ಕನ್ನಡ ರಾಜ್ಯೋತ್ಸವದ ದಿನ ಬೆಳ್ತಂಗಡಿಯ ಕೆಲವೆಡೆ ತುಳುನಾಡಿನ ಧ್ವಜ ಹಾರಾಟ
Friday, November 1st, 2019ಬೆಳ್ತಂಗಡಿ : ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಎರಡು ಕಡೆ ಪ್ರತ್ಯೇಕ ಧ್ವಜ ಕಾಣಿಸಿಕೊಂಡಿದೆ. ಇದು ತುಳುನಾಡಿನ ಧ್ವಜವೆಂದು ಎಂದು ಹೇಳಲಾಗಿದೆ. ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಗೇಟಿನ ಮೇಲೂ ಇದೇ ಧ್ವಜ ಹಾರಾಡುತ್ತಿತ್ತು. ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿರುವ ಧ್ವಜಸ್ತಂಭದಲ್ಲಿದ್ದ ಕನ್ನಡ ಧ್ಜವನ್ನು ಕೆಳಗಿಳಿಸಿ ಈ ‘ತುಳು’ ಬೆಂಬಲಿತ ಧ್ವಜವನ್ನು ಹಾಕಲಾಗಿದೆ. ಈ ಕೃತ್ಯದ ವಿರುದ್ಧ ಸರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರತ್ಯೇಕ ಧ್ವಜ ಹಾರಾಟ ಕೃತ್ಯವು ಕಳೆದ ರಾತ್ರಿ ನಡೆದಿದೆ. ಇದೀಗ ಮಾಹಿತಿ ತಿಳಿದ ಕನ್ನಡ ಸಂಘಟನೆಗಳು […]