ಗ್ರಾಮಾಂತರ ರಿಕ್ಷಾಗಳ ನಗರ ಪ್ರವೇಶ ವಿರೋಧಿಸಿ ವಿವಿಧ ರಿಕ್ಷಾ ಸಂಘಟನೆಗಳಿಂದ ಪ್ರತಿಭಟನೆ
Friday, July 12th, 2013ಮಂಗಳೂರು: ಗ್ರಾಮಾಂತರ ರಿಕ್ಷಾಗಳು ಮಂಗಳೂರು ನಗರವನ್ನು ಪ್ರವೇಶಿಸುವುದನ್ನು ವಿರೋಧಿಸಿ ಮಂಗಳೂರಿನ ವಿವಿಧ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಶುಕ್ರವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಜ್ಯೊತಿ ವೃತ್ತ ದಿಂದ ಮೆರವಣಿಗೆ ಮೂಲಕ ಬಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ದ.ಕ ಜಿಲ್ಲಾ ಆಟೋರಿಕ್ಷಾ ಸಮನ್ವಯ ಸಮಿತಿಯ ಅಧ್ಯಕ್ಷರಾದ ಅಲಿಹಸನ್ ಮಾತನಾಡಿ, ಗ್ರಾಮಾಂತರ ರಿಕ್ಷಾಗಳು ಕಾನೂನು ಬಾಹಿರವಾಗಿ ನಗರದೊಳಗೆ ಪ್ರವೇಶಿಸಿ ಬಾಡಿಗೆ ಮಾಡುತ್ತಿದೆ. ಗ್ರಾಮದಲ್ಲಿ ಸುಮಾರು 20 ಸಾವಿರ ರಿಕ್ಷಾಗಳು ಒಡಾಡುತ್ತಿವೆ. […]