ಕನಕರಬೆಟ್ಟು ರೈಲ್ವೆ ಕ್ರಾಸಿಂಗ್: ಪರ್ಯಾಯ ರಸ್ತೆ ನಿರ್ಮಿಸಲು ಶಾಸಕ ವೇದವ್ಯಾಸ ಕಾಮತ್ ಸೂಚನೆ
Wednesday, December 5th, 2018ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 59 ನೇ ಜಪ್ಪು ವಾರ್ಡ್ ವ್ಯಾಪ್ತಿಯಲ್ಲಿರುವ ಕನಕರಬೆಟ್ಟು ಬಳಿಯಿರುವ ಸೂಟರ್ ಪೇಟೆ ರೈಲ್ವೆ ಕ್ರಾಸಿಂಗ್ ಅನ್ನು ರೈಲ್ವೆ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ನೀಡದೆ ಏಕಾಏಕಿ ಬಂದ್ ಮಾಡಿರುವುದರಿಂದ ಕನಕರಬೆಟ್ಟು ಭಾಗದ ನಾಗರಿಕರಿಗೆ ಆಗಿರುವ ಅನಾನುಕೂಲತೆಯ ಬಗ್ಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಶೀಲಿಸಿದರು. ಈ ಹಿಂದೆ ಈ ಭಾಗದ ಜನತೆಯು ನಗರದ ಪ್ರಮುಖ ಕೇಂದ್ರವಾದ ಕಂಕನಾಡಿ ಹಾಗೂ ಮಂಗಳೂರು ನಗರವನ್ನು […]