ಜಿಲ್ಲಾಧಿಕಾರಿ ವರ್ಗಾವಣೆ, ಗಿಡ ನೆಟ್ಟು ಸಂಭ್ರಮಾಚರಣೆ

Saturday, October 14th, 2017
kg jagadhish

ಮಂಗಳೂರು: ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ದಕ್ಷ ಅಧಿಕಾರಿಗಳು ಏಕಾಏಕಿ ವರ್ಗಾವಣೆಗೊಂಡಾಗ ಜನರು ಪ್ರತಿಭಟನೆ ನಡೆಸಿ, ಧರಣಿ ಕೂತ ಪ್ರಸಂಗಗಳು ನಡೆದಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ವರ್ಗಾವಣೆಯನ್ನು ಪರಿಸರ ಪ್ರೇಮಿಗಳು ಸಂಭ್ರಮಿಸಿದ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಕೆ. ಜಿ. ಜಗದೀಶ್ ಅವರನ್ನು ರಾಜ್ಯ ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಅವರ ಸ್ಥಾನಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ಶಶಿಕಾಂತ್ […]

ಕ್ವಾಲಿಟಿ ಮಾರ್ಕ್ ಲೋಗೊದೊಂದಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಿಡುಗಡೆ ಸಮಾರಂಭ

Thursday, October 12th, 2017
nandini milk

ಮಂಗಳೂರು: ಪ್ರತಿಷ್ಠಿತ ಕ್ವಾಲಿಟಿ ಮಾರ್ಕ್ ಲೋಗೊದೊಂದಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹೊರತಂದಿದ್ದು ಇದರ ಬಿಡುಗಡೆ ಸಮಾರಂಭ ಬುಧವಾರ ನಗರದಲ್ಲಿ ನಡೆಯಿತು. ಕ್ವಾಲಿಟಿ ಮಾರ್ಕ್‌ನೊಂದಿಗೆ ನಂದಿನಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಕೆಎಂಎಫ್ ಕ್ವಾಲಿಟಿ ಮಾರ್ಕ್‌ನ್ನು ಪಡೆಯುವ ಮೂಲಕ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡಿದೆ. ಹಾಲು ಉತ್ಪಾದನೆಯ ಮೂಲಕ ದೇಶ ಸ್ವಾವಲಂಬನೆ ಸಾಧಿಸಿದೆ. ಕೆಎಂಎಫ್ ಮೂಲಕ ರೈತರಿಗೆ ಹಾಗೂ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಿದೆ. […]

ವರ್ಗಾವಣೆ ಕುರಿತು ಹಬ್ಬಿದ್ದ ಸುದ್ದಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ಪಷ್ಟನೆ

Wednesday, July 27th, 2016
A-B-Ibrahim

ಮಂಗಳೂರು: ತಮ್ಮ ವರ್ಗಾವಣೆ ಕುರಿತು ಹಬ್ಬಿದ್ದ ಸುದ್ದಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ಪಷ್ಟನೆ ನೀಡಿದ್ದಾರೆ. ಎ.ಬಿ.ಇಬ್ರಾಹಿಂ ಅವರ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಡೆ ನೀಡಿದ್ದಾರೆ ಎಂಬ ಸುದ್ದಿಗಳನ್ನು ಅವರು ತಳ್ಳಿ ಹಾಕಿದ್ದಾರೆ. ಸೋಮವಾರ ಬೆಳಗ್ಗೆಯಿಂದ ಎ.ಬಿ.ಇಬ್ರಾಹಿಂ ಅವರ ವರ್ಗಾವಣೆಗೆ ತಡೆ ನೀಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಒನ್ ಇಂಡಿಯಾಗೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ‘ವರ್ಗಾವಣೆಗೆ ತಡೆ ನೀಡಿಲ್ಲ. ಡಾ.ಕೆ.ಜಿ.ಜಗದೀಶ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ’ ಎಂದು ಹೇಳಿದ್ದಾರೆ. ಕಳೆದ ವಾರ […]

ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Friday, February 5th, 2016
Chigurupade Temple

ಮಂಜೇಶ್ವರ : ಇತಿಹಾಸ ಪ್ರಸಿದ್ದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವವು ಫೆಬ್ರವರಿ 11ನೇ ಗುರುವಾರ ವಿವಿಧ ವೈದಿಕ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ. ಬೆಳಿಗ್ಗೆ ಗಂಟೆ 7ರಿಂದ ಉಷಃಕಾಲ ಪೂಜೆ, ಗಣಹೋಮ, ನವಕ ಕಲಶಾಭಿಷೇಕ, ಏಕಾದಶರುದ್ರಾಭಿಷೇಕ, ಮಧ್ಯಾಹ್ನ12ರಿಂದ ಮಹಾಪೂಜೆ, ಶ್ರೀದೇವರಬಲಿ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಗಂಟೆ ೮ಕ್ಕೆ ರಂಗಪೂಜೆ ,9ರಿಂದ ಭೂತಬಲಿ ಉತ್ಸವ, ದರ್ಶನಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಜರಗಲಿದೆ. […]