ತಲಪಾಡಿ ಗಡಿ ಮೂಲಕ ಕೇರಳಕ್ಕೆ ತೆರಳಲು ಯತ್ನಿಸಿದ ನಾಲ್ವರನ್ನು ಬಂಧಿಸಿದ ಅಧಿಕಾರಿಗಳು

Thursday, April 16th, 2020
Talapady-corona-point

ಮಂಗಳೂರು : ಕರ್ನಾಟಕದಿಂದ ತಲಪಾಡಿ ಗಡಿ ಮೂಲಕ ಕೇರಳಕ್ಕೆ ತೆರಳಲು ಯತ್ನಿಸಿದ ನಾಲ್ವರನ್ನು ಗುರುವಾರ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು ಅವರನ್ನು  ಕೊರೊನಾ ನಿಗಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಾಸರಗೋಡಿನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿ ಭಾಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ನಡುವೆ ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಅಗತ್ಯ ವಸ್ತುಗಳು ಹಾಗೂ ತುರ್ತು ಆಂಬ್ಯುಲೆನ್ಸ್ ಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಯಮ ಉಲ್ಲಂಘಿಸಿ ಹಲವರು ಸಂಚರಿಸಲು ಯತ್ನಿಸುತ್ತಿದ್ದಾರೆ. ಇದೀಗ ಲಾಕ್ ಡೌನ್ ಉಲ್ಲಂಘಿಸಿ ಗಡಿ ದಾಟಿ […]

ಸರಕಾರಿ ಆ್ಯಂಬುಲೆನ್ಸ್‌ಗಳಲ್ಲಿ ಬರುವ ರೋಗಿಗಳಿಗೆ ಷರತ್ತು ಬದ್ದವಾಗಿ ತಲಪಾಡಿ ಗಡಿ ತೆರೆವು

Wednesday, April 8th, 2020
DC Sindhu B Roopesh

ಮಂಗಳೂರು: ಕೆಲವು ನಿರ್ಬಂಧಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಕಾಸರಗೋಡು ಕಡೆಯಿಂದ ಬರುವ ರೋಗಿಗಳಿಗೆ ಚಿಕಿತ್ಸೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ. ಕಾಸರಗೋಡು  ಮತ್ತು ದಕ್ಷಿಣ ಕನ್ನಡದ ಹಿರಿಯ ಅಧಿಕಾರಿಗಳು ರೂಪಿಸಿದ್ದ ಮಾನದಂಡದಂತೆ ಕೇರಳ ಮತ್ತು ಕರ್ನಾಟಕದ ತಲಪಾಡಿ ಗಡಿಯನ್ನು ತುರ್ತು ವೈದ್ಯಕೀಯ ಚಿಕಿತ್ಸೆಗೆ ತೆರೆಯಲು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದ್ದು, ಮಂಗಳವಾರ ಐಎಂಎ ಸದಸ್ಯರೊಂದಿಗೆ ಜಿಲ್ಲಾ ಮಟ್ಟದ ಕೋವಿಡ್‌ ನಿಯಂತ್ರಣ ಸಭೆ ನಡೆಸಲಾಗಿದೆ. ಅತ್ಯಂತ ತುರ್ತು ಚಿಕಿತ್ಸೆ ಮತ್ತು ರಸ್ತೆ ಅಪಘಾತಗಳ […]

ಮಂಗಳೂರಿನ ಆಸ್ಪತ್ರೆಗಳು ಫುಲ್ : ಕೇರಳದ ಅಂಬ್ಯುಲೆನ್ಸ್ ಗಳಿಗೆ ತಲಪಾಡಿ ಗಡಿಯಲ್ಲಿ ನಿರ್ಬಂಧ

Wednesday, March 25th, 2020
Kerala-Ambulence

ಮಂಗಳೂರು :  ಮಂಗಳವಾರ ಅತೀ ಹೆಚ್ಚು ರೋಗಿಗಳು ಕೇರಳದಿಂದ ಮಂಗಳೂರಿಗೆ ಬಂದಿದ್ದಾರೆ. ಆದರೆ ಜಿಲ್ಲಾಡಳಿತ ಒಂದು ನಿರ್ಧಾರ ತೆಗೆದುಕೊಂಡಿದೆ. ಸದ್ಯದ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗಳು ನಮಗೆ ಸಾಕಾಗಲ್ಲ, ಹೀಗಾಗಿ ಹೊರಗಿನ ಯಾವುದೇ ವಾಹನ, ಅಂಬ್ಯುಲೆನ್ಸ್ ಸೇರಿ ಯಾವುದನ್ನೂ ಬಿಡಬಾರದು ಅಂತ ನಿರ್ಧರಿಸಲಾಗಿದೆ. ಎಲ್ಲಾ ಅಂಬ್ಯುಲೆನ್ಸ್ ಗಳನ್ನ ತಲಪಾಡಿ ಗಡಿಯಲ್ಲಿ ನಿರ್ಬಂಧಿಸಲಾಗುತ್ತಿದೆ. ಎಲ್ಲಾ ವಾಹನಗಳನ್ನು ಗಡಿಯಲ್ಲಿ ಬಂದ್ ಮಾಡಲಾಗಿದೆ ಎಂದು  ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಮಾರ್ಚ್ 26 ರಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳು […]