ಎಸ್.ಡಿ.ಎಂ. ಕಾಲೇಜಿನ ಮಾರಿಕಾಡು ನಾಟಕ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

Wednesday, January 3rd, 2018
SDM-college

ಉಜಿರೆ: ಚೆನ್ನೈನಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಭಾರತ ಅಂತರ ವಿ.ವಿ. ಯುವಜನೋತ್ಸವದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಮಾರಿಕಾಡು ನಾಟಕ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಡಾ. ಚಂದ್ರಶೇಖರ ಕಂಬಾರ ರಚಿಸಿದ ಮಾರಿಕಾಡು ನಾಟಕ ಮೂಲತಃ ವಿಲಿಯಂ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ನಾಟಕದ ಕನ್ನಡ ರೂಪಾಂತರವಾಗಿದೆ. ಎಸ್.ಡಿ.ಎಂ. ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಶಿವಶಂಕರ್ ಮಾರ್ಗದರ್ಶನದಲ್ಲಿ ೧೩ ವಿದ್ಯಾರ್ಥಿಗಳ ತಂಡ ನಾಟಕ ಪ್ರದರ್ಶನ ನೀಡಿದೆ. ವಿದ್ಯಾರ್ಥಿಗಳಾದ ಅನ್ವಿತ್ ಗೌಡ, ಅಂಕಿತ್ ಆಚಾರ್ಯ, ಶಶಿಪ್ರಭಾ, ಸಂಪದ ಎಸ್. […]

ಡಾ.ಚಂದ್ರಶೇಖರ ಕಂಬಾರ, ಎ.ಬಿ.ಸುಬ್ಬಯ್ಯ ಹಾಗು ಡಾ.ಕದ್ರಿ ಗೋಪಾಲನಾಥ್ ರಿಗೆ ಮಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್

Thursday, February 21st, 2013
Mangalore University

ಮಂಗಳೂರು : ಫೆಬ್ರವರಿ 23ರಂದು ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮೂರು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ವಿಶ್ವವಿದ್ಯಾನಿಲಯವು ತೀರ್ಮಾನಿಸಿರುವುದಾಗಿ ಗುರುವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಿ ಉಪಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ತಿಳಿಸಿದರು. ಸಾಹಿತ್ಯದಲ್ಲಿನ ಸೇವೆಗಾಗಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ನಾಟಕಕಾರ ಡಾ.ಚಂದ್ರಶೇಖರ ಕಂಬಾರ, ಕ್ರೀಡೆಯಲ್ಲಿನ ಸಾಧನೆಗಾಗಿ ಹಿರಿಯ ಹಾಕಿ ಪಟು ಕೊಡಗಿನ ಎ.ಬಿ.ಸುಬ್ಬಯ್ಯ, ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಹೆಸರಾಂತ ಸ್ಯಾಕ್ಸೊಫೋನ್ ವಾದಕ ಡಾ.ಕದ್ರಿ […]