಕ್ಷಗಾನದಲ್ಲೂ ಕೂಡಾ ವಿಭಿನ್ನ ಪ್ರಯೋಗಗಳು ಕಂಡುಬರುತ್ತಿದ್ದು, ಕೆಲವು ಸನ್ನಿವೇಶಗಳು ವಿವಾದವನ್ನೇ ಸೃಷ್ಟಿಸಿವೆ. ಇದೀಗ ಮತ್ತೊಂದು ಪ್ರಸಂಗದ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಡಗುತಿಟ್ಟಿನ ಡೇರೆ ಮೇಳವೊಂದು ಪ್ರದರ್ಶಿಸಿರುವ ‘ಪುಷ್ಪ ಚಂದನ’ದ ದೃಶ್ಯ ಇದು ಎನ್ನಲಾಗಿದ್ದು ಪಾತ್ರಧಾರಿಯೊಬ್ಬ ಡಬ್ಲ್ಯೂಡಬ್ಲ್ಯೂಇ ಮಾದರಿಯಲ್ಲಿ ಯುದ್ಧ ಮಾಡುವ ದೃಶ್ಯ ಚರ್ಚೆಗೆ ಗ್ರಾಸವಾಗಿದೆ. ಪ್ರಬುದ್ಧ ಕಲೆಗಳಲ್ಲೊಂದಾದ ಯಕ್ಷಗಾನ ಹಲವು ವೈಶಿಷ್ಟ್ಯಗಳಿಗೆ ಹೆಸರಾಗಿದೆ. ಇಲ್ಲಿನ ನೃತ್ಯ, ಹಾಡು, ಮಾತುಗಾರಿಕೆ, ವೇಷಭೂಷಣಕ್ಕೆ ಅದರದ್ದೇ ಪರಂಪರೆಯಿದೆ. ಇಲ್ಲಿ […]