ಕುಕ್ಕೆ ದೇವಳದಿಂದ ನಿರ್ಮಿತವಾದ ವಿದ್ಯಾನಗರ-ಅಗ್ರಹಾರ ಕಾಂಕ್ರಿಟ್ ರಸ್ತೆ ಉದ್ಘಾಟನೆ
Tuesday, July 6th, 2021ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಅಭ್ಯುದಯದಲ್ಲಿ ಕುಕ್ಕೆ ದೇವಳದಪಾತ್ರ ಅನನ್ಯ.ಶ್ರೀ ದೇವಳದಿಂದ ಕ್ಷೇತ್ರದ ಅನೇಕ ರಸ್ತೆಗಳು ಕಾಂಕ್ರಿಟೀಕರಣಗೊAಡು ಅಭಿವೃದ್ಧಿಯಾಗಿದೆ.ಅಲ್ಲದೆ ಶ್ರೀ ದೇವಳದಿಂದ ನೆರವೇರುತ್ತಿರುವ ಸಮಗ್ರ ಅಭಿವೃದ್ಧಿಯ ೧೮೦ ಕೋಟಿ ರೂಗಳ ಮಾಸ್ಟರ್ ಪ್ಲಾನ್ ಯೋಜನೆಯಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳು ನಿರ್ಮಿತವಾಗಿದೆ. ದೇ ರೀತಿ ಕೋವಿಡ್-೧೯ ಸಂಕಷ್ಠದ ಸಮಯದಲ್ಲಿ ಕೂಡಾ ಶ್ರೀ ದೇವಳವು ಉತ್ಕೃಷ್ಠವಾದ ಸಹಕಾರ ನೀಡಿದೆ ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ […]