ಲ್ಯಾಂಡ್ ಲಿಂಕ್ಸ್ ಗೆ ನರ್ಮ್ ಬಸ್ ಸಂಚಾರ ಆರಂಭ, ಶಾಸಕ ಡಾ.ಭರತ್ ಶೆಟ್ಟಿ ವೈ ಹಸಿರು ನಿಶಾನೆ

Wednesday, September 29th, 2021
Landlinks-Bus

ಕೊಂಚಾಡಿ: ಲ್ಯಾಂಡ್ ಲಿಂಕ್ಸ್  ಪ್ರದೇಶದ ಜನರ ಬಹುದಿನದ ಬೇಡಿಕೆಯಾದ ಸರಕಾರಿ ಬಸ್ ಓಡಾಟದ ಕನಸು ನನಸಾಗಿದೆ. ಬುಧವಾರ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ನರ್ಮ್ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಅವರು ಈ ಭಾಗದಲ್ಲಿ ಶಾಲಾ ವಿದ್ಯಾರ್ಥಿಗಳು, ನೌಕರಿಗೆ ಹೋಗುವ ಜನರಿಗೆ ಅನುಕೂಲವಾದ ಸಮಯದಲ್ಲಿ ನರ್ಮ್ ಬಸ್ ಸಂಚಾರ ಅವಕಾಶ ನೀಡಲಾಗಿದೆ.ಪ್ರತೀ 45 ನಿಮಿಷಕ್ಕೆ ನರ್ಮ್ ಬಸ್ ಓಡಾಟ ನಡೆಸಲಿದೆ.ಇದೀಗ ಪ್ರಾಯೋಗಿಕವಾಗಿ ಸಮಯದಲ್ಲಿ ಓಡಾಟ ನಡೆಸಲಿದೆ.ಬಳಿಕ ಜನರ ಬೇಡಿಕೆ ತಕ್ಕಂತೆ ಸಮಯ […]

ಬೆಳೆ ಸಮೀಕ್ಷೆ ವಿನೂತನ ಕೃಷಿ ಆ್ಯಪ್ ಬಿಡುಗಡೆಗೊಳಿಸಿದ ಡಾ.ಭರತ್ ಶೆಟ್ಟಿ ವೈ

Tuesday, August 24th, 2021
krishi App

ಸುರತ್ಕಲ್ : ರೈತರಿಗೆ ಮಾಹಿತಿ ನೀಡುವ ಸಲುವಾಗಿ,ಬೆಳೆ ಸಮೀಕ್ಷೆ, ಹಾನಿಯಾದಲ್ಲಿ ಪರಿಹಾರ ಪಡೆಯಲು ಅನುಕೂಲವಾಗುವಂತೆ ದಾಖಲೀಕರಣಕ್ಕೆ ಸರಕಾರ ಹೊಸ ತಂತ್ರಜ್ಞಾನ ಬಳಸಿ ಕೃಷಿ ಆ್ಯಪ್ ಹೊರ ತಂದಿದ್ದು ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಮಾಹಿತಿ ನೀಡುವ ಮೂಲಕ ಇದರ ಸದುಪಯೋಗ ಆಗಬೇಕಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು. ಅವರು ಕಾವೂರಿನಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತ ತಾನು ಬೆಳೆಯುವ ಬೆಳೆಯ ಬಗ್ಗೆ ಈ ಆಪ್‍ನಲ್ಲಿ ಹಾಕಿ ಮಾಹಿತಿ […]

ತಾಲಿಬಾನ್ ತರ ಯೋಚಿಸಿದರೆ, ಮಟ್ಟ ಹಾಕುವುದಕ್ಕೂ ಗೊತ್ತಿದೆ: ಭರತ್ ಶೆಟ್ಟಿ ವೈ

Sunday, August 15th, 2021
Bharath Shetty

ಮಂಗಳೂರು : ತಾಲಿಬಾನ್ ಮತಾಂಧ  ಸಂಘಟನೆಯಿಂದ ಪ್ರೇರಿತರಾಗಿ ಆಂತರಿಕವಾಗಿ ನಮ್ಮ ದೇಶದಲ್ಲಿಯೂ ಕಾನೂನು ಮುರಿಯುವ ದುಸ್ಸಾಹಕ್ಕೆ ಕೈ ಹಾಕಿದರೆ  ನಿಮ್ಮ ಮತಾಂಧ ತೆಯನ್ನು  ಮಟ್ಟ ಹಾಕಲು  ಸರಕಾರ ಬದ್ದವಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಎಚ್ಚರಿಸಿದ್ದಾರೆ. ಕಬಕದಲ್ಲಿ ಸ್ವಾತಂತ್ರ್ಯ ರಥವನ್ನು ತಡೆದು ವೀರ ಸಾವರ್ಕರ್ ಫೋಟೋ ತೆಗೆದು ಮತಾಂಧ ಟಿಪ್ಪು ಫೋಟೋ ಹಾಕಬೇಕೆಂಬ ಎಸ್ ಡಿ ಪಿ ಐ ಕಾರ್ಯಕರ್ತರ ಕಾನೂನು ಭಂಜಕ ಕೃತ್ಯವನ್ನು ಸಹಿಸುವುದಿಲ್ಲ. ದೇಶದಲ್ಲಿ ಕಾನೂನು,ಪಾಲಿಸಿ ಅದನ್ನು  ಗೌರವಿಸಿ ಬದುಕಬೇಕು. ಅಫ್ಘಾನಿಸ್ತಾನ್ ತಾಲಿಬಾನಿಗಳ […]

ಲಂಡನ್ ನಿಂದ ಔಷಧ ತರಿಸಿ ಬ್ಲ್ಯಾಕ್ ಫಂಗಸ್ ರೋಗಿಗಳ ಪ್ರಾಣ ಉಳಿಸಿದ ಶಾಸಕ ಡಾ.ಭರತ್ ಶೆಟ್ಟಿ ವೈ

Tuesday, June 8th, 2021
bharath shetty

ಸುರತ್ಕಲ್ : ಉಳ್ಳವರು ಲಸಿಕೆಯನ್ನು ಮಿತವ್ಯಯ ದರ ನೀಡಿ ಹಾಕಿಕೊಂಡರೆ ಬಡವರಿಗೆ ಲಸಿಕೆ ಸಿಗಲು ಸಾಧ್ಯವಿದ್ದು,ಈ ನಿಟ್ಟಿನಲ್ಲಿ ಲಾರ್ಡ್ ಕೃಷ್ಣ ಎಸ್ಟೇಟ್ ನಿವಾಸಿಗಳು ಮಾಡಿರುವ ಲಸಿಕೆ ಅಭಿಯಾನ ಮಾದರಿಯಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು. ಇಲ್ಲಿನ ವೆಲ್ಫೇರ್ ಎಸೋಸಿಯೇಷನ್ ಆಯೋಜಿಸಿದ ಲಸಿಕೆ ಅಭಿಯಾನದಲ್ಲಿ ಮಾತನಾಡಿದ ಅವರು ಲಸಿಕೆ ಪಡೆದುಕೊಂಡರೂ ಕೋವಿಡ್ ಬರುವ ಸಾಧ್ಯತೆಯಿದ್ದರೂ ಜೀವಕ್ಕೆ ಹಾನಿಯಾದ ಪ್ರಕರಣಗಳು ವರದಿ ಆಗಿಲ್ಲ. ಹೀಗಾಗಿ ಲಸಿಕೆ ಪಡೆದುಕೊಳ್ಳುವುದು ಅಗತ್ಯ ಎಂದು ನುಡಿದರು. . ಆರ್ ಎಸ್ ಎಸ್ ಮುಖಂಡರಾದ ಪ್ರಕಾಶ್ […]

ಎಂಸಿಎಫ್ ಸಿಎಸ್ಆರ್ ನಿಧಿಯಿಂದ ನವೀಕರಣಗೊಂಡ ಶಾಲಾ ಕಟ್ಟಡ ಉದ್ಘಾಟನೆ

Thursday, December 17th, 2020
school

  ಕಾವೂರು : ಸರಕಾರಿ ಶಾಲೆಗೆ ಮೂಲಸೌಕರ್ಯ ಒದಗಿಸಲು ನಾವು ಶ್ರಮ ವಹಿಸುತ್ತೇವೆ.ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಖಾಸಗೀ ಶಾಲೆ ಗಳಿಗಿಂತ ಸರಕಾರಿ ಶಾಲೆ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಡಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಶಿಕ್ಷಕರಿಗೆ ಕಿವಿ ಮಾತು ಹೇಳಿದ್ದಾರೆ. ಮರಕಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣ ಕಟ್ಟಡವನ್ನು ಎಂಸಿಎಫ್ ಸಿಎಸ್ಆರ್ ನಿಧಿಯಿಂದ ನವೀಕರಣಗೊಳಿಸಿದ್ದು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಶಾಲೆಯಲ್ಲಿ ಇಂದು 260 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.ನಗರ ಪ್ರದೇಶದಲ್ಲಿ ಇದು […]

ಬಡವರ್ಗಕ್ಕೆ ಆರ್ಥಿಕ ನೆರವು ನೀಡುವ ಮುಂಚೂಣಿ ಸಂಘಟನೆ ಬಿರುವೆರ್ ಕುಡ್ಲ

Tuesday, December 1st, 2020
ಬಡವರ್ಗಕ್ಕೆ ಆರ್ಥಿಕ ನೆರವು ನೀಡುವ ಮುಂಚೂಣಿ ಸಂಘಟನೆ ಬಿರುವೆರ್ ಕುಡ್ಲ

ಮಂಗಳೂರು : ಕಳೆದ ಆರು ವರ್ಷಗಳಲ್ಲಿ ಜಾತಿ ಬೇದವಿಲ್ಲದೆ ನೂರಾರು ಕುಟುಂಬಗಳಿಗೆ 1.80 ಕೋಟಿಗೂ ಮಿಕ್ಕಿ ಆರ್ಥಿಕ  ನೆರವು ನೀಡುವ ಮೂಲಕ ಅಲ್ಪಾವಧಿಯಲ್ಲಿ ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಸಂಘಟನೆ ಮುಂಚೂಣಿಯಲ್ಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಮಂಗಳೂರಿನಲ್ಲಿ ಸಂಘಟನೆ ವತಿಯಿಂದ ಮೂರು ಕುಟುಂಬಗಳಿಗೆ ಆರ್ಥಿಕ  ನೆರವು ವಿತರಿಸಿ ಮಾತನಾಡಿದರು. ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ಅನಾರೋಗ್ಯ ಪೀಡಿತರಿಗೆ, ಮಕ್ಕಳ ಶಿಕ್ಷಣಕ್ಕಾಗಿ, ಅಂಗವಿಕಲರಿಗೆ ಸಲಕರಣೆ ಸಹಿತ ಹಲವು ಸೌಲಭ್ಯವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಹಿತ ಎಲ್ಲಾ […]

ದ್ವೀಪ ಪ್ರದೇಶ ಬಡ್ಡ ಕುದ್ರು ನಿವಾಸಿಗಳಿಂದ ತೂಗು ಸೇತುವೆಗೆ ಮನವಿ, ಡಾ.ಭರತ್ ಶೆಟ್ಟಿ ವೈ ಸ್ಪಂದನೆ

Sunday, October 4th, 2020
Badda Kudru

ಕಾವೂರು : ದ್ವೀಪ ಪ್ರದೇಶ ಬಡ್ಡ ಕುದ್ರುವಿಗೆ ತೂಗು ಸೇತುವೆ ಮಾಡಿಕೊಡಿ, ನಮ್ಮ ಹಿರಿಯ ಕಾಲದಿಂದಲೂ ಇಲ್ಲಿಯೇ ಬದುಕು ಸಾಗಿಸುತ್ತಿದ್ದೇವೆ. ಅನಾರೋಗ್ಯ ಬಂದರೆ ಚಿಕಿತ್ಸೆಗೂ ಪರದಾಟ, ಮಕ್ಕಳಿಗೆ ಶಾಲೆಗೆ ತೆರಳಲು ಸಮಸ್ಯೆ, ಮಳೆಗಾಲದಲ್ಲಿ ನದಿ ಉಕ್ಕಿ ಹರಿದಾಗ ದೋಣಿಯಲ್ಲೂ ದಾಟಲು ಆಗದ ಸ್ಥಿತಿ. ಕಳೆದ ಐವತ್ತು ವರ್ಷಗಳಲ್ಲಿ ಯಾರೊಬ್ಬರೂ ನಮ್ಮ ಅಹವಾಲು ಆಲಿಸಲು ಬರಲಿಲ್ಲ.ನೀವಾದರೂ ಮಾಡಿಕೊಡಿ. ಇದು ದ್ವೀಪ ಪ್ರದೇಶದ ನಿವಾಸಿಗಳ ಮನವಿ. ಮಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟ ಮರಕಡ ವಾರ್ಡ್ 14 ರ ಬಡ್ಡಕುದ್ರುವಿಗೆ ಶನಿವಾರ […]

ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ ಅನುದಾನದಲ್ಲಿ ಕುಂಜತ್‍ಬೈಲ್ -ಪಚ್ಚನಾಡಿ ವಾರ್ಡ್ ಅಭಿವೃದ್ಧಿಗೆ 14 ಲಕ್ಷ ಬಿಡುಗಡೆ

Saturday, March 21st, 2020
Y Bharath shetty

ಮಂಗಳೂರು : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ ಇವರ 2018-19ನೇ ಸಾಲಿನ ಅನುದಾನದಲ್ಲಿ ಕುಂಜತ್‍ಬೈಲ್ ಉತ್ತರ ಜ್ಯೋತಿನಗರ ಹನುಮಾನ್ ದೇವಸ್ಥಾನದ ಹತ್ತಿರ ಮನೆ ನಂ. 3-321 ಹನುಮಂತರವರ ಮನೆ ಬಳಿ ಸಾರ್ವಜನಿಕ ಮೆಟ್ಟಿಲು ರಚನೆಗೆ ರೂ. 3 ಲಕ್ಷ, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿ ವಾರ್ಡ್ ನಂ.19 ರ ಪಚ್ಚನಾಡಿ ಗ್ರಾಮದ ಪಚ್ಚನಾಡಿ ಬೊಟ್ಟು ರಸ್ತೆ ದುರಸ್ಥಿ ಕಾಮಗಾರಿಗೆ ರೂ. 84,000, ಮೂಳೂರು ಮುಂಡಿತ್ತಾಯ ವೈದ್ಯನಾಥ ದೇವಸ್ಥಾನದ ಇಂಟರ್‍ಲಾಕ್ […]

ಗೆದ್ದೇ ಗೆಲ್ಲುವೆವು – ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಮತ ಬೇಟೆ

Saturday, May 5th, 2018
merihill

ಮಂಗಳೂರು : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ. ವಾಮಂಜೂರು ಸುತ್ತಮುತ್ತ ಭರ್ಜರಿ ಪ್ರಚಾರ ಮಾಡಿದ್ರು. ಆಟೋರಿಕ್ಷಾ ಪಾರ್ಕ್, ಬಸ್ಸು ನಿಲ್ದಾಣ, ಅಂಗಡಿ, ಹೋಟೆಲ್ , ಕ್ಯಾಂಟೀನ್‌ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ತೆರಳಿ ಮತಯಾಚನೆ ಮಾಡಿದರು. ತಮ್ಮ ಬಳಿಗೆ ಬಂದ ಅಭ್ಯರ್ಥಿಯನ್ನ ಜನರೂ ಕೂಡ ಆತ್ಮೀಯವಾಗಿ ಬರಮಾಡಿಕೊಂಡರು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರಕ್ಕೆ ಹೊರಟ ಭರತ್‌ ಶೆಟ್ಟಿ ಮತಯಾಚನೆಯೇ ವಾಮಂಜೂರಿನಲ್ಲಿ ಕೆಲಕ್ಷಣ ಜನಾಕರ್ಷಣೆಯ ಕೇಂದ್ರವಾಗಿತ್ತು. ಅಭ್ಯರ್ಥಿ ಹೋದಲೆಲ್ಲ ಜನ ಮುತ್ತಿಕೊಂಡು […]