ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 220 ಮಂದಿಗೆ ಕೊರೊನಾ ಸೋಂಕು, 5 ಮಂದಿ ಬಲಿ

Saturday, October 17th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 220 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶುಕ್ರವಾರ 391 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಶುಕ್ರವಾರದ ರಾಜ್ಯ ಆರೋಗ್ಯ ಬಲಿಟಿನ್ ಮಾಹಿತಿ ಪ್ರಕಾರ 5 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈವರೆಗೆ ಕೊರೊನಾ ಸೋಂಕಿಗೆ ಒಟ್ಟು  624 ಸಾವು ಸಂಭವಿಸಿದೆ. ಶುಕ್ರವಾರದ 391 ಮಂದಿ ಒಳಗೊಂಡು ಈವರೆಗೆ ಒಟ್ಟು ಗುಣಮುಖರಾದವರು 23804 ಮಂದಿ. ದ.ಕ ಜಿಲ್ಲೆಯಲ್ಲಿ ಈವರೆಗೆ  ಸಕ್ರಿಯ ಪ್ರಕರಣಗಳ ಸಂಖ್ಯೆ  3531, ಒಟ್ಟು ಕೊರೊನಾ ನೆಗೆಟಿವ್ ಪ್ರಕರಣಗಳು 189046,  ಪಾಸಿಟಿವ್ ಪ್ರಕರಣಗಳು 27959, ಈವರೆಗೆ 217005 ಮಂದಿಯ ಕೊರೊನಾ ಪರೀಕ್ಷೆ ಮಾಡಲಾಗಿದೆ.

ಕೊರೊನಾ ಸೋಂಕು : ದಕ್ಷಿಣ ಕನ್ನಡ ಜಿಲ್ಲೆ 193 ಐದು ಸಾವು, ಉಡುಪಿ ಜಿಲ್ಲೆ 117 ಎರಡು ಸಾವು

Sunday, August 23rd, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಆಗಸ್ಟ್ 23 ರಂದು 193 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10330 ಕ್ಕೆ ಏರಿದೆ. ಉಡುಪಿ ಜಿಲ್ಲೆಯಲ್ಲಿ ಭಾನುವಾರ  117 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 10126 ಕ್ಕೆ ಏರಿಕೆಯಾಗಿದೆ. ಭಾನುವಾರದ ಪಾಸಿಟಿವ್ ಪ್ರಕರಣಗಳಲ್ಲಿ ಮಂಗಳೂರಿನಲ್ಲಿ 130, ಬಂಟ್ವಾಳದಲ್ಲಿ 21, ಸುಳ್ಯದಲ್ಲಿ 19, ಪುತ್ತೂರಿನಲ್ಲಿ 6, ಬೆಳ್ತಂಗಡಿಯಲ್ಲಿ 8 ಜನರಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 9 ಮಂದಿಗೆ ಪಾಸಿಟಿವ್‌ ಆಗಿದೆ.  193 ಸೋಂಕಿತರ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆ

Monday, June 22nd, 2020
DK-corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು  ಜೂನ್ 22, ಸೋಮವಾರ ವರದಿಯಾಗಿದೆ. ಹೊಸ ಪ್ರಕರಣಗಳ ಪೈಕಿ 11 ಮಂದಿ ವಿದೇಶದಿಂದ ಮರಳಿದವರಾಗಿದ್ದಾರೆ. ಒಬ್ಬರ ಪಾಸಿಟಿವ್ ಪ್ರಕರಣ ಐ ಎಲ್ ಐ ಎಂದು ಗುರುತಿಸಲಾಗಿದೆ. 7  ಪುರುಷರಲ್ಲಿ ಸೋಂಕು ದೃಢಪಟ್ಟರೆ,  45 ವರ್ಷದ ಓರ್ವ ಮಹಿಳೆಯಲ್ಲೂ ಪಾಸಿಟಿವ್ ಕಂಡುಬಂದಿದೆ. ಇಬ್ಬರು ಯುವಕರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ನಡುವೆ ಸೋಮವಾರದಂದು 257 ಮಂದಿಯ ವರದಿ ನೆಗೆಟಿವ್ ಬಂದಿದೆ.  ಹನ್ನೆರಡು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ […]

ಮಂಗಳವಾರ ದ.ಕ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಿಲ್ಲ,113 ಮಂದಿಯ ವರದಿಗಳು ನೆಗೆಟಿವ್

Tuesday, June 2nd, 2020
no-corona

ಮಂಗಳೂರು :  ದ.ಕ. ಜಿಲ್ಲೆಯಲ್ಲಿ ಮಂಗಳವಾರದಂದು ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಮಂಗಳವಾರ ಲಭ್ಯವಾದ ಎಲ್ಲಾ 113 ಮಂದಿಯ ವರದಿಗಳು ನೆಗೆಟಿವ್ ಆಗಿದೆ. ಸೋಮವಾರದಂದು ದ.ಕ. ಜಿಲ್ಲೆಯಲ್ಲಿ ನಾಲ್ವರಲ್ಲಿ ಸೋಂಕು ಪತ್ತೆಯಾಗಿತ್ತು. ಜಿಲ್ಲಾಡಳಿತ ಸೋಂಕಿನ ಮೂಲ ಪತ್ತೆ ಹಚ್ಚಿದೆ.