ಮಂಗಳೂರಿನಲ್ಲಿ ಎಲ್ಲೆಲ್ಲೂ ದೀಪಗಳ ತೋಪು
Friday, November 5th, 2010ಮಂಗಳೂರು: ದ.ಕ ಜಿಲ್ಲೆಯ ನಾನಾ ಭಾಗಗಳಲ್ಲಿ ಈಚೆಗೆ ನಡೆದ ದಸರಾ-ನವರಾತ್ರಿ ಹಬ್ಬಗಳ ಬಗ್ಗೆ ನೀವು ತಿಳಿದಿರುವಿರಿ. ಈಗ ದೀಪಾವಳಿ ಮೆಲುಗಾಲಿನಲ್ಲಿ ಈ ಕೃಷ್ಣಪಕ್ಷದಲ್ಲಿ ಕಾಲಿಟ್ಟಿದೆ (ನವೆಂಬರ್ 5,6,7). ಈ ಮೂರು ದಿನಗಳು ರಜಾದಿನಗಳಾಗಿ ಪರಿಣಮಿಸಿದರೆ ಆಶ್ಚರ್ಯವಿಲ್ಲ. ಗುರುವಾರ ಸಂಜೆಯೇ ಮರುದಿನ ಬೆಳಗ್ಗಿನ ಎಣ್ಣೆ ಸ್ನಾನಕ್ಕಾಗಿ ಬಾವಿಯಿಂದ ನೀರು ತುಂಬುವ ಸಡಗರ ಆಗಿಹೋಗಿದೆ. ಹಂಡೆಗೆ ಹೂವಿನ ಅಲಂಕಾರ, ಶುಭಾಶಯದ ಬಿಳಿ, ಕೆಂಪು ಗೆರೆಗಳು ಮುದ್ರೆಗಳು ಬಿದ್ದಿವೆ. ಹುಡುಗರು ನೀರು ತುಂಬುವಲ್ಲಿ ಜಾಗಟೆ ಬಾರಿಸಿದ್ದೂ ಹೌದು. ಶುಕ್ರವಾರ ಬೆಳಗ್ಗಿನ ಉಷೆಯಿನ್ನೂ […]