ಮೀಂಜ ಪಂ. ಸದಸ್ಯೆ ಯಶೋಧ ಆಳ್ವ ನಿಧನ

Thursday, September 1st, 2016
Yashodha-alwa

ಮಂಜೇಶ್ವರ: ಮೀಂಜ ಗ್ರಾಮ ಪಂಚಾಯತ್‌ನ ಸದಸ್ಯೆ, ಹೊಸಂಗಡಿ ಬಳಿಯ ಕೊಡ್ಡ್ಡೆ ಮಜಿಬೈಲು ನಿವಾಸಿ ಚಂದ್ರಹಾಸ ಆಳ್ವರ ಪತ್ನಿ ಯಶೋಧ ಆಳ್ವ(57) ಮಂಗಳವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಳೆದ ಕೆಲವು ತಿಂಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ಪತಿ, ಇಬ್ಬರು ಪುತ್ರಿಯರು,ಪುತ್ರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ. ಕಳೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಮೀಂಜ ಗ್ರಾಮ ಪಂಚಾಯತ್‌ನ 11ನೇ ವಾರ್ಡ್ ಮಜಿಬೈಲ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ವಲಯದಲ್ಲಿ ಸಕ್ರಿಯರಾಗಿದ್ದ […]

ಬಂಟರು ಎಲ್ಲಾ ಸಮಾಜದ ಅಭ್ಯುದಯಕ್ಕೆ ಶ್ರಮಿಸುವಂತಾಗಲಿ : ಸಾದ್ವಿ ಮಾತಾನಂದಮಯಿ

Saturday, March 12th, 2016
bunts-woman

ಮಂಜೇಶ್ವರ: ಬಂಟ ಮಹಿಳೆಯು ಹಿಂದಿನಿಂದಲೂ ನಾಯಕತ್ವದ ವರ್ಚಸ್ಸು ಪಡೆದವಳಾಗಿದ್ದು, ಇತರ ಶೋಷಿತ ಸಮುದಾಯದವರಿಗೂ ಆಶ್ರಯ ಕಲ್ಪಿಸುತ್ತಾ ನ್ಯಾಯ ನೀತಿಯನ್ನು ಎತ್ತಿ ಹಿಡಿದ ಪರಂಪರೆ ಉಳ್ಳವಳಾಗಿದ್ದಾಳೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯೀ ಅಭಿಪ್ರಾಯಪಟ್ಟರು. ಇತ್ತೀಚೆಗೆ ನಡೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಮಂಜೇಶ್ವರ ಪಂಚಾಯತ್‌ಗೆ ಕುಂಜತ್ತೂರು ನಾಲ್ಕನೇ ವಾರ್ಡಿನಿಂದ ಜನಪ್ರತಿನಿಧಿಯಾಗಿ ಆಯ್ಕೆಯಾದ ಶೋಭಾ ವಿ.ಶೆಟ್ಟಿ ಅವರನ್ನು ಮಂಜೇಶ್ವರ ಬಂಟರ ಸಂಘದ ವತಿಯಿಂದ ತಲಪಾಡಿ ವಿಶ್ವಾಸ್ ಆಡಿಟೋರಿಯಂನಲ್ಲಿ ಸಮ್ಮಾನಿಸಿ ಮಾತನಾಡುತ್ತಿದ್ದರು. ಜನಪ್ರತಿನಿಧಿಯಾಗಿ ಆಯ್ಕೆಯಾದ ಬಂಟ ಸಮಾಜದ ಸದಸ್ಯರು ಸರ್ವ […]

ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಚರ್ಮದ ಆರೈಕೆಯ ಗುಟ್ಟುಗಳ ಮಾಹಿತಿ

Thursday, July 30th, 2015
chethana

ಮಂಗಳೂರು, : ಭಾರತದ ಮುಂಚೂಣಿಯ ಗಿಡಮೂಲಿಕೆಯ ಆರೋಗ್ಯ ಮತ್ತು ವೈಯಕ್ತಿಕ ಆರೈಕೆಯ ಕಂಪನಿ ದಿ ಹಿಮಾಲಯ ಡ್ರಗ್ ಕಂಪನಿ ಮಂಗಳೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಪ್ಯೂರ್ ಸ್ಕಿನ್ ಫೇಷಿಯಲ್ ಚಟುವಟಿಕೆಯನ್ನು ನಡೆಸಿತು. ಈ ಕಾರ್ಯಕ್ರಮವನ್ನು ಖ್ಯಾತ ಬ್ಯೂಟಿಷಿಯನ್ ಚೇತನಾ ನಡೆಸಿಕೊಟ್ಟಿದ್ದು ನಿಮ್ಮ ಚರ್ಮವನ್ನು ಮೃದು ಹಾಗೂ ಆಕರ್ಷಕಗೊಳಿಸುವ ವಿವಿಧ ಫೇಷಿಯಲ್ ತಂತ್ರಗಳನ್ನು ನಿರೂಪಿಸಿದರು. ನಿಮ್ಮ ಚರ್ಮದ ಬಗ್ಗೆ ಚಿಕ್ಕ ವಯಸ್ಸಿನಲ್ಲಿಯೇ ಎಚ್ಚರಿಕೆ ವಹಿಸುವುದರಿಂದ ವಯಸ್ಸಾಗುವಿಕೆಯ ಪರಿಣಾಮ ಕಡಿಮೆಯಾಗುತ್ತದೆ ಮತ್ತು ನೀವು ಆಕರ್ಷಕವಾಗಿ ಕಾಣುತ್ತೀರಿ. ಚರ್ಮದ ಆರೈಕೆ ಎಂದರೆ […]