ಜೀವನ ಪದ್ಧತಿಯ ಆತಂಕದ ನೆಲೆಗಳು- ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

Sunday, November 18th, 2018
Narahalli Balasubrahmanya

ಮೂಡಬಿದ್ರಿ  : ಭಾರತೀಯರ ಬದುಕಿನಲ್ಲಿ ಆಧುನಿಕ ಶಿಕ್ಷಣ ತನ್ನ ಪ್ರಭಾವವನ್ನು ಅತಿಯಾಗಿ ಬೀರುತ್ತಿದೆ, ಇದರಿಂದಾಗಿ ಇಂದು ನಮ್ಮ ಸುತ್ತಲಿನ ಪರಿಸರ, ಸಂಸ್ಕೃತಿ, ಕಲೆ, ಸಾಹಿತ್ಯ ಎಲ್ಲವನ್ನೂ ಕೀಳರಿಮೆಯಿಂದ ನೋಡುವಂತಾಗಿದೆ ಎಂದು ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ‘ಜೀವನ ಪದ್ಧತಿಯ ಆತಂಕದ ನೆಲೆಗಳು ಎಂಬ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಬದುಕಿನ ವೃತ್ತಿಯು ನಮ್ಮ ಇಡೀ ಜೀವನ ಪದ್ಧತಿಯ ಬದಲಾವಣೆಗೆ ಕಾರಣವಾಗುತ್ತಾ ಹೋಗುತ್ತದೆ. ಈ ರೀತಿಯ ಬದಲಾವಣೆ […]