ಮಂಗಳೂರು ವಿವಿ ತುಳು ಎಂಎ ಅಧ್ಯಯನ ಪ್ರವೇಶ ಶುಲ್ಕ ಕಡಿತಕ್ಕೆ ಸಂಸದ ಕ್ಯಾ. ಚೌಟ ಮನವಿ

Wednesday, October 23rd, 2024
Brijesh-Chowta

ಮಂಗಳೂರು: ತುಳು ಭಾಷೆ ಉತ್ತೇಜನ ಹಾಗೂ ಬೆಳವಣಿಗೆಗೆ ಪೂರಕವಾಗಿ ಮಂಗಳೂರು ವಿಶ್ವವಿದ್ಯಾಲಯ ಆರಂಭಿಸಿರುವ ತುಳು ಸ್ನಾತಕೋತ್ತರ ಪ್ರವೇಶ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರವಾಗಿ ಖಂಡಿಸಿದ್ದು, ಸರ್ಕಾರ ಕೂಡಲೇ ಶುಲ್ಕ ಕಡಿತಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರಿಗೆ ಪತ್ರ ಬರೆದಿರುವ ಕ್ಯಾ. ಚೌಟ ಅವರು, ಮಂಗಳೂರು ವಿವಿಯಲ್ಲಿ ತುಳು ಸ್ನಾತಕೋತ್ತರ ವಿಭಾಗದ 2024-25ನೇ ಸಾಲಿನ ಪ್ರವೇಶ […]

ತುಳು ಭಾಷೆ ಉಳಿಸಿ ಬೆಳೆಸುವಲ್ಲಿ ಹೊರನಾಡ ತುಳುವರ ಕೊಡುಗೆ ಅನನ್ಯವಾದುದು : ತಾರಾನಾಥ್ ಗಟ್ಟಿ ಕಾಪಿಕಾಡ್

Saturday, June 29th, 2024
bhadravathi

ಮಂಗಳೂರು : ತುಳು ಭಾಷೆ ಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹೊರನಾಡಿನ ತುಳುವರು ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಹೇಳಿದರು. ಅವರು ಭದ್ರಾವತಿಯ ಬಂಟರ ಭವನದಲ್ಲಿ ಶುಕ್ರವಾರ ಸಂಜೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ತುಳು ಕೂಟ ಭದ್ರಾವತಿ ಆಯೋಜಿಸಿದ ತುಳು ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ತುಳು ಭಾಷೆ ಹಾಗೂ ಸಂಸ್ಕೃತಿ ಎಲ್ಲರನ್ನೂ ಜೊತೆಯಾಗಿ ಒಳಗೊಳ್ಳುವ ಗುಣಧರ್ಮವನ್ನು ಹೊಂದಿದೆ. ಈ ಕಾರಣದಿಂದಾಗಿ ಹೊರನಾಡಿನಲ್ಲಿ […]

ಗೂಗಲ್ ಟ್ರಾನ್ಸೇಲಟರ್ ನಲ್ಲಿ ತುಳು ಭಾಷೆ ಸೇರ್ಪಡೆ

Friday, June 28th, 2024
Tharanath-Gatty

ಮಂಗಳೂರು : ತುಳು ಭಾಷೆಗೆ ಜಾಗತಿಕವಾಗಿ ಸ್ಥಾನ ಮಾನ ದೊರಕಲು ಪ್ರಯತ್ನಗಳು ನಡೆಯುತ್ತಿದ್ದು ಅದರ ಭಾಗವಾಗಿ ಗೂಗಲ್ ಟ್ರಾನ್ಸೇಲಟರ್ ನಲ್ಲಿ ಇತರ ಭಾಷೆಗಳಿಂದ ತುಳು ಭಾಷೆಯ ಅರ್ಥಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಇದು ತುಳುವರು ಸಂಭ್ರಮಪಡುವಂತವ ವಿಚಾರವಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ. ಗೂಗಲ್ ಟ್ರಾನ್ಸೇಲಟರ್ ನಲ್ಲಿ ತುಳು ಸೇರ್ಪಡೆಗೊಂಡಿರುವುರಿಂದ ತುಳುನಾಡಿಗೆ ಬರುವ ಪ್ರವಾಸಿಗರಿಗೆ ತುಳುವರೊಂದಿಗೆ ಮಾತನಾಡಲು ಅನುಕೂಲವಾಗಲಿದೆ. ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ […]

ವಿವಿಧತೆಯಲ್ಲಿ ಏಕತೆ ಸಾರುವ ತುಳು ಭಾಷೆ : ತುಳುವೆರೆ ಕರ್ಣೆ ಕನ್ಯಾನ ಸದಾಶಿವ ಶೆಟ್ಟಿ

Sunday, October 1st, 2023
ವಿವಿಧತೆಯಲ್ಲಿ ಏಕತೆ ಸಾರುವ ತುಳು ಭಾಷೆ : ತುಳುವೆರೆ ಕರ್ಣೆ ಕನ್ಯಾನ ಸದಾಶಿವ ಶೆಟ್ಟಿ

ಮಂಗಳೂರು : ತುಳು ಭಾಷೆಯಲ್ಲಿ ವಿವಿಧ ತರವಾದ ಪ್ರಾದೇಶಿಕ ಬದಲಾವಣೆಗಳಿಗೆ ಅಲ್ಲದೆ ಜಾತಿಯ ಬದಲಾವಣೆಗಳಿವೆ ಇದೆಲ್ಲವೂ ತುಳುನಾಡಿನ ತುಳು ಭಾಷೆಯ ವಿಶಿಷ್ಟತೆಯನ್ನು ಸಾರುತ್ತದೆ. ನನ್ನ ಈ ದಾನ ಧರ್ಮದ ಕೆಲಸದಲ್ಲಿ ನನ್ನ ಮನೆಯವರ ಶ್ರೇಷ್ಠ ಮನಸ್ಥಿಯೇ ಕಾರಣ. ನನ್ನಲ್ಲಿ ನನ್ನ ಧರ್ಮಪತ್ನಿ ಮಕ್ಕಳು ಯಾವುದೇ ಪ್ರೀತಿಯ ಆಕ್ಷೇಪಗಳನ್ನು ನೀಡದಿರುವುದೇ ಈ ರೀತಿಯ ಕೆಲಸ ಕಾರ್ಯಗಳ ಪ್ರೋತ್ಸಾಹ ಎಂದು ತುಳುವೆರೆ ಕರ್ಣೆ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು. ಅವರು ಮಂಗಳೂರು ಪುರ ಭವನದಲ್ಲಿ ನಡೆದ ತುಳುವೆರೆ ಆಯನೊ ಕೂಟ […]

ತುಳುವಿನ ರಕ್ಷಣೆ, ಸಂಸ್ಕೃತಿ, ದೇಶದ ರಕ್ಷಣೆ: ಪ್ರೊ. ಪಿ ಎಲ್ ಧರ್ಮ

Friday, March 4th, 2022
dharma

ಮಂಗಳೂರು: ತುಳು ಭಾಷೆಯ ಸೊಗಡು ಅರಿಯಬೇಕಾದರೆ ಇತರ ಭಾಷೆಗಳನ್ನೂ ತಿಳಿದುಕೊಳ್ಳಬೇಕು. ಯುವ ಜನತೆ ತುಳು ಮಾತನಾಡದಿದ್ದರೆ ಭಾಷೆಯ ಉಳಿವಿನ ಮಾತು ಭಾಷಣಗಳಿಗೆ ಸೀಮಿತವಾಗುತ್ತದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ಸ್ನಾಕೋತ್ತರ ಅಧ್ಯಯನ ವಿಭಾಗಗಳು ಜಂಟಿಯಾಗಿ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ʼಕೆಡ್ಡಸ ಮಿನದನʼ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ […]

ಚಳಿಗಾಲದ ಅಧಿವೇಶನದಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡಿ : ತುಳುವೆರೆ ಪಕ್ಷ

Monday, November 29th, 2021
Shailesh

ಬೆಳ್ತಂಗಡಿ : ತುಳುವರ ಶತಮಾನದ ಬೇಡಿಕೆ ತುಳು ಭಾಷೆಗೆ ಸ್ಥಾನಮಾನ ಮತ್ತು ತುಳು ರಾಜ್ಯ ರಚನೆ ಆದರೆ ಆಳುವ ಸರ್ಕಾರಗಳ ದಿವ್ಯ ನಿರ್ಲಕ್ಷ ಇಂದು ತುಳು ಭಾಷೆಯನ್ನು ಅಳಿವಿನ ಅಂಚಿಗೆ ತಂದು ನಿಲ್ಲಿಸಿದೆ. ನಿರಂತರ ನಿರ್ಲಕ್ಷದಿಂದಾಗಿ ತುಳುವರು ನಮ್ಮನ್ನು ಆಳಿದ ರಾಷ್ಟ್ರೀಯ ಪಕ್ಷಗಳ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅಧಿಕೃತ ಭಾಷೆಯ ಸ್ಥಾನಮಾನದ ಬೇಡಿಕೆಗೆ ನಮ್ಮ ಶಾಸಕರುಗಳು ಮತ್ತು ಸಚಿವರುಗಳು ಸ್ಪಂದಿಸುತ್ತಿಲ್ಲ ಹಾಗೂ ತುಳುವರ ಬೇಡಿಕೆಗೆ ತದ್ವಿರುದ್ದವಾಗಿ ತುಳುನಾಡಿನಲ್ಲಿ ಕನ್ನಡ ಹೇರಿಕೆಯಲ್ಲಿ ನಿರತರಾಗಿದ್ದಾರೆ, […]

ತುಳುನಾಡು ರಾಜ್ಯ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ತುಳುವೆರೆ ಪಕ್ಷದಿಂದ ಮನವಿ ಸಲ್ಲಿಕೆ

Friday, October 29th, 2021
Narendra Modi

ಮಂಗಳೂರು : ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ತುಳು, ತಮಿಳ್, ತೆಲುಗು, ಕನ್ನಡ, ಮಲಯಾಲಂ ಇವುಗಳನ್ನು ಪಂಚ ದ್ರಾವಿಡ ಭಾಷೆಗಳೆನ್ನುತ್ತಾರೆ. ತುಳು ಭಾಷೆ ದ್ರಾವಿಡ ಮೂಲದಿಂದ ಸ್ವತಂತ್ರವಾದ ಅತ್ಯಂತ ಹಳೆಯ ಭಾಷೆಯಾಗಿದೆ ಎಂದು ಭಾಷಾ ತಜ್ಙರು ತಿಳಿಸಿದ್ದಾರೆ. ತುಳು ಭಾಷೆಯು ಸ್ವಂತ ಲಿಪಿಯನ್ನು ಹೊಂದಿದ್ದು ಸಾಹಿತ್ಯ ಕ್ಷೇತ್ರದಲ್ಲು ಸಮೃದ್ದವಾಗಿದೆ. ತುಳು ಲಿಪಿಯಲ್ಲಿ ಬರೆದಂತಹ ಗ್ರಂಥಗಳಿದ್ದು, ಶಿಲಾ ಶಾಸನಗಳು ಪತ್ತೆಯಾಗಿದೆ. ಸ್ವತಂತ್ರ ಭಾರತದಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಲಂ ಭಾಷೆಗಳು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿ ರಾಷ್ಟ್ರೀಯ ಸ್ಥಾನಮಾನವು […]

ಕರ್ನಾಟಕ ಮತ್ತು ಕೇರಳದಲ್ಲಿ ತುಳುವನ್ನು ಅಧಿಕೃತ ರಾಜ್ಯ ಭಾಷೆಯನ್ನಾಗಿ ಘೋಷಿಸಲು ಟ್ವಿಟ್ ಅಭಿಯಾನ

Sunday, June 13th, 2021
Tulu Language

ಮಂಗಳೂರು:  ಕರ್ನಾಟಕ ಮತ್ತು ಕೇರಳ ಸರಕಾರ ತುಳು ಭಾಷೆಯನ್ನು ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಜೈ ತುಳುನಾಡು ಸೇರಿದಂತೆ ಇತರೇ ಸಂಘಟನೆಗಳು ಮತ್ತು ತುಳು ಭಾಷಿಗರಿಂದ ರವಿವಾರದಂದು ಟ್ವಿಟರ್ ಅಭಿಯಾನ ಆರಂಭಗೊಂಡಿದೆ. ರವಿವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಆಯೋಜಿಸಲಾದ ಟ್ವೀಟ್ ಅಭಿಯಾನಕ್ಕೆ ಸಾವಿರಾರು ಮಂದಿ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಟ್ವೀಟ್ ಅಭಿಯಾನದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 1 ಲಕ್ಷಕ್ಕೂ ಹೆಚ್ಚಿನ ಟ್ವೀಟ್ ಗಳು ದಾಖಲಾಗಿವೆ. ತುಳುಭಾಷೆಯ ಸ್ಥಾನಮಾನಕ್ಕಾಗಿ ಈ ಹಿಂದೆಯೂ ಟ್ವೀಟ್‌ […]

ತುಳುವಿನಲ್ಲಿ ಗಣರಾಜ್ಯೋತ್ಸವದ ಶುಭಾಶಯ ಕೋರಿದ ನಗರ ಪೊಲೀಸ್ ಕಮಿಷನರ್

Monday, January 25th, 2021
commissioner

ಮಂಗಳೂರು :  ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತುಳು ಭಾಷೆಯಲ್ಲಿ ಮಂಗಳೂರಿನ ಜನತೆಗೆ ಗಣರಾಜ್ಯೋತ್ಸವ ಕುರಿತು ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಪ್ರತಿವರ್ಷ ಜ.26ರಂದು ವಿಶ್ವದೆಲ್ಲೆಡೆ ದೇಶದ ಗಣರಾಜ್ಯೋತ್ಸವವನ್ನು ಭಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಗರದ ಸಮಸ್ತ ನಾಗರಿಕರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ತುಳು ಭಾಷೆಯಲ್ಲಿದ್ದು, ಕರಾವಳಿಯ ಜನತೆ ಸಂತಸ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ. ಪ್ರತಿ ವರ್ಷ ಜನವರಿ ಇರ್‌ವತ್ತ ಆಜೆಕ್ಕ್‌ (26) ಲೋಕೊಡು ನಮ್ಮ ಭಾರತ ದೇಶದ ಗಣರಾಜ್ಯೋತ್ಸವನ್‌ ಬಾರೀ ಗೌಜಿಡ್‌ […]

ತುಳು ಭಾಷೆಗೆ ಮಾನ್ಯತೆ ನೀಡಲು ಆಗ್ರಹ : ಮುಖ್ಯಮಂತ್ರಿಯವರಿಗೆ ಶಾಸಕ ವೇದವ್ಯಾಸ್ ಕಾಮತ್ ಮನವಿ

Wednesday, February 19th, 2020
vedhavyas

ಮಂಗಳೂರು : ಕರಾವಳಿ ಭಾಗದ ಜನರ ಮಾತೃಭಾಷೆಯಾಗಿರುವ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಆಗ್ರಹಿಸಿ ಶಾಸಕ ವೇದವ್ಯಾಸ್ ಕಾಮತ್ ಅವರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದಾರೆ. ಕರಾವಳಿ ಭಾಗದ ಜನರ ಮಾತೃಭಾಷೆಯಾಗಿರುವ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ಹಾಗೂ ಅದನ್ನು ಅದಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ಕರಾವಳಿಗರಿಂದ ತೀವ್ರವಾದ ಆಗ್ರಹಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕರಾವಳಿ ಶಾಸಕ ವೇದವ್ಯಾಸ್ ಕಾಮತ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರ ಕಚೇರಿಯಲ್ಲಿ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯೆ […]