ಸಾಕ್ಷ್ಯಾಧಾರ ಕೊರತೆ : ತಾಯಿ ಮತ್ತು ಅಪ್ರಾಪ್ತ ಬಾಲಕಿ ಅತ್ಯಾಚಾರದ ಆರೋಪಿ ಬಿಡುಗಡೆ

Tuesday, January 30th, 2024
Ullal-Rape

ಮಂಗಳೂರು : ಉಳ್ಳಾಲದಲ್ಲಿ ಠಾಣೆಯಲ್ಲಿ ತಾಯಿ ಹಾಗೂ ಆಕೆಯ ಮಗಳು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿಯನ್ನು ಸಾಕ್ಷ್ಯಾಧಾರ ಕೊರತೆಯ ಕಾರಣದಿಂದ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಬಿಡುಗಡೆಗೊಳಿಸಿದೆ. 2021ರಲ್ಲಿ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬೂಬಕ್ಕರ್ ಸಿದ್ದಿಕ್ ಯಾನೆ ಸಿದ್ದಿಕ್ ಉಳ್ಳಾಲ್ ಎಂಬವವನನ್ನು ಆರೋಪ ಮುಕ್ತಗೊಳಿಸಿ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶ ನೀಡಿದೆ . ಆರೋಪಿಯು ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಮಗಳು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ […]

ಹೆರಿಗೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾದ ತಾಯಿ ಮಗು ಸಾವು

Saturday, January 22nd, 2022
Savitha

ಮಂಗಳೂರು : ಹೆರಿಗೆಗೆಂದು ಖಾಸಗಿ ಆಸ್ಪತ್ರೆಯೊಂದರಲ್ಲಿ  ದಾಖಲುಗೊಂಡಿದ್ದ  ತಾಯಿ ಮತ್ತು ಮಗು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿಟ್ಲ ಮೂಲದ ಸವಿತಾ (33) ಹೆರಿಗೆಗಾಗಿ ಶುಕ್ರವಾರ ಬೆಳಗ್ಗೆ ಆಸ್ಪತ್ರೆಗೆ ಬಂದಿದ್ದರು. ಮಗು ಬೆಳಗ್ಗೆ ಮೃತಪಟ್ಟಿದೆ. ಸಂಜೆ ವೇಳೆ ತಾಯಿ ಕೂಡ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯವರು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್. […]

ಪುತ್ತೂರು : ಮಗನಿಂದಲೇ ತಾಯಿಯ ಮೇಲೆ ಎರಡು ಬಾರಿ ಅತ್ಯಾಚಾರ

Friday, January 14th, 2022
rape

ಪುತ್ತೂರು : ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ಮಗನೇ ತಾಯಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಬುಧವಾರ  ತಡರಾತ್ರಿ ನಡೆದಿದ್ದು, ಈ ಬಗ್ಗೆ ಸಂತ್ರಸ್ತ ತಾಯಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 376(2)(N)506ರಂತೆ ಪ್ರಕರಣ ದಾಖಲಾಗಿದೆ.  ಮಗನ ಈ ದುಷ್ಕೃತ್ಯದಿಂದ ತಾಯಿಯೂ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಯಿ ಮತ್ತು ಮಗ ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಜ.12ರಂದು ಎಂದಿನಂತೆ […]

ತವರು ಮನೆಗೆ ಬಂದಿದ್ದ ತಾಯಿ ಮಗು ಕೆರೆಯಲ್ಲಿ ಮುಳುಗಿ ಸಾವು

Sunday, August 8th, 2021
Abhishek

ಸುಳ್ಯ: ತವರು ಮನೆಗೆ ಪೂಜೆಗೆ ಬಂದಿದ್ದ ತಾಯಿ ಮಗು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದ ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನೆಲ್ಲೂರು ಕೇಮ್ರಾಜೆ ಗ್ರಾಮದಲ್ಲಿ ನಡೆದಿದೆ. ನೆಲ್ಲೂರು ಕೇಮ್ರಾಜೆ ಗ್ರಾಮದ ಮಾಪಲಕಜೆಯಲ್ಲಿ ತವರು ಮನೆ ಹೊಂದಿರುವ ಮೆಲ್ಕಾರ್ ನಿವಾಸಿ ಅಮಿತ್ ಎಂಬವರ ಪತ್ನಿ ಸಂಗೀತಾ(30) ಮತ್ತು ಆಕೆಯ ಮಗು‌ ನಾಲ್ಕು ವರ್ಷದ ಅಭಿಮನ್ಯು ಮೃತರು. ತಾಯಿ ಮಗು  ನಾಳೆ ಮೆಲ್ಕಾರ್ಗೆ ಹೋಗುವವರಿದ್ದರು ಎನ್ನಲಾಗಿದೆ. ಪಕ್ಕದ ನೆಂಟರೋರ್ವರ ಮನೆಗೆ ಹೋಗುವಾಗ ಮಗು ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ […]

ಪುರಸಭೆ ಸದಸ್ಯ, ತಾಯಿ, ಸಹೋದರ ಸೇರಿ ಒಂದೇ ಕುಟುಂಬದ ಮೂವರು ಕರೊನಾಗೆ ಬಲಿ

Friday, June 25th, 2021
Vadi-Death

ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕರೊನಾಗೆ ಪುರಸಭೆ ಸದಸ್ಯ ಮತ್ತು ಇವರ ತಾಯಿ, ಸಹೋದರ ಸೇರಿ ಒಂದೇ ಕುಟುಂಬದ ಮೂವರು ಬಲಿಯಾಗಿದ್ದು, ಮತ್ತೊಬ್ಬ ಸಹೋದರನ ಸ್ಥಿತಿ ಗಂಭೀರವಾಗಿರುವ ಘಟನೆ ಈ ಘಟನೆ ಸಂಭವಿಸಿದೆ. ಆರ್ಸಿ ತಾಂಡದ ನಿವಾಸಿ ಚಾಂದಿಬಾಯಿ ನಾಯಕ್ (74), ಇವರ ಪುತ್ರ ವಾಡಿ ಪುರಸಭೆ ಸದಸ್ಯ ಪ್ರಕಾಶ್ ನಾಯಕ್(46) ಮತ್ತು ಕಿರಿಯ ಪುತ್ರ ಭಜನ್ ನಾಯಕ್(32) ಮೃತರು. ಕಳೆದ ವಾರ ಪ್ರಕಾಶ್ ನಾಯಕ್ ಕರೊನಾಗೆ ಬಲಿಯಾಗಿದ್ದರು. ಇವರ ಕಿರಿಯ ಸಹೋದರ ಭಜನ್ ಮತ್ತು […]

ಮಕ್ಕಳಿಬ್ಬರಿಗೆ ವಿಷ ಕುಡಿಸಿದ ತಾಯಿ, 8 ವರ್ಷದ ಮಗಳು ಸಾವು

Sunday, September 20th, 2020
poision

ಪುತ್ತೂರು : ಮಕ್ಕಳಿಬ್ಬರಿಗೆ  ವಿಷ ಕುಡಿಸಿ  ಮಹಿಳೆಯೊಬ್ಬರು ಬಳಿಕ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ  ಪುತ್ತೂರು ತಾಲೂಕಿನ ನಿಡ್ಪಳ್ಳಿ ಎಂಬಲ್ಲಿ ನಡೆದಿದ್ದು, 8 ವರ್ಷದ ಮಗಳು ಘಟನೆಯಲ್ಲಿ ಮೃತಪಟ್ಟಿದ್ದಾಳೆ. ಪಡುವನ್ನೂರು ಗ್ರಾಮದ ಸಜಂಕಾಡಿ ನಿವಾಸಿ ರಘುನಾಥ ಎಂಬಾತನ ಪತ್ನಿ ದಿವ್ಯಶ್ರೀ (29) ತನ್ನ ಇಬ್ಬರು ಮಕ್ಕಳಾದ ಅಜಯ್ (10) ಮತ್ತು ಅನ್ವಿತಾ (8) ಅವರಿಗೆ ಜ್ಯೂಸ್‌ನಲ್ಲಿ ವಿಷ ಬೆರೆಸಿ ನೀಡಿ ಬಳಿಕ ತಾನೂ ಸೇವಿಸಿದ್ದಾರೆ ಎನ್ನಲಾಗಿದೆ. ರಘುನಾಥನಿಗೆ ಅನ್ಯ ಸ್ತ್ರೀಯೊಂದಿಗೆ ಸಂಬಂಧವಿದೆ ಎಂದು ಆರೋಪಿಸಿದ್ದ ದಿವ್ಯಶ್ರೀ, ಕೊರೋನ ಲಾಕ್‌ಡೌನ್ […]

ಪತ್ನಿ ಮತ್ತು ತಾಯಿಯನ್ನು ಕೊಂದ ಶಾಟ್‌ಪುಟ್‌ ಆಟಗಾರ

Wednesday, August 26th, 2020
iqbal Singh

ವಾಷ್ಟಿಂಗ್ಟನ್‌: ನ್ಯೂಟೌನ್‌ ಸ್ಕ್ವೇರ್‌ನ ರಾಕ್‌ವುಡ್‌ ರಸ್ತೆಯಲ್ಲಿ ಶಾಟ್‌ಪುಟ್‌ ಆಟಗಾರ ಇಕ್ಬಾಲ್‌ ಸಿಂಗ್ ಎಂಬಾತ ತಮ್ಮ ಪತ್ನಿ ಮತ್ತು ತಾಯಿಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾರೆ. 62 ವರ್ಷದ ಇಕ್ಬಾಲ್‌ ಸಿಂಗ್‌ ಬೊಪರಾಯ್‌  ಪ್ರಸ್ತುತ ಅಮೆರಿಕ ನಿವಾಸಿ. ಪೆನ್ಸಿಲ್ವೇನಿಯದ ಡೆಲಾವೇರ್‌ ಕೌಂಟಿಯ, ನ್ಯೂಟೌನ್‌ ಸ್ಕ್ವೇರ್‌ನಲ್ಲಿ ರವಿವಾರ ಬೆಳಗ್ಗೆ ಘಟನೆ ನಡೆದಿದೆ. 1983ರ ಕುವೈಟ್‌ ಏಶ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿ ಯನ್‌ಶಿಪ್‌ನ ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಇಕ್ಬಾಲ್‌ ಸಿಂಗ್‌ ಬೊಪರಾಯ್‌ ಈಗ ಕೊಲೆ ಗಾರ!. ಆದರೆ ಕಾರಣವೇನೆಂದು ತಿಳಿದುಬಂದಿಲ್ಲ. ನ್ಯೂಟೌನ್‌ ಸ್ಕ್ವೇರ್‌ನ ರಾಕ್‌ವುಡ್‌ ರಸ್ತೆಯಲ್ಲಿರುವ ಆ ಮನೆಯ ಮೊದಲನೇ […]

ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

Friday, July 17th, 2020
Raviteja

ಶಿರಸಿ  : ತಾಯಿ ಮತ್ತು ಮಗ ಇಬ್ಬರೇ ಇದ್ದು ಮನೆಯಲ್ಲಿನ ಕಷ್ಟ ನೋಡಲಾಗದೇ ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ‌ನೀರ್ನಳ್ಳಿಯಲ್ಲಿ‌ ನಡೆದಿದೆ. ನಿರ್ನಳ್ಳಿಯ ರವಿತೇಜ ಗಣಪತಿ ಭಟ್ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ಇದ್ದು ಮನೆಯ ನಿರ್ವಹಣೆ ಕಷ್ಟ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮೊದಲು ತಿಮಿಟ್ ಸೇವಿಸಿ ನಂತರ ‌ನೇಣು‌ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ […]

ತಾಯಿಯ ಪ್ರೇಮ ಎಲ್ಲಕ್ಕಿಂತ ಮಿಗಿಲು

Sunday, May 10th, 2020
Mothers day

ಹೆತ್ತವಳು ತಾಯಿ ಅವಳನ್ನ ನೂರುಕಾಲ ನೀ ಕಾಯಿ, ನಮಗುಸಿರು ನೀಡಿದಳು ತಾಯಿ ಅವಳುಸಿರು ಇರೊವರೆಗೂ ನೀ ಕಾಯಿ. // 1// ಒಂಬತ್ತು ತಿಂಗಳು ಹೆತ್ತು ಹೊತ್ತು ಸಲುವಿ, ಸಾಕಿದಳು ತಾಯಿ, ತೊಂಭತ್ತು ವರುಷ ಅವಳನ್ನ ಪ್ರೀತಿ, ಪ್ರೇಮದಿ ನೀ ಕಾಯಿ. //2// ಹೆತ್ತವಳು ತಾಯಿ ಕೈ ತುತ್ತು ನೀಡಿದ ತಾಯಿ, ಅವಳನ್ನ ನೀನು ಮರೆಯದಿರು ಮೂರೊತ್ತು ಅನ್ನ ನೀಡುತಿರು. //3// ನಮಗೆ ಜನ್ಮವ ಕೊಟ್ಟು ತಾ ಮರುಜನ್ಮ ಪಡೆದಳು ತಾಯಿ, ಅವಳನ್ನ ಅವಮಾನಿಸದೆ ನೋಯಿಸದೆ ನೂರುಕಾಲ ಸುಖದಿ […]

ಸ್ತನಪಾನದ ಅಗತ್ಯತೆಯನ್ನು ಪ್ರತಿಯೊಬ್ಬ ತಾಯಿಯು ಅರ್ಥಮಾಡಿಕೊಳ್ಳಬೇಕು

Wednesday, August 7th, 2019
brest-feeding

ಮೂಡುಬಿದಿರೆ: ಸ್ತನಪಾನ ಮಾಡಿಸುವುದರಿಂದ ತಾಯಿಯು ತನ್ನ ಮಕ್ಕಳನ್ನು ರೋಗಗಳಿಂದ ದೂರವಿಡಬಹುದು ಎಂದು ಆಳ್ವಾಸ್‌ನ ಕಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ|| ರಮೇಶ ಹೇಳಿದರು. ಅವರು ಆಳ್ವಾಸ್ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ಸ್ತನಪಾನ ಜಾಗೃತಿ ವಾರ ಕಾರ‍್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸ್ತನಪಾನದ ಅಗತ್ಯತೆಯನ್ನು ಪ್ರತಿಯೊಬ್ಬ ತಾಯಿಯು ಅರ್ಥಮಾಡಿಕೊಳ್ಳಬೇಕು. ಆಗ ಮಗು ಆರೋಗ್ಯವಾಗಿ ಬೆಳೆಯಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ಕಸೂತಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ|| ರೇವತಿ ಭಟ್ ಮಾತನಾಡಿ, ತಾಯಿಯ ಹಾಲು […]