ಬರವಣಿಗೆ ಒಳಗಿನ ನೋವಿನ ಬಿಡುಗಡೆಯ ಹಾದಿ: ಡಾ. ಸುಲತಾ ವಿದ್ಯಾಧರ್

Monday, August 6th, 2018
Sulatha

ಮೂಡಬಿದಿರೆ: “ಬರವಣಿಗೆ ನಮ್ಮೊಳಗಿನ ನೋವಿನ ಬಿಡುಗಡೆಯ ಹಾದಿ ಹಾಗೂ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಇರುವ ಆಯುಧ. ಹಾಗಾಗಿ ಹೆಣ್ಣುಮಕ್ಕಳು ಇದನ್ನು ರೂಢಿಸಿಕೊಂಡು, ಹೆಚ್ಚೆಚ್ಚು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು” ಎಂದು ಲೇಖಕಿ ಡಾ. ಸುಲತಾ ವಿದ್ಯಾಧರ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಅಧ್ಯಯನ ಕೇಂದ್ರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕನ್ನಡ ಲೇಖಕಿಯರು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. “12ನೇ ಶತಮಾನ ವಚನ ಸಾಹಿತ್ಯ ಲೇಖಕಿ ಪರಂಪರೆಯನ್ನು ಹುಟ್ಟುಹಾಕುವಲ್ಲಿ ಕಾರಣವಾಯಿತು. ಆ ಕಾಲಘಟ್ಟದಿಂದ ಹೆಣ್ಣುಮಕ್ಕಳು ಒಬ್ಬೊಬ್ಬರಾಗಿ […]