ತುಳುನಾಡ ತಿರ್ಗಾಟಕ್ಕೆ ಬಸ್ರೂರು ತುಳುವೇಶ್ವರದಿಂದ ಚಾಲನೆ

Tuesday, March 15th, 2016
Tulu Ayana

ಬದಿಯಡ್ಕ: ತುಳುನಾಡಿನ ಗತ ವೈಭವವನ್ನು ನೆನಪಿಸುವ ಭವ್ಯ ರಂಪರೆಯ ಕುರುಹುಗಳು ಇಂದಿಗೂ ಬಸ್ರೂರು ಹಾಗೂ ಬಾರ್ಕೂರಿನಲ್ಲಿ ಉಳಿದಿದ್ದರೂ ಜೀವಂತಿಕೆ ಕಳೆದುಕೊಳ್ಳುತ್ತಿರುವುದು ತುಳುನಾಡಿನ ದುರಂತಕ್ಕೊಂದು ಕೈಗನ್ನಡಿಯಾಗಿದೆ. ಬಸ್ರೂರಿನಲ್ಲಿರುವ ತುಳುವರ ಇತಿಹಾಸ ಪ್ರಸಿದ್ಧ ತುಳುವೇಶ್ವರ ದೇವಸ್ಥಾನವು ಆರಾಧನ ಕ್ರಮದಿಂದ ವಿಮುಖವಾಗುತ್ತಾ ಅಳಿಯುತ್ತಿರುವುದರಿಂದ ತೌಳವ ಸಂಸ್ಕೃತಿಯೂ ಕೂಡಾ ಅತಂತ್ರವಾಗಲು ಮುಖ್ಯ ಕಾರಣವಾಗಿರಬಹುದೆಂದು ಹಿರಿಯ ವಿದ್ವಾಂಸ ಪ್ರೋ.ವಾದಿರಾಜ ಭಟ್ ಕನರಾಡಿ ಅಭಿಪ್ರಾಯಪಟ್ಟರು. ಅವರು ಬಸ್ರೂರಿನ ತುಳುವೇಶ್ವರ ದೇವಸ್ಥಾನದ ಪರಿಸರದಲ್ಲಿ ನಡೆದ ಕಾಸರಗೋಡು ತುಳುವೆರೆ ಆಯನೊ ಕೂಟದ ಹತ್ತನೇ ವರ್ಷದ ಸಂಭ್ರಮದ ವಿಶ್ವ ತುಳುವೆರೆ […]

ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ, ಕದ್ರಿ ಇನ್ಸ್ ಪೆಕ್ಟರ್ ಟಿ.ಡಿ ನಾಗರಾಜ್ ಅಮಾನತು

Friday, July 31st, 2015
Advacate protest

ಮಂಗಳೂರು: ಪೊಲೀಸ್ ಆಯುಕ್ತ ಎಸ್.ಮುರುಗನ್ ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಕದ್ರಿ ಇನ್ಸ್ ಪೆಕ್ಟರ್ ಟಿ.ಡಿ ನಾಗರಾಜ್ ಅವರನ್ನು ಇಂದು ಅಮಾನತು ಮಾಡಿರುವುದಾಗಿ ತಿಳಿದು ಬಂದಿದೆ. ಶುಕ್ರವಾರ ನ್ಯಾಯವಾದಿ ಉತ್ತಮ್ ರೈ ತಮ್ಮ ಕಕ್ಷಿದಾರನ ಜೊತೆಗೆ ಕೇಸ್ ಸಂಬಂಧಿಸಿ ಠಾಣೆಗೆ ಹೋದಾಗ ನಾಗರಾಜ್ ಅವರು ರೈ ಅವರೊಂದಿಗೆ ಅನೂಚಿತವಾಗಿ ನಡೆದುಕೊಂಡದ್ದಲ್ಲದೇ ಹಲ್ಲೆ ಮಾಡಿದ್ದಾಗಿ ದೂರಿದ್ದಾರೆ. ಅದಕ್ಕಾಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ನೇತೃತ್ವದಲ್ಲಿ ಕದ್ರಿ ಠಾಣೆ ಮುಂದೆ ನ್ಯಾಯವಾದಿಗಳು ಧರಣಿ ನಡೆಸಿ ಇನ್ಸ್ ಪೆಕ್ಟರ್ […]