ಮಂಗಳೂರು ದಸರಾಕ್ಕೆ ಪಾಲಿಕೆ ವತಿಯಿಂದಲೇ ವಿದ್ಯುದ್ದೀಪಾಲಂಕಾರ:- ಶಾಸಕ ಕಾಮತ್

Monday, October 9th, 2023
Vedvyas-Kamath

ಮಂಗಳೂರು : ನಾಡಹಬ್ಬ ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕ್ಷೇತ್ರದ ನವೀಕರಣದ ರೂವಾರಿ ಗೌರವಾನ್ವಿತ ಬಿ.ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ನಡೆಯಲಿರುವ ಮಂಗಳೂರು ದಸರಾ ಸಂದರ್ಭದಲ್ಲಿ ಈ ಬಾರಿಯೂ ಸಹ ಕಳೆದ ವರ್ಷಗಳಂತೆ ಪಾಲಿಕೆ ವತಿಯಿಂದಲೇ 1.30 ಕೋಟಿ ರೂ ವೆಚ್ಚದಲ್ಲಿ ನಗರಕ್ಕೆ ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು. ಮಂಗಳೂರಿನ ಪ್ರತಿಷ್ಠಿತ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುವ ದಸರಾ ಉತ್ಸವವು ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಬೇಕೆಂಬ ಉದ್ದೇಶದಿಂದ ಕ್ಷೇತ್ರದ ಮುಂದಾಳುಗಳು, ಮಹಾನಗರ ಪಾಲಿಕೆ ಆಡಳಿತ […]

ಸರಳ, ಸಾಂಪ್ರದಾಯಿಕ ದಸರಾ ಆಚರಣೆ: ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ

Saturday, September 4th, 2021
dasara

ಬೆಂಗಳೂರು :  ಕೋವಿಡ್ 19 ಹಿನ್ನೆಲೆಯಲ್ಲಿ ಈ ವರ್ಷವೂ ಸರಳವಾಗಿ, ಸಾಂಪ್ರದಾಯಿಕವಾಗಿ ದಸರಾ ಆಚರಿಸಲು ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2021 ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಹಾಗೂ ಮೈಸೂರು ಅರಮನೆ ಆವರಣದಲ್ಲಿ ಜಂಬೂ ಸವಾರಿ, ಹತ್ತು ದಿನಗಳ ದೀಪಾಲಂಕಾರ ಮೊದಲಾದ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು. ಮೈಸೂರು, ಚಾಮರಾಜನಗರ ಹಾಗೂ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆ ನಡೆಸಲು ಆರು ಕೋಟಿ ರೂ. ಅನುದಾನ ಬಿಡುಗಡೆ […]

ನಾಡಹಬ್ಬ ದಸರಾ ವೈಭವ : ರಾಜ ಬೀದಿಗಳಲ್ಲಿ ಗಜಪಡೆಯ ತಾಲೀಮು

Wednesday, August 28th, 2019
gajapade

ಮೈಸೂರು : ವಿಶ್ವ ವಿಖ್ಯಾತ ದಸರಾ ಹಬ್ಬಕ್ಕೆ ಸರ್ವಸಿದ್ಧತೆಗಳು ನಡೆದಿದ್ದು, ಜನಾಕರ್ಷಣೆಯ ಜಂಬು ಸವಾರಿಗೆ ಅರ್ಜುನ ನೇತೃತ್ವದ ತಂಡ ತಾಲೀಮು ನಡೆಸುತ್ತಿದೆ. ಇಲ್ಲಿನ ರಾಜ ಬೀದಿಗಳಲ್ಲಿ ಗಜಪಡೆಗೆ ಮೊದಲ ಹಂತದ ತಾಲೀಮು ಇಂದಿನಿಂದ ಆರಂಭಿಸಲಾಗಿದೆ. ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅರಮನೆಯ ಅಂಗಳದಲ್ಲಿ ಬೀಡು ಬಿಟ್ಟಿವೆ. ಅರಮನೆಯ ಬಲರಾಮ ದ್ವಾರದಿಂದ ಕೆ.ಆರ್‌.ವೃತ್ತ, ಸಯ್ಯಾಜಿರಾವ್‌ ರಸ್ತೆ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನವರೆಗೆ ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿ 5 ಆನೆಗಳಿಗೆ ತಾಲೀಮು ನಡೆಸಿದವು. ಜಂಬೂಸವಾರಿ ಸಾಗುವ ಮಾರ್ಗದಲ್ಲಿಯೇ […]

ಅರಮನೆಗೆ ಗೌರವಧನ ನೀಡುವ ಬಗ್ಗೆ ವಿವಾದ ಬೇಡ: ಸಚಿವ ಜಿಟಿಡಿ

Tuesday, September 18th, 2018
aramane

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಅರಮನೆ ಹಾಗೂ ಸರ್ಕಾರ ಒಟ್ಟಿಗೆ ಹೋಗಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ. ದಸರಾ ಮಹೋತ್ಸವದ ಸಂದರ್ಭದಲ್ಲಿ ರಾಜವಂಶಸ್ಥರಿಗೆ ಸರ್ಕಾರದಿಂದ ಪ್ರತಿ ವರ್ಷದಂತೆ ಗೌರವಧನ ನೀಡಲಿದ್ದು, ಈ ವಿಷಯದ ಬಗ್ಗೆ ಯಾವುದೇ ವಿವಾದ ಸೃಷ್ಟಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕ್ರಾಫರ್ಡ್ ಭವನದಲ್ಲಿ ರಾಜ್ಯದ ಎಲ್ಲಾ ಕುಲಪತಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜವಂಶಸ್ಥರು ಹೇಳಿರುವಂತೆ ಸರ್ಕಾರದಿಂದ ನಡೆಸುವುದು ನಾಡಹಬ್ಬವಾಗಿದ್ದು, ಇದು ಸಹ […]