ವಿಭಜನೆಯಿಲ್ಲದ ಭಜನೆಯ ಕಂಠಗಳು ಎಲ್ಲೆಡೆ ಮೊಳಗಲಿ : ಶ್ರೀ ಮೋಹನದಾಸ ಪರಮಸಿಂಹ ಸ್ವಾಮೀಜಿ

Sunday, November 7th, 2021
Bhajane

ಮಂಗಳೂರು : ಭಜನೆ ಎಂದರೆ ಕೇವಲ ಹಾಡುವುದೆಂದಷ್ಟೇ ಅರ್ಥವಲ್ಲ. ಭಕ್ತಿ, ಜಪ, ನೆನವರಿಕೆ ಮಾಡುತ್ತಾ ಭಗವಂತನಿಗೆ ಹತ್ತಿರವಾಗುವುದು. ಆಧ್ಯಾತ್ಮಕ ಪ್ರಭಾವಲಯವನ್ನು ವೃದ್ಧಿಸಿಕೊಳ್ಳುವುದೇ ಆಗಿದೆ. ಇಂದು ಕೊರೋನದಂತಹ ಕಷ್ಟ ಕಾಲದಲ್ಲಿ ನಮ್ಮ ಪೀಳಿಗೆ ಸನಾತನೀಯವಾದ ಧರ್ಮದ ಸಾರವನ್ನು ಮರೆತಿವೆ. ಅವರನ್ನು ಪುನಃ ಧಾರ್ಮಿಕ ಹಳಿಗೆ ತಂದು ಈ ರಾಷ್ಟ್ರವನ್ನು ಪ್ರೀತಿಸುವ ಪ್ರಜೆಗಳನ್ನಾಗಿಸುವ ಕಾರ್ಯ ನಡೆಯಬೇಕಿದೆ. ಅಲ್ಲಲ್ಲಿ ಅಲ್ಲಲ್ಲಿ ಇಂತಹಾ ಜನಜಾಗೃತಿಯ ಕಾರ್ಯ ಆಗಬೇಕು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು, ಜನಮನವನ್ನು ತಲುಪಿದೆ. […]