ಕಂದಾವರ ಮಸೀದಿ ಬಳಿ ವ್ಯಕ್ತಿಯೊಬ್ಬರ ಮೇಲೆ ತಲವಾರು ದಾಳಿ

Monday, November 16th, 2020
Kandavara Attack

ಮಂಗಳೂರು : ಉದ್ಯಮಿಯೊಬ್ಬರ ಮೇಲೆ ಇಬ್ಬರು ಯುವಕರು ತಲವಾರು ದಾಳಿ ನಡೆಸಿ ಪರಾರಿಯಾದ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾವರ ಬಳಿ‌ ರವಿವಾರ ರಾತ್ರಿ‌  ನಡೆದಿದೆ. ಕಂದಾವರ ಕೈಕಂಬದ ಅಬ್ದುಲ್ ಅಝೀಝ್ (56)ದಾಳಿಗೊಳಗಾದ ಉದ್ಯಮಿ. ಅವರು ರಾತ್ರಿ ಸುಮಾರು 10:30ಕ್ಕೆ ಮಸೀದಿಯಲ್ಲಿ ನಮಾಝ್ ಮಾಡಿ ಮನೆಗೆ ಮರಳಲು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿದ್ದಾಗ ಇಬ್ಬರು ಯುವಕರು ತಲವಾರಿನಿಂದ ಅಝೀಝ್ ಅವರ ತಲೆ, ಕೈ, ಕಾಲಿಗೆ ಕಡಿದು, ಗಂಭೀರ ಗಾಯಗೊಳಿಸಿ, ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ಅಝೀಝ್ […]

ಕೋವಿಡ್ -19 ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಿದ ಮುಸ್ಲಿಮರು

Friday, July 31st, 2020
eid

ಮಂಗಳೂರು : ಕೋವಿಡ್ -19 ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಲು ಸರಕಾರ ಹೊರಡಿಸಿದ ಮಾರ್ಗಸೂಚಿಯಂತೆ ಅಂತರ ಕಾಪಾಡುವುದರೊಂದಿಗೆ ಜುಲೈ 31 ರಂದು ಮಸೀದಿಗಳಲ್ಲಿ ಸಾಮೂಹಿಕವಾಗಿ ಮುಸ್ಲಿಮರು ನಮಾಝ್ ನಿರ್ವಹಿಸಿದರು. ಈದ್ಗಾದಲ್ಲಿ ಸಾಮೂಹಿಕ ನಮಾಝ್ ಮತ್ತು ಈದ್ ಖುತ್ಬಾಕ್ಕೆ ನಿರ್ಬಂಧ ವಿಧಿಸಲಾದ ಕಾರಣ ಇದೇ ಮೊದಲ ಬಾರಿಗೆ ಮಂಗಳೂರು ಸಹಿತ ಜಿಲ್ಲೆಯ ಯಾವುದೇ ಈದ್ಗಾಗಳಲ್ಲಿ ನಮಾಝ್, ಈದ್ ಖುತ್ಬಾ ನಡೆಯಲಿಲ್ಲ. ಬಹುತೇಕ ಮಸೀದಿಗಳಲ್ಲಿ ತಲಾ 50 ಮಂದಿಯಂತೆ ಸರದಿ ಸಾಲಿನಲ್ಲಿ ನಮಾಝ್ ನಿರ್ವಹಿಸಿದರು. 60 ವರ್ಷಕ್ಕಿಂತ ಮೇಲ್ಪಟ್ಟ ಮತ್ತು […]

ಮಸೀದಿಗಳಲ್ಲಿ ನಮಾಝ್ ಸದ್ಯಕ್ಕಿಲ್ಲ : ಮುಸ್ಲಿಂ ಸೆಂಟ್ರಲ್‌ ಕಮಿಟಿ

Sunday, June 7th, 2020
jamia masjid

ಮಂಗಳೂರು : ಮಸೀದಿಗಳನ್ನು ಜೂ. 8ರಿಂದ ತೆರೆಯಲು ಸರಕಾರ ಅವಕಾಶ ಮಾಡಿಕೊಟ್ಟರೂ ಮುಂದೆ ಮಸೀದಿಗೆ ಸಂಬಂಧಿಸಿದ ನಿರ್ದಿಷ್ಟ ಮಾರ್ಗಸೂಚಿಗ ಳನ್ನು ಪ್ರಕಟಿಸಿದ ಬಳಿಕವೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿಯ ಅಧ್ಯಕ್ಷ ಅಲ್‌ಹಾಜ್‌ ಕೆ.ಎಸ್‌. ಮುಹಮದ್‌ ಮಸೂದ್‌ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್‌ ಮಲ್ಪೆ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಆದರೆ ಮಂಗಳೂರು ಬಂದರ್‌ನ ಝೀನತ್‌ ಭಕ್ಷ್ ಕೇಂದ್ರ ಜುಮ್ಮಾ ಮಸೀದಿಯ […]

ಮಸೀದಿಗಳಲ್ಲಿ ಶುಕ್ರವಾರದ ನಮಾಝ್ ನಿಲ್ಲಿಸಲು ವಕ್ಫ್ ಇಲಾಖೆಯ ಆದೇಶ

Monday, March 23rd, 2020
sindhu b

ಮಂಗಳೂರು : ಧಾರ್ಮಿಕ ಕೇಂದ್ರಗಳಲ್ಲಿ ಜನಜಂಗುಳಿ ಸೇರುವುದನ್ನು ನಿಯಂತ್ರಿಸಲು  ಎಲ್ಲಾ ಮಸೀದಿಗಳಲ್ಲಿ ಶುಕ್ರವಾರದ ಜುಮಾ ನಮಾಝ್ ಸಹಿತ ದಿನದ ಐದು ಬಾರಿಯ ನಮಾಝ್‌ಗಳನ್ನು ಮಾ.31ರವರೆಗೆ ನಿಲ್ಲಿಸಲು ವಕ್ಫ್ ಇಲಾಖೆಯ ಕಾರ್ಯದರ್ಶಿ ಆದೇಶಿಸಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿಯ ಉಲ್ಲೇಖದಂತೆ ಎಲ್ಲರೂ ಮನೆಯಲ್ಲೇ ನಮಾಝ್ ನಿರ್ವಹಿಸಬೇಕು ಮತ್ತು ತುರ್ತು ಹೊರತುಪಡಿಸಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು ಎಂದು ಸೂಚಿಸಿದ್ದಾರೆ. ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಈ ಬಗ್ಗೆ ಪ್ರಕಟನೆ ಹೊರಡಿಸಿ ವಕ್ಫ್ ಇಲಾಖೆಯ ಕಾರ್ಯದರ್ಶಿ ಆದೇಶವನ್ನು ಪಾಲಿಸಲು ಸೂಚಿಸಿದ್ದಾರೆ.

ಕೃಷ್ಣಮಠದ ಆವರಣದಲ್ಲಿ ಮುಸ್ಲಿಮರಿಗೆ ನಮಾಝ್ ಸಲ್ಲಿಸಲು ಅವಕಾಶ ನೀಡಿದ್ದು ಸರಿಯಲ್ಲ : ಮುತಾಲಿಕ್

Monday, June 26th, 2017
Muthalik

ಉಡುಪಿ : ಶ್ರೀಕೃಷ್ಣ ಮಠದಲ್ಲಿ ಜೂ. 24ರಂದು ಆಯೋಜಿಸಲಾಗಿದ್ದ ಇಫ್ತಾರ್ ಕೂಟವನ್ನು ವಿರೋಧಿಸಿ ಶ್ರೀರಾಮಸೇನೆ ಜು.2ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಶ್ರೀರಾಮಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ರೊಂದಿಗೆ ಸೋಮವಾರ ಬೆಳಗ್ಗೆ ಉಡುಪಿಗೆ ಧಾವಿಸಿ ಬಂದು ಚರ್ಚೆ ನಡೆಸಿ ವಿಫಲರಾಗಿದ್ದ ಮುತಾಲಿಕ್, ಅನಂತರ ಸೇನೆಯ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಸಂಜೆ ಸುದ್ದಿಗಾರರಿಗೆ ತಿಳಿಸಿದರು. ಸ್ವಾಮೀಜಿ ಸಮಾಜಕ್ಕೆ ಶ್ರೀಮಠದಲ್ಲಿ ಇಫ್ತಾರ್ […]

ಈದುಲ್‌ ಫಿತರ್‌ ಹಬ್ಬವನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದ ಮುಸ್ಲಿಮರು

Thursday, September 1st, 2011
Edga Ground

ಮಂಗಳೂರು : ದಕ್ಷಿಣ ಕನ್ನಡ ಸೇರಿದಂತೆ ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಬುಧವಾರ ಮುಸ್ಲಿಮರು ತಮ್ಮ ಪವಿತ್ರ ಈದುಲ್‌ ಫಿತರ್‌ ಹಬ್ಬವನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದರು. ಮುಸ್ಲೀಮರು ಬೆಳಗ್ಗಿನಿಂದಲೇ ಮೆರವಣಿಗೆ, ಕುತುಬ್ ಪಾರಾಯಣ ಮತ್ತು ನಮಾಜಿನಲ್ಲಿ ಪಾಲ್ಗೊಂಡರು. ಒಂದು ತಿಂಗಳ ಉಪವಾಸವನ್ನು ಪೂರೈಸುವ ಮುಸ್ಲಿಮರು ಹಬ್ಬದಂದು ಹಬ್ಬದಂದು ಬೆಳಗ್ಗೆ ಬಿಳಿ ವಸ್ತ್ರವನ್ನು ಧರಿಸಿ, ಸಮೀಪದ ಮಸೀದಿಯಲ್ಲಿ ನಮಾಝ್ ಮಾಡಿ, ನಂತರ ಪರಿವಾರ ಸಮೇತ ಹತ್ತಿರದ ಬಂಧುಗಳ ಮನೆಗೆ ಭೇಟಿ, ಶುಭಾಶಯ ವಿನಿಮಯ ಮಾಡಿಕೊಳ್ಳವುದು ಈ ಹಬ್ಬದ ವಿಶೇಷತೆ. ಮುಸ್ಲಿಂ ಯುವಕರು ಹಬ್ಬದ […]