ನಂದಿನಿ ನದಿಗೆ ಕಿಂಡಿ ಅಣೆಕಟ್ಟು: ನೀರಿನ ಬವಣೆಗೆ ಪರಿಹಾರ ನಿರೀಕ್ಷೆ

Thursday, November 30th, 2017
Nandini-river

ಹಳೆಯಂಗಡಿ: ನಂದಿನಿ ನದಿಯ ಸಿಹಿ ನೀರು ನೇರವಾಗಿ ಸಮುದ್ರಕ್ಕೆ ಸೇರಿ ಉಪ್ಪಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೊಂದು ಡ್ಯಾಂ ಕಟ್ಟಿ ಈ ಭಾಗದ ಕುಡಿಯುವ ನೀರಿನ ಬವಣೆ ನಿವಾರಿಸುವ ಪ್ರಕ್ರಿಯೆಗೆ ಮಂಗಳೂರು ತಾ.ಪಂ.ನ ಪಡಸಾಲೆಯಿಂದ ಚಾಲನೆ ದೊರಕಿದ್ದು, ಬೃಹತ್‌ ಯೋಜನೆ ತ್ವರಿತವಾಗಿ ಅನುಷ್ಠಾನಗೊಂಡರೆ ನಾಲ್ಕರಿಂದ ಐದು ಗ್ರಾ.ಪಂ.ಗಳಿಗೆ ಅನುಕೂಲವಾಗಲಿದೆ. ನಂದಿನಿ ತಟದಲ್ಲಿರುವ ಚೇಳಾಯಿರು, ಪಾವಂಜೆಯ ನಿವಾಸಿಗಳೂ ಕುಡಿಯುವ ನೀರಿನ ಅಭಾವದಿಂದ ಬಳಲುತ್ತಿದ್ದಾರೆ. ಸಮಸ್ಯೆ ಪರಿಹರಿಸಲು ನಂದಿನಿ ನದಿಯ ಹತ್ತಿರದ ಗ್ರಾಮ ಪಂಚಾಯತ್‌ಗಳು ಈಗಲೇ ಇನ್ನಿಲ್ಲದೆ ಕಸರತ್ತು ನಡೆಸುತ್ತಿವೆ. ಸದ್ಯದ ಸ್ಥಿತಿ […]

ಹಳೆಯಂಗಡಿ: ನೂತನ ಸೇತುವೆಯಿಂದ ಏಕಾಏಕಿ ನಂದಿನಿ ನದಿಗೆ ಹಾರಿದ ಯುವಕ

Friday, October 6th, 2017
haleyangadi

ಮಂಗಳೂರು: ಸಸಿಹಿತ್ಲು- ಕದಿಕೆಯ ನೂತನ ಸೇತುವೆಯಿಂದ ಅಪರಿಚಿತ ಯುವಕನೋರ್ವ ನಂದಿನಿ ನದಿಗೆ ಹಾರಿದ್ದಾನೆ ಎಂಬ ಮಾಹಿತಿಯಿಂದ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ತೀವ್ರ ಶೋಧ ನಡೆಸಿದ ಘಟನೆ ಅ. 5ರಂದು ನಡೆದಿದೆ. ಸಸಿಹಿತ್ಲುವಿನ ಶ್ರೀ ಭಗವತೀ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನೂತನ ಸೇತುವೆಯಿಂದ ಏಕಾಏಕಿ ಯುವಕನೋರ್ವ ನದಿಗೆ ಹಾರಿದ್ದನ್ನು ಮಹಿಳೆಯೋರ್ವರು ನೋಡಿದ್ದಾರೆ ಎಂದು ಮೂಲ್ಕಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿತ್ತು. ತತ್‌ಕ್ಷಣ ಪೊಲೀಸರು ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಡಿದರು ಆನಂತರ ಮಂಗಳೂರಿನಿಂದ ಬಂದ ಅಗ್ನಿಶಾಮಕ ದಳದವರು […]

ಖಂಡಿಗೆ : ಪಾವಂಜೆ ನಂದಿನಿ ಸುದೆಟ್ ಮೀನ್ ಪತ್ತುನ ಸಾಮೂಹಿಕ ಜಾತ್ರೆ

Saturday, May 16th, 2015
kandevu Fish festival

ಮಂಗಳೂರು : ಸುರತ್ಕಲ್ ಸಮೀಪದ ಚೆಳೈರುವಿನ ಖಂಡಿಗೆ ಜಾತ್ರೆಯಲ್ಲಿ ಪಾವಂಜೆ ಬಳಿಯ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಸಾಮೂಹಿಕ ಜಾತ್ರೆಯು ಶುಕ್ರವಾರ ಮೇ 15 ರಂದು ನಡೆಯಿತು. ಈ ಸಂಪ್ರದಾಯ ಶಾಸ್ತ್ರೋಕ್ತವಾಗಿ ನೆರವೇರಿದ್ದು ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು. ಚೇಳೈರು ಗ್ರಾಮದ ಧರ್ಮರಸು ಕ್ಷೇತ್ರದ ಖಂಡೇವು ನೇಮೋತ್ಸವದ ಮುಕ್ತಾಯದ ಹಂತವಾಗಿ, ಈ ಸಂಪ್ರದಾಯ ನಡೆ ದಿದ್ದು, ವಿಶೇಷ ಪ್ರಾರ್ಥನೆಯೊಂದಿಗೆ ಪ್ರಸಾದವನ್ನು ಪಾವಂಜೆ ನಂದಿನಿ ನದಿಗೆ ಹಾಕಿ ಕದೋನಿ ಬಿಟ್ಟ ಬಳಿಕ ನಂದಿನಿ ನದಿಯಲ್ಲಿ ಮೀನು ಹಿಡಿಯಬಹುದು. ಮುಂಜಾನೆಯಿಂದ […]