ಜೂನ್ 1 ರಿಂದ ನಂದಿನಿ ಗ್ರಾಹಕರಿಗೆ ಉಚಿತವಾಗಿ ‘ಹೆಚ್ಚು ಹಾಲು ಕುಡಿಯಿರಿ’ ಆಫರ್

Monday, May 31st, 2021
Free Milk

ಮಂಗಳೂರು  : ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಹಾಲು ಉತ್ಪಾದನೆ ಅಧಿಕವಾಗಿದ್ದು, ಎಲ್ಲಾ ಮಾದರಿಯ ನಂದಿನಿ 500 ಮಿ.ಲೀ. ಹಾಗೂ 1 ಲೀ. ಹಾಲಿನ ಪೊಟ್ಟಣಗಳ ಮೇಲೆ ಉಚಿತವಾಗಿ ಗ್ರಾಹಕರಿಗೆ ಜೂನ್ 1 ರಿಂದ ಹೆಚ್ಚುವರಿ ಹಾಲು ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಲಾಕ್‌ಡೌನ್ ಪರಿಣಾಮ ಶುಭ-ಸಮಾರಂಭ, ದೇವಸ್ಥಾನ, ವಿದ್ಯಾ ಸಂಸ್ಥೆ ಹಾಸ್ಟೆಲ್, ಹೋಟೆಲ್‌ಗಳಿಗೆ ನಿರ್ಬಂಧವಿರುವುದರಿಂದ ಹಾಲು ಮತ್ತು ಮೊಸರು ಮಾರಾಟದಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ರಾಜ್ಯಾದ್ಯಂತ ಕೊರೋನಾ ಸೋಂಕಿನ 2ನೇ ಅಲೆಯು ತೀವ್ರವಾಗಿದ್ದು, ದಿನಾಂಕ 28-04-2021 ರಿಂದ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ, ಕ್ಲಿಷ್ಟಕರ […]

ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸದಸ್ಯರಿಂದ ಮಾರ್ಚ್ 30 ರಿಂದ ಸಂಜೆ ಸರದಿಯಿಂದ ಹಾಲು ಖರೀದಿ ಆರಂಭ

Monday, March 30th, 2020
GVhegde

ಮಂಗಳುರು : ದಕ್ಷಿಣ ಕನ್ನಡ ಹಾಲು ಹಾಲು ಒಕ್ಕೂಟದ ಪ್ರಾಥಮಿಕ ಸಹಕಾರ ಸಂಘದ ಸದಸ್ಯರಿಂದ ಹಾಲನ್ನು ಮಾರ್ಚ್ 30 ಸೋಮವಾರ ಸಂಜೆ ಸರದಿಯಿಂದ  ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ಹೆಗ್ಗಡೆಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಾರ್ಚ್ 29 ಮತ್ತು ಮಾರ್ಚ್ 30; ಹಾಲು ಉತ್ಪಾದಕರಿಂದ ಹಾಲು ಖರೀದಿ ಇಲ್ಲ: ದಕ್ಷಿಣ ಕನ್ನಡ ಹಾಲು ಒಕ್ಕೂಟ

Saturday, March 28th, 2020
milk

ಮಂಗಳೂರು : ಮಾರ್ಚ್ 28ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಂದಿನಿ ಹಾಲಿನ ಬೂತ್ ಗಳು ಗ್ರಾಹಕರಿಗೆ ಸೇವೆ ನೀಡಲು ಸಾಧ್ಯವಾಗದೇ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿರುತ್ತದೆ. ಈ ಕಾರಣದಿಂದ ಪ್ರಸ್ತುತ ಪರಿಸ್ಥಿತಿಯನ್ನು ಸರಿದೂಗಿಸುವ ಅನಿವಾರ್ಯತೆಯಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಾರ್ಚ್ 29 ಮತ್ತು ಮಾರ್ಚ್ 30 ರಂದು ಬೆಳಿಗ್ಗೆ ಹಾಗೂ ಸಾಯಂಕಾಲದ ಎರಡೂ ಸರದಿಗಳಲ್ಲಿ ಉಭಯ ಜಿಲ್ಲೆಗಳ ಹಾಲು ಉತ್ಪಾದಕರಿಂದ ಹಾಲು ಖರೀದಿಸುವುದನ್ನು ಸ‍್ಥಗಿತಗೊಳಿಸಿದೆ. ಆದರೆ ಈ ಸಂದರ್ಭದಲ್ಲಿ […]

ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ವಿನೂತನ ರೀತಿಯಲ್ಲಿ ಮತದಾರರ ಜಾಗೃತಿ

Monday, April 7th, 2014
Milk Federation

ಮಂಗಳೂರು : ಲೋಕಸಭಾಚುನಾವಣೆ 2014 ರಅಂಗವಾಗಿ ಮತದಾರರನ್ನು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಸಲುವಾಗಿ ದಕ್ಷಿಣಕನ್ನಡ ಹಾಲು ಒಕ್ಕೂಟವು ನಂದಿನಿ ಹಸುವಿನ ಹಾಲಿನ ಪ್ಯಾಕೆಟ್ ಗಳ ಮೇಲೆ ಜಾಗೃತಿ ಸಂದೇಶವನ್ನುದಿನಾಂಕ 02-04-2014 ರಿಂದ ಮುದ್ರಿಸುತ್ತಿದೆ. ಜಿಲ್ಲೆಯಸಾರ್ವಜನಿಕರಿಗೆಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಮಾಡುವ ನಿಟ್ಟಿನಲ್ಲಿ sveep ಕಾರ್ಯಕ್ರಮದಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದಿನವಹಿ ಸುಮಾರು 4,32,000 ಪ್ಯಾಕೆಟ್ ಗಳಲ್ಲಿ ಚುನಾವಣೆ ಮುಗಿಯುವತನಕ ಈ ಜಾಗೃತಿ ಸಂದೇಶ ಮೂಡಿ ಬರಲಿದೆ. ಅಲ್ಲದೆ, ದಕ್ಷಿಣಕನ್ನಡ ಹಾಲು ಒಕ್ಕೂಟದ ಆಡಳಿತ ಮಂಡಲಿ […]