ನಂದನ್ ನಿಲೇಕಣಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

Monday, March 10th, 2014
Nandan-Nilekani

ಬೆಂಗಳೂರು: ‘ಆಧಾರ್‌’ ವಿಶೇಷ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಅವರು ಭಾನುವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ಸಮ್ಮುಖದಲ್ಲಿ ಇಂದು ಬೆಳಗ್ಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಿಲೇಕಣಿ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಸಚಿವರು ಹಾಗೂ ಶಾಸಕರು ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ನಿಲೇಕಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದ್ದು, […]

ಸರಕಾರಿ ಆಧಾರ್: ನಿಲೇಕಣಿ ವಿರುದ್ಧ ಬಿಜೆಪಿ ದೂರು

Saturday, March 8th, 2014
Nandan-Nilekani

ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಘೋಷಿತ ಅಭ್ಯರ್ಥಿ ನಂದನ್ ನಿಲೇಕಣಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ. ಸದ್ಯಕ್ಕೆ ‘ಆಧಾರ್’ ಯೋಜನೆಯ ಅಧ್ಯಕ್ಷರಾಗಿರುವ ನಂದನ್ ನಿಲೇಕಣಿ ಅವರು ತಮ್ಮ ಅಧಿಕಾರ ಸ್ಥಾನವನ್ನು ದುರುಪಯೋಗ ಮಾಡಿಕೊಂಡು ಕೇಂದ್ರದ ಆಧಾರ್ ಸರಕಾರಿ ಯೋಜನೆಯನ್ನು ತಮ್ಮ ಸ್ವಂತ ಕಾರ್ಯಕ್ರಮದಂತೆ ಕ್ಷೇತ್ರದಾದ್ಯಂತ ಬಿಂಬಿಸಿಕೊಳ್ಳುತ್ತಿದ್ದಾರೆ. ಇದರಿಂದ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ದೂರಿನಲ್ಲಿ ಬಿಜೆಪಿ ಗಮನ ಸೆಳೆದಿದೆ. ಸರಕಾರಿ ಆಧಾರ್: ನಿಲೇಕಣಿ ವಿರುದ್ಧ ಬಿಜೆಪಿ ದೂರು ಮಾರ್ಚ್ 5ರಿಂದ ದೇಶಾದ್ಯಂತ […]

ಲೋಕಸಮರದತ್ತ ನಂದನ್ ಚಿತ್ತ, ‘ಆಧಾರ್‌’ಗೆ ರಾಜಿನಾಮೆ

Friday, February 21st, 2014
Nandan-Nilekani

ನವದೆಹಲಿ: ವಿಶಿಷ್ಟ ಗುರುತಿನ ಪತ್ರ ಪ್ರಾಧಿಕಾರ(ಆಧಾರ್)ದ ಅಧ್ಯಕ್ಷ ಸ್ಥಾನಕ್ಕೆ ನಂದನ್ ನಿಲೇಕಣಿ ಅವರು ರಾಜಿನಾಮೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದ ನಂದನ್ ನಿಲೇಕಣಿ ಅವರು ಯುಐಡಿಐ (ಆಧಾರ್) ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಇನ್ಫೋಸಿಸ್ ಸಂಸ್ಥೆ ಸಹ ಸಂಸ್ಥಾಪಕರಾಗಿದ್ದ ನಂದನ್ ನಿಲೇಕಣಿ ಅವರನ್ನು 2009ರಲ್ಲಿ ಕೇಂದ್ರದ ಯುಪಿಎ ಸರ್ಕಾರ ‘ಆಧಾರ್‌’ ಯೋಜನೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ನಂತರ ಅವರು ತಮ್ಮ ಇನ್ಫೋಸಿಸ್ ಸಂಸ್ಥೆಯನ್ನು ತೊರೆದಿದ್ದರು. ದೇಶದ ಅತಿದೋಡ್ಡ ಗುರುತಿನ ಚೀಟಿ ಯೋಜನೆಯಾಗಿರುವ ‘ಆಧಾರ್‌’ ಯೋಜನೆ, […]