ನಂದಿನಿ ಹಾಲಿನ ಡೀಲರುಗಳಿಗೆ ಸಹಾಯ ಹಸ್ತ – ಪ್ರತಿ ಕ್ರೇಟಿಗೆ ರೂ.2.40 ರಂತೆ ಹೆಚ್ಚುವರಿ ಲಾಭಾಂಶ ವಿತರಣೆ

Thursday, July 1st, 2021
nandini-milk

ಮಂಗಳೂರು  : ಕೋವಿಡ್-19ರ ಸಂಕಷ್ಠ ಸಂದರ್ಭದಲಿ ಹಾಲು ಮಾರಾಟಗಾರರು (ಡೀಲರುಗಳು) ಗ್ರಾಹಕರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಕಾಲದಲ್ಲಿ ಮಾರಾಟ ಮಾಡುತ್ತಿದ್ದು, ಕೋವಿಡ್ ಪರಿಸ್ಥಿತಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಡೀಲರುಗಳನ್ನು ಪ್ರೋತ್ಸಾಹಿಸಲು ಹಾಗೂ ಮುಂಜಾಗ್ರತಾ ಕ್ರಮಗಳಿಗೆ ತಗಲುತ್ತಿರುವ ವೆಚ್ಚಕ್ಕಾಗಿ ಸಹಾಯ ಹಸ್ತ ನೀಡಲು ಉದ್ದೇಶಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ದಿನಾಂಕ 10.06.2021 ರಿಂದ 10.07.2021ರ ಅವಧಿಗೆ ಎಲ್ಲಾ ಮಾದರಿಯ ನಂದಿನಿ ಹಾಲಿನ ಮಾರಾಟದ ಮೇಲೆ ಪ್ರತಿ ಕ್ರೇಟಿಗೆ ರೂ.2.40 (ಪ್ರತೀ ಲೀಟರಿಗೆ ರೂ.0.20ರಂತೆ)ನ್ನು ಡೀಲರುಗಳ ಬ್ಯಾಂಕ್ ಖಾತೆಗೆ […]

ಕೋವಿಡ್-19 ನಿಂದ ನಂದಿನಿ ಹಾಲಿನ ವ್ಯವಹಾರ ರೂ.30.00 ಕೋಟಿ ಕುಸಿತ, ಹಾಲಿನ ಹುಡಿ ದರ ರೂ.160ಕ್ಕೆ ಇಳಿಕೆ

Saturday, June 20th, 2020
nandini Milk

ಮಂಗಳೂರು  : ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿ, ದಿನವಹಿ 5.0 ಲಕ್ಷ ಕೆಜಿಗೂ ಮೀರಿ ಹಾಲು ಸಂಗ್ರಹಣೆಯಾಗುತ್ತಿದೆ. ಕೋವಿಡ್-19ರ ಸಮಸ್ಯೆಯಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕರ್ನಾಟಕ  ಹಾಲು ಮಹಾಮಂಡಳಿಗೆ ದಿನವಹಿ 86.73 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು, ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು ಶೇ.25ರಷ್ಟು ಕುಸಿತವಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ 39.54 ಲಕ್ಷ ಲೀಟರ್ ಬಳಕೆಯಾಗಿ, ದಿನವಹಿ 47.19 ಲಕ್ಷ ಲೀಟರ್ […]

ಬಿಜೆಪಿ ಸರಕಾರದ ಅಬಕಾರಿ ಇಲಾಖೆ ನಂದಿನಿ ಹಾಲು ಮಾರುತ್ತಿತ್ತೇ ? ಕಾಂಗ್ರೆಸ್ ಪ್ರಶ್ನೆ

Friday, April 5th, 2019
Modi-shop

ಮಂಗಳೂರು : ಬಿಜೆಪಿ ಸರ್ಕಾರವಿದ್ದಾಗ ಅಬಕಾರಿ ಇಲಾಖೆ ಸಚಿವರಾಗಿದ್ದ ಎಂ.ಪಿ. ರೇಣುಕಾಚಾರ್ಯ ಅವರೇನು ನಂದಿನಿ ಹಾಲು ಪ್ಯಾಕೇಟುಗಳನ್ನು ಮಾರಾಟ ಮಾಡುತ್ತಿದ್ರ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಬಾರ್ ನಡೆಸುವವರ ಕಟ್ಟಡದಲ್ಲಿ ಚುನಾವಣಾ ಕಚೇರಿ ಮಾಡುವುದು ಸಂಸ್ಕೃತಿ ವಿರೋಧ ಮತ್ತು ಅನೈತಿಕವೆಂದು ಶಾಸಕ ವೇದವ್ಯಾಸ ಕಾಮತ್ ಅವರು ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮೇಯರ್ ಮಹಾಬಲ ಮಾರ್ಲ ಅವರು, ಬಿಜೆಪಿ ಶಾಸಕರ ಸ್ನೇಹಿತರು ಬಾರುಗಳಲ್ಲಿ ಗೋವಿನ ಹಾಲು ಮಾರಾಟ ಮಾಡುತ್ತಿದ್ದಾರೆಯೇ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ. ಬಿಜೆಪಿಯವರ ಪ್ರಕಾರ ಕಾನೂನು […]

ಕ್ವಾಲಿಟಿ ಮಾರ್ಕ್ ಲೋಗೊದೊಂದಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಿಡುಗಡೆ ಸಮಾರಂಭ

Thursday, October 12th, 2017
nandini milk

ಮಂಗಳೂರು: ಪ್ರತಿಷ್ಠಿತ ಕ್ವಾಲಿಟಿ ಮಾರ್ಕ್ ಲೋಗೊದೊಂದಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹೊರತಂದಿದ್ದು ಇದರ ಬಿಡುಗಡೆ ಸಮಾರಂಭ ಬುಧವಾರ ನಗರದಲ್ಲಿ ನಡೆಯಿತು. ಕ್ವಾಲಿಟಿ ಮಾರ್ಕ್‌ನೊಂದಿಗೆ ನಂದಿನಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಕೆಎಂಎಫ್ ಕ್ವಾಲಿಟಿ ಮಾರ್ಕ್‌ನ್ನು ಪಡೆಯುವ ಮೂಲಕ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡಿದೆ. ಹಾಲು ಉತ್ಪಾದನೆಯ ಮೂಲಕ ದೇಶ ಸ್ವಾವಲಂಬನೆ ಸಾಧಿಸಿದೆ. ಕೆಎಂಎಫ್ ಮೂಲಕ ರೈತರಿಗೆ ಹಾಗೂ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಿದೆ. […]