ನಾಪೋಕ್ಲು ಹಿಂದೂ ರುದ್ರಭೂಮಿ ವಿವಾದ : ಪ್ರತಿಭಟನೆಯ ಎಚ್ಚರಿಕೆ
Wednesday, November 6th, 2019ಮಡಿಕೇರಿ : ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದಲ್ಲಿರುವ ಹಿಂದೂ ರುದ್ರಭೂಮಿಗೆ ಅತಿಕ್ರಮ ಪ್ರವೇಶ ಮಾಡಿ, ಅಲ್ಲಿ ಕಸ ವಿಲೇವಾರಿಗಾಗಿ ಗುಂಡಿ ತೋಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಗ್ರಾಮಸ್ಥರು ಹಾಗೂ ಬಜರಂಗದಳದ ಪದಾಧಿಕಾರಿಗಳು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಜರಂಗದಳದ ನಾಪೋಕ್ಲು ಘಟಕದ ಸಂಚಾಲಕ ಬಿ.ಎಂ.ಪ್ರತೀಪ್ ಹಾಗೂ ಇತರರು, ನಾಪೋಕ್ಲು ಪಂಚಾಯಿತಿಯವರು ಯಾರ ಗಮನಕ್ಕೂ ತಾರದೆ, ಪಂಚಾಯಿತಿಯಲ್ಲಿ ನಿರ್ಣಯವನ್ನೂ ಮಾಡದೆ ಏಕಾಏಕಿ ರುದ್ರಭೂಮಿಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಅಲ್ಲಿ ಹಿರಿಯರು ಬೆಳೆಸಿದ್ದ […]