ಕರಾವಳಿಯಾದ್ಯಂತ ನಾಗರಪಂಚಮಿ ಆಚರಣೆ

Friday, August 13th, 2021
Nagarapanchami

ಮಂಗಳೂರು : ನಾಗರಪಂಚಮಿಯನ್ನು ಕರಾವಳಿಯಾದ್ಯಂತ  ಸಾಂಪ್ರದಾಯಿಕವಾಗಿ  ವೈದಿಕ ವಿಧಿ ವಿಧಾನಗಳು ಮತ್ತು  ವಿಶೇಷ ಪೂಜೆಯೊಂದಿಗೆ ಕೋವಿಡ್ ನಿಯಮಗಳಿಗನುಸಾರವಾಗಿ ಸರಳವಾಗಿ ಆಚರಿಸಲಾಯಿತು. ಮಂಗಳೂರಿನ ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಭಕ್ತರು ತಮ್ಮ ಪ್ರಾರ್ಥನೆಯನ್ನು  ದೇವಸ್ಥಾನದ  ಗೇಟ್‌ಗಳ ಹೊರಗೆ ಮಾಡಿದರು. ದೇವಸ್ಥಾನಗಳಲ್ಲಿ ವಿಶೇಷ ಸೇವೆ ಗಳು ಇರಲಿಲ್ಲ , ಭಕ್ತರು ತಮ್ಮ ಕುಟುಂಬದ ನಾಗಬನಗಳಲ್ಲಿ ಸೀಯಾಳಾಭಿಷೇಕ, ಹಾಲೆರೆಯುವ ಮೂಲಕ ಪೂಜೆ ಸಲ್ಲಿಸುತ್ತಿದ್ದಾರೆ. ನಗರದ ಶರವು ದೇವಾಲಯದಲ್ಲಿ ಸರಕಾರದ ಮಾರ್ಗಸೂಚಿಯಂತೆ ನಾಗರಪಂಚಮಿ ಆಚರಿಸಲಾಯಿತು. ಕುಕ್ಕೆ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಮಂಜೇಶ್ವರ ಅನಂತೇಶ್ವರ ದೇವಸ್ಥಾನ, ಮಂಗಳಾದೇವಿ ದೇವಸ್ಥಾನಗಳಲ್ಲೂ ನಾಗರ […]

ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವ

Friday, August 13th, 2021
Nagara Panchami

ಮಂಗಳೂರು  : ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನವು ಪಂಚಮಿಯಾಗಿತ್ತು. ನಾಗರಪಂಚಮಿ – ಸಾತ್ತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು […]

ನಾಗರಪಂಚಮಿಗೂ ಕೊರೋನಾ ಎಫೆಕ್ಟ್, ದೇವಸ್ಥಾನಕ್ಕೆ ಭಕ್ತರಿಗಿಲ್ಲ ಪ್ರವೇಶ..!

Friday, July 24th, 2020
naragapanchami

ಮಂಗಳೂರು: ಕೊರೋನಾ  ಎಫೆಕ್ಟ್ ಈ ಬಾರಿಯ ಹಬ್ಬಗಳ ಆಚರಣೆಗೂ ತಟ್ಟಿದೆ, ಹಿಂದೂ ಹಬ್ಬಗಳಲ್ಲಿ ಮೊದಲಿಗೆ ಬರುವ ಹಬ್ಬ ನಾಗರ ಪಂಚಮಿ. ಅದಕ್ಕೂ ಕೊರೋನಾಮಹಾಮಾರಿ ತಡೆಯೊಡ್ಡಿದೆ. ಈ ಬಾರಿ ನಾಗರ ಪಂಚಮಿಯನ್ನು ಭಕ್ತರು ದೇವಸ್ಥಾನಗಳಿಗೆ ತೆರಳಿ ಆಚರಿಸುವಂತಿಲ್ಲ. ಮಂಗಳೂರು ಸಮೇತ ರಾಜ್ಯದ ಎಲ್ಲಾ ನಾಗ ದೇವಸ್ಥಾನಗಳಲ್ಲಿ ನಾಗರಪಂಚಮಿ ಜುಲೈ 25 ರ ಶನಿವಾರ  ಆಚರಿಸುವಂತಿಲ್ಲ. ಮಂಗಳೂರಿನ ಇತಿಹಾಸ ಪ್ರಸಿದ್ದ ಕುಡುಪು‌ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಈ ಬಾರಿ ಅರ್ಚರು ಮಾತ್ರ ನಾಗನಿಗೆ ಹಾಲೆರೆಯುವ ಮತ್ತು ಇತರ ಸೇವೆಗಳನ್ನು ಮಾಡಲಿದ್ದಾರೆ. ಮಂಗಳೂರಿನ […]

ಮಂಗಳಾದೇವಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯ ನಾಗರಪಂಚಮಿ

Monday, August 5th, 2019
Mangaladevi

ಮಂಗಳೂರು  :  ಶ್ರೀ ಮಂಗಳಾದೇವಿ ಅಮ್ಮನವರ ದೇವಳಕ್ಕೆ ಮುಂಭಾಗದಲ್ಲಿ ನೇರ ಅಭಿಮುಖ ವಾಗಿರುವ, ಅಶ್ವಥ ವೃಕ್ಷರಾಜನ ಅಲಂಕೃತ ನಾಗಬನದ ನಾಗದೇವರ ಸಾನಿಧ್ಯದಲ್ಲಿ ಶ್ರದ್ಧಾ ಭಕ್ತಿಯಿಂದ ಪೂರ್ವ ಶಿಷ್ಠ ಸಂಪ್ರದಾಯದಂತೆ ಶ್ರೀ ದೇವರ ಪೂಜಾ ಕೈಂಕರ್ಯಗಳು ಬಹು ವಿಜೃಂಭಣೆಯಿಂದ ನೆರವೇರಿತು. ಶ್ರೀ ಕ್ಷೇತ್ರದಲ್ಲಿ ಪ್ರತ್ಯಕ್ಷ ನಾಗದೇವರ ಸಾನಿಧ್ಯ ವಿರುವುದರಿಂದ ಮಂಗಳಕರನಾದ ಶ್ರೀ ನಾಗ ದೇವರು ತಾಯಿಯ ದೇವಳದ ರಕ್ಷಣೆಯೊಂದಿಗೆ, ಬೇಡಿ ಬರುವ ಸರ್ವರಿಗೂ ಸಂತಾನ ಸಂಪತ್ತುಗಳನ್ನು ಅನುಗ್ರಹಿಸಿ, ಸರ್ವ ಸಮೃದ್ಧಿಯನ್ನು ಕೃಪೆದೋರಿದನು. ದೇವಳದಲ್ಲಿ ನಾಗರ ಪಂಚಮಿಯಂದು ಕ್ಷೀರವನ್ನಿಟ್ಟು ನಾಗರ […]

ನಾಡಿನೆಲ್ಲೆಡೆ ಭಕ್ತರಿಂದ ಸಂಭ್ರಮದ ನಾಗರಪಂಚಮಿ ಆಚರಣೆ..!

Wednesday, August 15th, 2018
Nagarapanchami (17)

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗ ದೇವಸ್ಥಾನಗಳಲ್ಲಿ ನಾಗರಪಂಚಮಿಯನ್ನು ಬುಧವಾರ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಿದರು. ಮಂಗಳೂರಿನ ಇತಿಹಾಸ ಪ್ರಸಿದ್ಧ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮುಂಜಾನೆಯೇ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ನಾಗ ದೇವರಿಗೆ ಹಾಲೆರೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ನಾಗರಪಂಚಮಿಯನ್ನು ಆಚರಿಸಿದರು. ಕುಡುಪು ದೇವಸ್ಥಾನದಲ್ಲಿ  ಪ್ರಧಾನ ಆರ್ಚಕರ ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಹಾಲು, ಕ್ಷೀರಾ, ತುಪ್ಪ, ಜೇನಿನೊಂದಿಗೆ ಪಂಚಾಮೃತ ಆಭಿಷೇಕವನ್ನು ಮಾಡಿ ವಿಶೇಷ ಪೂಜೆ ನೆರವೇರಿಸಿದರು. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, […]

ನಾಗರಪಂಚಮಿ, ಭೂಲೋಕದ ಪ್ರತ್ಯಕ್ಷ ಅಂದರೆ ಕಣ್ಣಿಗೆ ಕಾಣುವ ದೇವರನ್ನು ಪೂಜಿಸುವ ಹಬ್ಬ

Friday, July 28th, 2017
Kaup Govardhan

ಮಂಗಳೂರು : ಹಿಂದೂಗಳ ನೈಸರ್ಗಿಕ ಆರಾಧನೆ ಎಂದು ಕರೆಯಲ್ಪಡುವ ನಾಗರಪಂಚಮಿ, ಭೂಲೋಕದ ಪ್ರತ್ಯಕ್ಷ ಅಂದರೆ ಕಣ್ಣಿಗೆ ಕಾಣುವ ದೇವರನ್ನು ಪೂಜಿಸುವ ಹಬ್ಬ ಎಂದು ನಂಬಲಾಗಿದೆ. ಪರಶುರಾಮ ದೇವರು ಸಮುದ್ರರಾಜನಿಂದ ತುಳುನಾಡನ್ನು ಪಡೆದುಕೊಂಡಾಗ ಅದು ಉಪಯೋಗಕ್ಕೆ ಬಾರದ ಬರಡು ಭೂಮಿಯಾಗಿತ್ತು. ಉಪ್ಪಿನ ಕೋಟೆಯಂತೆ ಇದ್ದ ಭೂಮಿಯನ್ನು ಸಮೃದ್ಧ ಭೂಮಿಯನ್ನಾಗಿಸಿ ಕೊಡಲು ಪರಶುರಾಮ ನಾಗ ರಾಜನನ್ನು ಬೇಡಿಕೊಳ್ಳುತ್ತಾನೆ. ಪರಶುರಾಮನ ಮೊರೆಯನ್ನು ಕೇಳಿದ ನಾಗಗಳು ತಮ್ಮ ದೇಹವನ್ನು ಪಣಕ್ಕೆ ಇಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ಅಡಿಯಲ್ಲಿದ್ದ ಮೆಕ್ಕಲು […]

ನಾಡಿನೆಲ್ಲೆಡೆ ಶೃದ್ದಾ ಭಕ್ತಿಯ ‘ನಾಗರಪಂಚಮಿ’

Thursday, August 4th, 2011
Nagara Panchami/ನಾಗರಪಂಚಮಿ

ಮಂಗಳೂರು : ಇಂದು ದೇಶದಾದ್ಯಂತ ನಾಗರ ಪಂಚಮಿಯನ್ನು ಶೃದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ‘ನಾಗರ ಪಂಚಮಿ’ ಕೃಷಿ ಮತ್ತು ಮಳೆಯಿಂದಾಗಿ ಸ್ಥಗಿತಗೊಂಡಿದ್ದ ನಮ್ಮ ಎಲ್ಲ ಶ್ರದ್ಧೆಯ, ಉತ್ಸಾಹದ ಆಚರಣೆಗಳೆಲ್ಲ ಮತ್ತೆ ಆರಂಭವಾಗುವ ಮೊದಲ ಹಬ್ಬ. ನಾಡಿಗೆ ದೊಡ್ಡ ಹಬ್ಬವೆಂದೇ ಪ್ರತೀತಿ. ಆಟಿ ತಿಂಗಳ ಅಮಾವಾಸ್ಯೆ ಯಂದು ಕಹಿ ಮದ್ದು ಸೇವಿಸಿ ನಮ್ಮ ಮೂಲದ ನಾಗನ ಸ್ಥಾನಕ್ಕೆ ಹೊರಡಲು ಸಿದ್ಧತೆಗಳಾಗುತ್ತವೆ. ಮುಂದೆ ಐದನೇ ದಿನ ‘ನಾಗರಪಂಚಮಿ’ ಅಥವಾ ‘ನಾಗ ಪಂಚಮಿ’. ನಾಗನಿಗೆ ಹಲವು ನಾಮಗಳಿವೆ, ಉಭಯ ಜೀವಿಗಳಲ್ಲಿ ಹೆಚ್ಚು ಶಕ್ತಿ […]