ಸಹಜ್ ಕೆ.ವಿ. ಅವರಿಗೆ ಎನ್ಐಟಿಕೆ ಯಿಂದ ಡಾಕ್ಟರೇಟ್ ಪದವಿ

Friday, November 10th, 2023
Sahaj-KV

ಮಂಗಳೂರುಃ ಇಲ್ಲಿನ ಪ್ರತಿಷ್ಠಿತ ನೇಶನಲ್ ಇನ್ಸಿಟ್ಯೂಟ್ ಆಪ್ ಟೆಕ್ನಲಾಜಿ- ಕರ್ನಾಟಕ ( ಎನ್ಐಟಿಕೆ ) ಜಲ ಸಂಬಂಧಿ ಸಂಶೋಧನೆಗಾಗಿ ಸಹಜ್ ಕೆ.ವಿ ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಗಿದೆ. ಜಲ ಸಂಶೋಧನೆ ಮತ್ತು ಸಾಗರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕೆ.ವಾರಿಜ ಅವರ ಉಪಸ್ಥಿತಿಯಲ್ಲಿ ನವೆಂಬರ್ 4ರಂದು ಸುರತ್ಕಲ್ ನಲ್ಲಿ ನಡೆದ ಎನ್ಐಟಿಕೆ 21ನೇ ಘಟಿಕೋತ್ಸವದಲ್ಲಿ ಸಹಜ್ ಕೆ.ವಿ. ಅವರಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು. ಸಹಜ್ ಅವರು ಇಲ್ಲಿನ ಕೊಟ್ಟಾರ ಪಡುಬೆಟ್ಟು ಕಾಂತಪ್ಪ […]

ದೇವದಾಸ್ ಕಾಪಿಕಾಡ್, ಹೇಮಾವತಿ ಹೆಗ್ಡೆ, ಹರಿಕೃಷ್ಣ ಪುನರೂರು ಅವರಿಗೆ ಗೌರವ ಡಾಕ್ಟರೇಟ್

Thursday, April 21st, 2022
doctorate

ಮಂಗಳೂರು : ತುಳು ಚಲನ ಚಿತ್ರ ನಟ, ರಂಗ ಭೂಮಿ ಕಲಾವಿದ ತೆಲಿಕೆದ ಬೊಳ್ಳಿ ಖ್ಯಾತಿಯ ದೇವದಾಸ್ ಕಾಪಿಕಾಡ್ ಅವರು ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆಯಾಗಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಕೊಡ ಮಾಡುವ ಈ ಪುರಸ್ಕಾರಕ್ಕೆ ತುಳು ನಾಟಕ ಹಾಗೂ ಸಿನಿಮಾ ಕ್ಷೇತ್ರದ ಸಾಧನೆಗಾಗಿ ಕಾಪಿಕಾಡ್ ಅವರನ್ನು ಆಯ್ಕೆ ಮಾಡಲಾಗಿದೆ. ಮಂಗಳೂರಿ ವಿಶ್ವ ವಿದ್ಯಾನಿಲಯದ ೪೦ನೇ ವರ್ಷದ ವಾರ್ಷಿಕ ಕೊನ್ವೊಕೇಷನ್ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಿ ವಿಶ್ವ ವಿದ್ಯಾನಿಲಯ ಗೌರವಿಸಲಿದೆ. ಇವರ ಜೊತೆಗೆ ಶಿಕ್ಷಣ ಹಾಗೂ ಸಾಮಾಜಿಕ ಸೇವೆಗಾಗಿ […]

ಅರುಣ್ ಉಳ್ಳಾಲ್ ‌ರವರ ‘ಭಗವತಿ ಆರಾಧನೆ- ಸಾಂಸ್ಕೃತಿಕ ಅಧ್ಯಯನ’ಕ್ಕೆ ಡಾಕ್ಟರೇಟ್

Tuesday, April 13th, 2021
Arun Ullal

ಉಳ್ಳಾಲ : ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಅರುಣ್ ಉಳ್ಳಾಲ್ ‌ರವರು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗಪ್ಪ ಗೌಡ ಆರ್. ಇವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ‘ಭಗವತಿ ಆರಾಧನೆ- ಸಾಂಸ್ಕೃತಿಕ ಅಧ್ಯಯನ’ ಎಂಬ ಪಿಹೆಚ್ ಡಿ. ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಉನ್ನತ ‘ಡಾಕ್ಟರೇಟ್’ ಪದವಿ ನೀಡಿ ಗೌರವಿಸಿದೆ. ತೊಕ್ಕೊಟ್ಟಿನ ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ನಾಗೇಶ್ ತೊಕ್ಕೊಟ್ಟು ಮತ್ತು ದಿವ್ಯಾ ನಾಗೇಶ್ ದಂಪತಿಗಳ ಪುತ್ರರಾಗಿರುವ ಇವರು ಸದ್ಯ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಉಪನ್ಯಾಸಕರಾಗಿ […]

ಶಕ್ತಿ ಎಜುಕೇಶನ್ ಫೌಂಡೇಶನ್​ನ ಅಧ್ಯಕ್ಷ ಕೆ.ಸಿ. ನಾಯಕ್​ಗೆ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ : ಪ್ರೊ. ಪಿ. ಸುಬ್ರಹ್ಮಣ್ಯ

Wednesday, February 26th, 2020
KC-Nayak

ಮಂಗಳೂರು : ಶಿಕ್ಷಣ ರಂಗದಲ್ಲಿನ ಸೇವೆಯನ್ನು ಗುರುತಿಸಿ ಶಕ್ತಿ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷ ಕೆ.ಸಿ. ನಾಯಕ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ 38ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು. ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ.27ರಂದು ಕೊಣಾಜೆಯ ಮಂಗಳ ಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಮಧ್ಯಾಹ್ನ 3ಗಂಟೆಗೆ ನಡೆಯುವ 38ನೇ ಘಟಿಕೋತ್ಸವದಲ್ಲಿ ಈ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದರು. ಭಾರತ […]

ಕಡಬದ ಸೌಮ್ಯ ಪ್ರಸಾದ್​ಗೆ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ

Saturday, November 2nd, 2019
Sowmya-Prasad

 ಕಡಬ : ಮಂಗಳೂರಿನ ಕೆಎಂಎಫ್ ಡೈರಿಯ ಗುಣ ನಿಯಂತ್ರಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಡಬದ ಸೌಮ್ಯ ಪ್ರಸಾದ್ರವರು ಮಂಗಳೂರು ವಿ.ವಿಯ ಪ್ರೊ. ಭೋಜಪೂಜಾರಿ ಅವರ ಮಾರ್ಗದರ್ಶನದಲ್ಲಿ ‘ಸಿಂಥೆಟಿಕ್ ಆ್ಯಂಡ್ ಬಯಾಲಾಜಿಕಲ್ ಸ್ಟಡೀಸ್ ಆನ್ ಸಮ್ ನೈಟ್ರೋಜನ್ ಹೆಟಿರೋಸೈಕ್ಲಿಕ್ ಕಂಪೌಂಡ್ಸ್’ ಎಂಬ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಕಡಬದ ಕೋಡಿಂಬಾಳದ ಪಡೆಜ್ಜಾರಿನ ಶಾಲಾ ನಿವೃತ್ತ ಶಿಕ್ಷಕ ವಸಂತ ಗೌಡ ಪಡೆಜ್ಜಾರು ಮತ್ತು ಲಲಿತಾ ದಂಪತಿಯ ಪುತ್ರಿಯಾಗಿರುವ ಸೌಮ್ಯ ರವರು ಮಂಗಳೂರಿನ ಮಾಲಾಡಿ ನಿವಾಸಿ […]

ಬ್ರಾಯನ್ ಜೀವನ್ ಫರ್ನಾಂಡಿಸ್‌ಗೆ ಡಾಕ್ಟರೇಟ್

Thursday, March 7th, 2019
Brayan

ಮಂಗಳೂರು: ಬ್ರಾಯನ್ ಜೀವನ್ ಫರ್ನಾಂಡಿಸ್‌ರವರ ಎಲೆಕ್ಟ್ರಕಲ್ ಸ್ವಿಚ್ಚಿಂಗ್ ಕ್ಯಾರೆಕ್ಟರಿಸ್ಟಿಕ್ಸ್ ಆಂಡ್ ಥರ್ಮಲ್ ಪ್ರಾಪರ್ಟಿಸ್ ಆಫ್ ಟೆಲುರಿಯಂ ಬೇಸ್ಡ್ ಚಾಲ್ಕೋಜಿನೈಡ್ ಗ್ಲಾಸ್ಸಿ ಅಲೋಯ್ಸ್ ಎಂಬ ಮಹಾ ಪ್ರಬಂಧಕ್ಕೆ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ (ಎನ್‌ಐಟಿಕೆ) ಸುರತ್ಕಲ್ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಇವರು ಭೌತ ಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ. ಎನ್. ಕೆ. ಉದಯಶಂಕರ್‌ರವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ಯಶಸ್ವಿಯಾಗಿ ಮಂಡಿಸಿರುತ್ತಾರೆ. ಬ್ರಾಯನ್ ಜೀವನ್ ಫರ್ನಾಂಡಿಸ್ ಅವರು ಬಂಟ್ವಾಳ ತಾಲೂಕಿನ ಸೋರ್ನಾಡು ಶಾಲೆಯ ಮುಖ್ಯೋಪಾಧ್ಯಾಯ ರಾದ ಬೆನೆಡಿಕ್ಟ್ […]

ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರಿಗೆ ಡಾಕ್ಟರೇಟ್

Tuesday, October 16th, 2018
Balakrishna

ಕಾಸರಗೋಡು: ಇಲ್ಲಿನ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರು ಡಾ. ರಾಧಾಕೃಷ್ಣ ಎನ್. ಬೆಳ್ಳೂರು ಅವರ ಮಾರ್ಗದರ್ಶನದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ಸಮರ್ಪಿಸಿದ ‘ದ್ರಾವಿಡ ನವ್ಯ ಕಾವ್ಯ’ ಎಂಬ ಮಹಾಪ್ರಬಂಧವು ಡಾಕ್ಟರ್ ಆಫ್ ಫಿಲಾಸಫಿ ಪದವಿಗೆ ಅರ್ಹವಾಗಿದೆ ಎಂದು ಕಣ್ಣೂರು ವಿಶ್ವವಿದ್ಯಾನಿಲಯದ ಅಧಿಸೂಚನೆ ತಿಳಿಸಿದೆ. ಹೊಸಂಗಡಿ ಅವರು ದ್ರಾವಿಡ ನವ್ಯ ಕಾವ್ಯ ಸಂಶೋಧನೆಯ ಸಂದರ್ಭದಲ್ಲೇ ಲಂಡನ್ ವಿಶ್ವವಿದ್ಯಾನಲಿಯದ ಟಿಎಸ್ ಎಲಿಯಟ್ ಇಂಟರ್‌ನ್ಯಾಷನಲ್ ಸಮ್ಮರ್ ಸ್ಕೂಲ್ […]

ಡಾ.ಚಂದ್ರಶೇಖರ ಕಂಬಾರ, ಎ.ಬಿ.ಸುಬ್ಬಯ್ಯ ಹಾಗು ಡಾ.ಕದ್ರಿ ಗೋಪಾಲನಾಥ್ ರಿಗೆ ಮಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್

Thursday, February 21st, 2013
Mangalore University

ಮಂಗಳೂರು : ಫೆಬ್ರವರಿ 23ರಂದು ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮೂರು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ವಿಶ್ವವಿದ್ಯಾನಿಲಯವು ತೀರ್ಮಾನಿಸಿರುವುದಾಗಿ ಗುರುವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಿ ಉಪಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ತಿಳಿಸಿದರು. ಸಾಹಿತ್ಯದಲ್ಲಿನ ಸೇವೆಗಾಗಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ನಾಟಕಕಾರ ಡಾ.ಚಂದ್ರಶೇಖರ ಕಂಬಾರ, ಕ್ರೀಡೆಯಲ್ಲಿನ ಸಾಧನೆಗಾಗಿ ಹಿರಿಯ ಹಾಕಿ ಪಟು ಕೊಡಗಿನ ಎ.ಬಿ.ಸುಬ್ಬಯ್ಯ, ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಹೆಸರಾಂತ ಸ್ಯಾಕ್ಸೊಫೋನ್ ವಾದಕ ಡಾ.ಕದ್ರಿ […]