ಗಾಂಜಾ ಸೇವನೆ ತಪ್ಲಲ್ಲ. ಗಾಂಜಾ ಗಿಡ ತುಳಸಿ ಗಿಡಕ್ಕೆ ಸಮ ಎಂದ ನಟಿ ವಿರುದ್ಧ ಎಫ್‍ಐಆರ್

Friday, September 4th, 2020
ಗಾಂಜಾ ಸೇವನೆ ತಪ್ಲಲ್ಲ. ಗಾಂಜಾ ಗಿಡ ತುಳಸಿ ಗಿಡಕ್ಕೆ ಸಮ ಎಂದ ನಟಿ ವಿರುದ್ಧ ಎಫ್‍ಐಆರ್

ಬೆಂಗಳೂರು :  ಗಾಂಜಾ ತುಳಸಿ ಗಿಡ ಇದ್ದಂತೆ ಎಂದು ವಿವಾದಿತ ಹೇಳಿಕೆ ನೀಡಿದ್ದ ನಟಿ ನಿವೇದಿತಾ ವಿರುದ್ಧ ಇಲ್ಲಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ. ಗಾಂಜಾ ಸೇವನೆ ತಪ್ಲಲ್ಲ. ಗಾಂಜಾ ಗಿಡ ತುಳಸಿ ಗಿಡಕ್ಕೆ ಸಮ ಎಂದು ನಿವೇದಿತಾ ಹೇಳಿದ್ದರು. ಈ ಹೇಳಿಕೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಎ.ದೀಪಕ್ ಎಂಬುವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರು ಆಧರಿಸಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿನ್ನರಿ ಧಾರಾವಾಹಿಯ ನಟಿ ಭೂಮಿ ಈಗ ಬೈದೂಂರಿನಲ್ಲಿ ಗೊಬ್ಬರ ಹೊರುತ್ತಿದ್ದಾರೆ

Tuesday, July 21st, 2020
bhoomi shetty

ಉಡುಪಿ: ಕಲರ್ಸ್ ಕನ್ನಡದ ಕಿನ್ನರಿಯಲ್ಲಿ ನಾಯಕಿ ನಟಿಯಾಗಿದ್ದ ಬೈಂದೂರಿನ  ಭೂಮಿ ಶೆಟ್ಟಿ ಈಗ ಭತ್ತದ ಗದ್ದೆಗೆ ಗೊಬ್ಬರ ಹೊತ್ತು, ನಾಟಿ ಮಾಡಿ ಬೆಳಗ್ಗಿನಿಂದ ಸಂಜೆವರೆಗೂ ಬೆವರು ಸುರಿಸಿ ದುಡಿಯುತ್ತಿದ್ದಾರೆ. ಕಿರುತೆರೆಯಲ್ಲಿ ಖ್ಯಾತಿಗಳಿಸಿ, ಬಿಗ್ಬಾಸ್‌ ಸೀಸನ್‌ 7ರಲ್ಲಿ ಫೈನಲ್ ಸ್ಪರ್ಧಿಯಾಗಿ ಗುರುತಿಸಿಕೊಂಡ ಕರಾವಳಿ ಹುಡುಗಿ ಭೂಮಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆ ಬೈದೂಂರು ತಾಲೂಕಿನ ಬೀಜೂರು ಗ್ರಾಮದ ಗಂಟಿಹೊಳೆಯವರು. ವಿದ್ಯಾಭ್ಯಾಸ ನಟನೆ ಅಂತ ಬೆಂಗಳೂರಿನಲ್ಲೇ  ಇದ್ದ ಅವರಿಗೆ ಸಾಧ್ಯ ಈ ಪರಿಸ್ಥಿತಿ ಬಂದಿದೆ.  ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಸಹವಾಸವೇ ಬೇಡ ಎಂದು […]