ನಾರಾವಿ ಬಸದಿಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಭೇಟಿ

Wednesday, September 22nd, 2021
Veerendra Hegde

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬುಧವಾರ ನಾರಾವಿಯಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿಗೆ ಬಸದಿಗೆ ಹೋಗಿ ದೇವರ ದರ್ಶನ ಮಾಡಿದರು. ಬಳಿಕ ಬಸದಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಆರ್ಯಿಕಾ ಚಿಂತನಮತಿ ಮಾತಾಜಿ ಮತ್ತು ಕ್ಷಲ್ಲಿಕ ಸುಶ್ರೇಯಾಮತಿ ಮಾತಾಜಿ ಅವರ ದರ್ಶನ ಮಾಡಿ ಆಶೀರ್ವಾದ ಪಡೆದರು. ಚಾತುರ್ಮಾಸ್ಯ ಸಮಿತಿಯ ಎನ್. ಪ್ರೇಮ್ ಕುಮಾರ್, ಹೊಸ್ಮಾರು, ಶಿಶುಪಾಲ ಜೈನ್, ಪ್ರಕಾಶ್ ಕುಮಾರ್, ಶಶಿಕಾಂತ ಜೈನ್, ಸನ್ಮತ್ ಕುಮಾರ್, ನಾಗಕುಮಾರ ಶೆಟ್ಟಿ, ಜಯವರ್ಮ ಬುನ್ನು, ಅಶೋಕ ಕುಮಾರ್, ಒರಿಮಾರು, ರಾಜೇಂದ್ರ […]

ದಾರಿಯಲ್ಲಿ ಹೋಗಬೇಕಾದ ಪೊಲೀಸ್ ಜೀಪು ಅಂಗಡಿ ನುಗ್ಗಿ ಚೆಲ್ಲಾಪಿಲ್ಲಿ

Thursday, January 7th, 2021
Police Jeep

ಬೆಳ್ತಂಗಡಿ:  ಮಡಿಕೇರಿಯತ್ತ ತೆರಳ ಬೇಕಾದ  ಪೊಲೀಸ್ ಜೀಪ್ವೊಂದು ಗುರುವಾರ  ಬೆಳಗ್ಗೆ ಅಂಗಡಿಗೆ ನುಗ್ಗಿದ ಘಟನೆ ನಾರಾವಿ ಸಮೀಪದ ಈದು ಕ್ರಾಸ್ ಬಳಿ ನಡೆದಿದೆ. ಕಾರ್ಕಳದಿಂದ ಮಡಿಕೇರಿಯತ್ತ ಇನ್ಸ್ ಪೆಕ್ಷನ್ ಗಾಗಿ ತೆರಳುತ್ತಿದ್ದ ಪೊಲೀಸ್ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದೆ. ಜೀಪ್ನಲ್ಲಿದ್ದ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಂಗಡಿ ಶೋಕೇಸ್ ಸೇರಿ ಇನ್ನಿತರ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿವೆ. ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ತಲೆಗೆ ಸ್ವಲ್ಪ ಗಾಯವಾಗಿದ್ದು, ಕಾರ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾರಾವಿ : ಬೈಕ್-ಲಾರಿ ಅಪಘಾತದಲ್ಲಿ ಬೈಕ್ ಸವಾರ ಸಾವು

Wednesday, June 26th, 2019
pradeep

ಬೆಳ್ತಂಗಡಿ : ಬುಧವಾರ ಬೆಳಗ್ಗೆ ಸಂಭವಿಸಿದ  ಬೈಕ್ ಹಾಗೂ ಲಾರಿ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನಡೆದಿದೆ . ಮೃತರನ್ನು ಬೆಳ್ತಂಗಡಿ ತಾಲೂಕಿನ ಸಾವ್ಯ ಗ್ರಾಮದ ಕರಿಯ ಪೂಜಾರಿ ಎಂಬವರ ಪುತ್ರ ಪ್ರದೀಪ್ (18) ಎಂದು ಗುರುತಿಸಲಾಗಿದೆ. ಇವರು ಬುಧವಾರ ಬೆಳಗ್ಗೆ ತನ್ನ ಬೈಕಿನಲ್ಲಿ ಸಹೋದರನನ್ನು ನಾರಾವಿಗೆ ಬಿಟ್ಟು ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುನರ್ವಸತಿ ಯೋಜನೆ ಅನುಷ್ಠಾನ: ಸ್ಥಳೀಯರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

Friday, March 4th, 2011
ಪುನರ್ವಸತಿ ಯೋಜನೆ ಅನುಷ್ಠಾನ

ಮಂಗಳೂರು : ಕುದುರೆಮುಖ ರಾಷ್ಟ್ರೀಯ ಪುನರ್ವಸತಿ ಯೋಜನೆಯನ್ವಯ ಅರಣ್ಯದೊಳಗಿಂದ ಹೊರಬಂದು ವಾಸಿಸಲು ಒಪ್ಪುವ ಕುಟುಂಬಗಳಿಗೆ ಪರಿಹಾರ  ಹಾಗೂ ಪೂರಕ ವ್ಯವಸ್ಥೆಗಳನ್ನು ನೀಡಲು ಪ್ರತೀ ಬುಧವಾರ ಸಂಬಂಧಪಟ್ಟ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವಾರಕ್ಕೊಂದರಂತೆ ಒಂದು ಪ್ರಕರಣವನ್ನು ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರು ಅಧಿಕಾರಿಗಳಿಗೆ ಸೂಚಿಸಿದರು. ಇಂದು ಬೆಳ್ತಂಗಡಿಯ ನಾರಾವಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಬಳಿಕ ಕುತ್ಲೂರಿನ ಅಳಂಬ, ನೆಲ್ಲಿಪಡ್ಕದ ಮನೆಗಳಿಗೆ ಭೇಟಿ ನೀಡಿ ಅವರ ಅಭಿಪ್ರಾಯಗಳನ್ನು […]