ಕನ್ನಡದ ಪದಗಳನ್ನು ಇಂಗ್ಲಿಷಿನಲ್ಲಿ ಬರೆದರೆ ಉಂಟಾಗುವ ಪ್ರಮಾದಕ್ಕೊಂದು ಉದಾಹರಣೆಯೇ ಮಿಣಿಮಿಣಿ ಪ್ರಕರಣ!

Monday, February 3rd, 2020
HDK

ಮಂಗಳೂರು : ಈ ವಿಚಾರವಾಗಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಹೊರಡಿಸುವಂತೆ ಕೋರಿ ಮೊಕದ್ದಮೆ ದಾಖಲಾಗಿದೆ. ಪ್ರಕರಣದ ವಾದಪತ್ರ ಮತ್ತು ಅರ್ಜಿಯನ್ನು ಕನ್ನಡದಲ್ಲಿ ತಯಾರಿಸಿದ್ದರೆ ನ್ಯಾಯಾಲಯದ ಆದೇಶ ಸಫಲವಾಗುತ್ತಿತ್ತು. ವಾದಪತ್ರ ಮತ್ತು ಅರ್ಜಿಯು ಇಂಗ್ಲಿಷಿನಲ್ಲಿ ಇದ್ದುದರಿಂದ ನ್ಯಾಯಾಲಯದ ಆದೇಶವೂ ಇಂಗ್ಲಿಷಿನಲ್ಲಿದೆ. ಹಾಗಾಗಿ ನ್ಯಾಯಾಲಯವು ವಾದಿಗೆ ಪರಿಹಾರ ನೀಡಿದ್ದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದವರು ಶಿಕ್ಷೆಗೆ ಗುರಿಯಾಗುವ ಪ್ರಮೇಯವಿಲ್ಲ. ಏಕೆಂದರೆ….’ಮಿಣಿಮಿಣಿ’ ಎಂಬ ಪದವನ್ನು ಇಂಗ್ಲಿಷಿನಲ್ಲಿ ‘MINI MINI’ ಎಂದು ಹೇಳಿರುವುದರಿಂದ ಅದು ‘ಮಿನಿಮಿನಿ’ ಎಂದಂತಾಗಿದೆ. ಹಾಗಾಗಿ ನ್ಯಾಯಾಲಯವು […]

ಡಿ.6ರಂದು ನಿರ್ಬಂಧಕಾಜ್ಞೆ ಜಾರಿ : ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಆದೇಶ

Thursday, December 5th, 2019
Harsha

ಮಂಗಳೂರು : ಮಂಗಳೂರು ಕಮಿಶನರೇಟ್ ವ್ಯಾಪ್ತಿಯಲ್ಲಿ ಡಿಸೆಂಬರ್ 6ರಂದು ನಿರ್ಬಂಧಕಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಆದೇಶ ಹೊರಡಿಸಿದ್ದಾರೆ. ಬಾಬರಿ ಮಸೀದಿ ಧ್ವಂಸ ದಿನವಾದ ಡಿ.6ರಂದು ಯಾವುದೇ ಅಹಿತಕರ ಘಟನೆ ನಡೆಯುದಂತೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಅಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿರ್ಬಂಧಕಾಜ್ಞೆ ಜಾರಿಯಲ್ಲಿರುತ್ತದೆ ಎಂದು ಡಾ.ಹರ್ಷ ಪ್ರಕಟನೆಯಲ್ಲಿ ತಿಳಿಸಿದ್ದಾರೆ.    

ಜುಲಾಯಿ 16 ರಿಂದ 30ರ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ

Sunday, July 16th, 2017
TR-Suresh

ಮಂಗಳೂರು : ಕರ್ನಾಟಕ ಪೊಲೀಸ್ ಕಾಯಿದೆ ಕಲಂ 35ರ ಅನ್ವಯ ಜು.16ರಿಂದ ಜು.30ರವರೆಗೆ ನಿರ್ಬಂಧಕಾಜ್ಞೆ ಹೊರಡಿಸಿಲಾಗಿದೆ.  ಮಂಗಳೂರು ನಗರ ಸೇರಿದಂತೆ ದ.ಕ.ಜಿಲ್ಲೆಯ ವಿವಿಧೆಡೆ ಕಳೆದ ಕೆಲವು ಸಮಯಗಳಿಂದ ಅಹಿತಕರ ಘಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಆದೇಶ ಹೊರಡಿಸಿದ್ದಾರೆ. ಜುಲಾಯಿ 16ರ ಬೆಳಗ್ಗೆ 6ರಿಂದ 30ರ ಮಧ್ಯರಾತ್ರಿ 12ಗಂಟೆವರೆಗೆ ಜಾರಿಯಲ್ಲಿದೆ. ಇದು ಸೆಕ್ಷನ್ 144ರನ್ವಯ ನಿಷೇಧಾಜ್ಞೆಯಲ್ಲ. ನಿರ್ಬಂಧಕಾಜ್ಞೆ ಪ್ರಕಾರ ಶಸ್ತ್ರಾಸ್ತ್ರ, ದೊಣ್ಣೆ ಸೇರಿದಂತೆ ಮಾರಕಾಸ್ತ್ರಗಳನ್ನು ಸಾಗಿಸುವಂತಿಲ್ಲ. ಯಾವುದೇ ಸ್ಫೋಟಕಗಳನ್ನು […]