ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳದ ಜಮೀರ್ ಸಂವಿಧಾನಕ್ಕೂ ಬೆಲೆ ನೀಡದ ಸಚಿವ : ಡಾ.ಭರತ್ ಶೆಟ್ಟಿ ವೈ

Friday, November 17th, 2023
Bharath Shetty

ಮಂಗಳೂರು : ಎಪಿಜೆ ಅಬ್ದುಲ್ ಕಲಾಂ ಅವರಂತಹ ಶ್ರೇಷ್ಟ ರನ್ನು ರಾಷ್ಟ್ರಪತಿ ಮಾಡಿದ ಬಿಜೆಪಿ, ಸಂವಿಧಾನಾತ್ಮಕ ಹುದ್ದೆಯನ್ನು ಹೊಂದಿರುವ ಶಾಸಕ ಯು.ಟಿ ಖಾದರ್ ಅವರಿಗೂ, ಭಾರತೀಯ ಜನತಾ ಪಾರ್ಟಿ ಗೌರವವನ್ನು ಕೊಡುತ್ತದೆ. ಜಾತಿ ಮತ ಭೇದವನ್ನು ಪರಿಗಣಿಸಿಲ್ಲ. ಕಾಂಗ್ರೆಸ್ನ ವಲಸೆ ನಾಯಕ ಸಚಿವ ಜಮೀರ್ ಅಹ್ಮದ್ ಸದಾ ತನ್ನ ಕೋಮಿನ ಜನರನ್ನು ಹಿಂದುಗಳ ವಿರುದ್ದ ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೋಮುವಾದಿ ಎಂದು ಬಹಿರಂಗವಾಗಿದೆ ಎಂದು ಕರೆಯಲು ಡಾ. ಭರತ್ ಶೆಟ್ಟಿ ಟೀಕಿಸಿದ್ದಾರೆ. ಬಿಜೆಪಿ‌ಯು ಶಾನ್ವಾಝ್ ,ಅಬ್ಬಾಸ್ […]

ಪಚ್ಚನಾಡಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಪೂರ್ಣ : ಶಾಸಕ ಡಾ. ಭರತ್ ಶೆಟ್ಟಿ ಭೇಟಿ

Monday, November 22nd, 2021
Bharath Shetty

ಮಂಗಳೂರು  : ಪಚ್ಚನಾಡಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಹಾಗೂ ಬೊಂದೇಲ್ – ಮಂಗಳ ಜ್ಯೋತಿ ಸಂಪರ್ಕಿಸುವ  ಪಚ್ಚನಾಡಿ ಮುಖ್ಯ ರಸ್ತೆ,  ಎರಡೂ ಬದಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ವೇಗ ಪಡೆದು ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಲೋಕಾರ್ಪಣೆಗೊಳಿಸುವ ಮುನ್ನ ಸಂಸದರಾದ ನಳೀನ್ ಕುಮಾರ್ ಕಟೀಲ್ ಅವರ  ಸೂಚನೆ ಮೇರೆಗೆ ಪರಿಶೀಲನೆ ನಡೆಸಲು ಸೋಮವಾರ ದಂದು ಪಚ್ಚನಾಡಿ ರೈಲ್ವೇ ಬ್ರಿಡ್ಜ್ ಕಾಮಗಾರಿ ಪ್ರದೇಶಕ್ಕೆ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈ ರವರು ಭೇಟಿ ನೀಡಿದರು. ಕಾಮಗಾರಿ […]

ಡಾ.ಭರತ್ ಶೆಟ್ಟಿಯವರಿಂದ ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ; ಸಚಿವ ಅಂಗಾರ ಉಪಸ್ಥಿತಿ

Monday, June 28th, 2021
Bharath Shetty

ಮಂಗಳೂರು  : ಕೊರೊನಾ ವಿರುದ್ದದ ಹೋರಾಟದಲ್ಲಿ ಆಶಾಕಾರ್ಯಕರ್ತರು, ಅಂಗನವಾಡಿ, ಎನ್‌ಎನ್‌ಎಂ ಗಳು, ದಾದಿಯರು, ವೈದ್ಯರ ಕೆಲಸ ಜೀವವುಳಿಸುವ ಪುಣ್ಯದ ಕಾರ್ಯವಾಗಿದ್ದು, ಇವರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಎಂದು ಮೀನುಗಾರಿಕಾ, ಬಂದರು ಸಚಿವ ಅಂಗಾರ ನುಡಿದರು. ಅವರು ಬೈಕಂಪಾಡಿ ವಿದ್ಯಾರ್ಥಿ ಸಂಘ, ಜಿಲ್ಲಾಡಳಿತ, ರೆಡ್‌ಕ್ರಾಸ್ ಸಹಯೋಗದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಲಸಿಕೆ ಮೇಳದಲ್ಲಿ ಭಾಗವಹಿಸಿ ಕೊರೊನಾ ವಾರಿಯರ್ಸ್ಗಳನ್ನು ಸಮ್ಮಾನಿಸಿ ಮಾತನಾಡಿದರು. ಕೊರೊನಾ ವಿರುದ್ದದ ಹೋರಾಟದಲ್ಲಿ ಮನೆ ಮನೆಗೆ ತೆರಳಿ ಅವರನ್ನು ಗುರುತಿಸಿ ಕೆಲಸ ಮಾಡುವವರು ಕೆಳಸ್ತರದಲ್ಲಿರುವ ಕೊರೊನಾ […]

ವೈದ್ಯರ ನಡೆ ಹಳ್ಳಿ ಕಡೆ ಅಭಿಯಾನಕ್ಕೆ ಗಂಜಿಮಠದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ

Wednesday, June 2nd, 2021
Bharath Shetty

ಮಂಗಳೂರು  : ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಟಾಸ್ಕ್ ಪೋರ್ಸ್ ಸದಸ್ಯರು ತಮ್ಮ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆ ಸಂಪರ್ಕ ಮಾಡಬೇಕು. ಅಲ್ಲಿ ಕೋವಿಡ್ 19 ಸೋಂಕಿತರು ಆಸ್ಪತ್ರೆಗೆ ತೆರಳದೆ ಮನೆಯಲ್ಲಿಯೇ ಇದ್ದು ರೋಗ ಗಂಭೀರವಾದಾಗ ಕೊನೆಯ ಹಂತದಲ್ಲಿ ವೈದ್ಯರನ್ನು ಕಾಣುವುದರಿಂದ ಸಾವು, ನೋವು ಪ್ರಮಾಣ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಅವರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರಕಾರದ ಜಾರಿಗೆ ತಂದಿರುವ ವೈದ್ಯರ ನಡೆ ಹಳ್ಳಿಯ ಕಡೆ ಅಭಿಯಾನವನ್ನು ಜನರಿಗೆ ತಲುಪುವಲ್ಲಿ ನಾವೆಲ್ಲ ಕೆಲಸ ಮಾಡಬೇಕು ಎಂದು ಮಂಗಳೂರು […]

ದಾಖಲೆ ನೀಡಲು ಸತಾಯಿಸುತ್ತಿದ್ದ ದೂರು, ತಹಶೀಲ್ದಾರ್ ಕಛೇರಿಗೆ ಡಾ.ಭರತ್ ಶೆಟ್ಟಿ ದಿಢೀರ್ ಭೇಟಿ

Monday, September 28th, 2020
Bhrath Shetty

ಮಂಗಳೂರು  : ತಾಲೂಕು ಕಛೇರಿಗೆ ದಿಢೀರ್ ಭೇಟಿ ನೀಡಿದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ಜನರಿಗೆ ದಾಖಲೆ ಒದಗಿಸದೆ ಸತಾಯಿಸುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆರ್ ಟಿ ಸಿ ಸಹಿತ ದಾಖಲೆಗಳು ಸಿಗುತ್ತಿಲ್ಲ ಎಂಬ ಜನರ ದೂರಿಗೆ ಸ್ಪಂದಿಸಿ ದಿಢೀರ್ ದಾಖಲೆ ಪರಿಶೀಲಿಸಿದ ಅವರು ಸರಿಯಾದ ಸಮಯದಲ್ಲಿ ದಾಖಲೆ ನೀಡದೆ ಜನರಿಗೆ ಸತಾಯಿಸುತ್ತಿದ್ದೀರಿ. ಜನ ಪ್ರತಿನಿಧಿಯಾಗಿ ನನಗೆ ಜನರ ಕರೆ ಬರುತ್ತಿದೆ. ಏನು ಮಾಡುತ್ತಿದ್ದೀರಿ, ಒಂದಾ ಕೆಲಸ ಮಾಡಿಸಿ ಇಲ್ಲದಿದ್ದರೆ […]

ಮಂಗಳೂರು ಉತ್ತರ ಶಾಸಕರಿಗೆ ಕೋವಿಡ್ ಸೋಂಕು ದೃಢ

Thursday, July 2nd, 2020
covid19

ಮಂಗಳೂರು : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕೋವಿಡ್ ಸೋಂಕು ದೃಢ ಪಟ್ಟ ವಿಚಾರವನ್ನು ಹಂಚಿಕೊಂಡಿದ್ದು, ಸಾರ್ವಜನಿಕರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ , ಮಾಸ್ಕ್ , ಹಾಗೂ ಕೈಗಳನ್ನು ತೊಳೆಯುವಂತೆ ಮನವಿ ಮಾಡಿಕೊಂಡಿದ್ದಾರೆ. ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು ಶಾಸಕರು ಸ್ವಯಂ ಪ್ರೇರಿತವಾಗಿ ತಪಾಸಣೆ ನಡೆಸಿದ ವೇಳೆ ದೃಢಪಟ್ಟಿದೆ. ಶಾಸಕರು ನಗರದಲ್ಲಿ ಹಲವಾರು […]

ಮಂಗಳೂರು : ತಪಾಸಣೆ ನಡೆಸಿ 243 ಕಾರ್ಮಿಕರನ್ನು ಹೊರ ಜಿಲ್ಲೆಗಳಿಗೆ ರವಾನೆ

Friday, May 1st, 2020
Labourers

ಮಂಗಳೂರು  :  ಗುರುಪುರ ಹಾಗೂ ಸುರತ್ಕಲ್‌ ಹೋಬಳಿಯ ಗ್ರಾಮಾಂತರ ಪ್ರದೇಶದಲ್ಲಿದ್ದ ಹೊರ ಜಿಲ್ಲೆಯ ಕಾರ್ಮಿಕರನ್ನು ಅವರ ಊರುಗಳಿಗೆ ಒಟ್ಟು 35 ಬಸ್ಸುಗಳಲ್ಲಿ ಗುರುಪುರ ಕೈಕಂಬ ಹಾಗೂ ಬಜಪೆ ಯಿಂದ ಬುಧವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ರಾತ್ರಿ ವೇಳೆಯಲ್ಲಿ ಕೊಂಡೊಯ್ಯಲಾಯಿತು. ಬಜಪೆಯಲ್ಲಿ ಸುರತ್ಕಲ್‌ ಹೋಬಳಿಯ 11 ಬಸ್ಸುಗಳಲ್ಲಿ 243 ಕಾರ್ಮಿಕರು, ಗುರುಪುರ ಹೋಬಳಿಯಿಂದ 24 ಬಸ್ಸುಗಳಲ್ಲಿ 506 ಕಾರ್ಮಿಕರನ್ನು ಅವರ ಗ್ರಾಮಗಳಿಗೆ ಕೊಂಡೊಯ್ಯಲಾಯಿತು. ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದ ಬಳಿಕ ಅವರಿಗೆ ಮಾಸ್ಕ್ ನೀಡಿ, ಬಸ್‌ಗಳಲ್ಲಿ ಕೂಡ […]

ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ, ಮಂಗಳೂರು ಬಿಜೆಪಿ ಕಚೇರಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮ

Monday, December 9th, 2019
bjp victory

ಮಂಗಳೂರು :  ಕೊಡಿಯಾಲ್ ಬೈಲ್ ನಲ್ಲಿನ ದ.ಕ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸೋಮವಾರದಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ ಬಿಜೆಪಿ ಗೆಲುವು ನಿರೀಕ್ಷೆ ಇತ್ತು. ಇನ್ನೂ ಮುಂದೆ ಸುಭದ್ರವಾದ ಸರಕಾರ ಸಿಗಲಿದೆ. ಜನಪರ ಅಭಿವೃದ್ಧಿ ಕೆಲಸ ಮಾಡಲು ಶಕ್ತಿ ಸಿಕ್ಕಿದೆ ಎಂದರು.

ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ ಮುನ್ನಡೆ, ಕಾಂಗ್ರೆಸ್ ಗೆ ಭಾರೀ ಹಿನ್ನಡೆ

Tuesday, May 15th, 2018
janatha-party

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದೆ. ಜಿಲ್ಲೆಯ 8 ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ ಅಭ್ಯರ್ಥಿಗಳು ಅಚ್ಚರಿಯ ರೀತಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಜಿದ್ದಾಜಿದ್ದಿನಿಂದ ಕೂಡಿದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಜೀವ ಮಠಂದೂರು ಕಾಂಗ್ರೆಸಿನ ಶಕುಂತಳಾ ಶೆಟ್ಟಿ ವಿರುದ್ಧ 1,102 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕ ಎಸ್. ಅಂಗಾರ ಕಾಂಗ್ರೆಸಿನ ರಘು ವಿರುದ್ಧ 2034 ಮತಗಳಿಂದ ಮುಂದಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಭರತ್ ಶೆಟ್ಟಿ 2 ಸಾವಿರ […]

ಕಾಂಗ್ರೆಸ್ ಸರಕಾರ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದೆ : ಭರತ್ ಶೆಟ್ಟಿ

Friday, April 27th, 2018
Bharath Shetty

ಸುರತ್ಕಲ್ : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ ಭರತ್ ಶೆಟ್ಟಿಯವರು ಶುಕ್ರವಾರ  ಕೋಡಿಕಲ್, ಕುಳೂರು, ಇನ್ನಿತರ ಭಾಗಗಳಿಗೆ ಬೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿ, “ಯುವಜನರ ಬೆಂಬಲ ನನಗೆ ಇನ್ನಷ್ಟು ಶಕ್ತಿ ತುಂಬಿದೆ, ಕಾಂಗ್ರೆಸ್ ಸರಕಾರ ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದೆ ಮತ್ತು ನನಗೆ ನನ್ನ ಹಿಂದೂ ಸಹೋದರ ಸಹೋದರಿಯರ ಸುಖ ಶಾಂತಿಯೇ ಮುಖ್ಯ” ಎಂದು ಹೇಳಿದರು. ಕೋಡಿಕಲ್ ನ ಗಣಪತಿ ದೇವಸ್ಥಾನದಲ್ಲಿ ದೇವರ ಆಶಿರ್ವಾದ ಪಡೆದು ನಂತರ ಹಿರಿಯರ ಆಶಿರ್ವಾದ […]