ಧಾರವಾಡ ಜಿಲ್ಲಾ ನ್ಯಾಯಾಧೀಶರಿಗೆ ಮತ್ತು ನ್ಯಾಯಾಲಯ ಸಿಬ್ಬಂದಿಗೆ ಲಸಿಕೆ ಅಭಿಯಾನ

Friday, May 28th, 2021
Vaccination

ಧಾರವಾಡ: ಧಾರವಾಡ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಾಲಯದ ಸಿಬ್ಬಂದಿಗೆ ಕೊರೊನಾ ಲಸಿಕೆ ನೀಡಲಾಯಿತು. ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ ಅವರು ಲಸಿಕೀಕರಣದ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರಧಾನ ಹಿರಿಯ ನ್ಯಾಯಾಧೀಶ ಹಾಗೂ ಸಿಜೆಎಂ ಸಂಜಯ ಗುಡಗುಡಿ, ವ್ಯೆದ್ಯಾಧಿಕಾರಿಗಳಾದ ಡಾ. ಕೆ.ಎನ್. ತನುಜಾ, ಡಾ.ಕವಿತಾ ಮತ್ತು ಅವರ ಸಿಬ್ಬಂದಿ ಹಾಜರಿದ್ದು ಅಭಿಯಾನವನ್ನು ಯಶಸ್ವಿಗೂಳಿಸಿದರು. 120ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ನ್ಯಾಯಾಧೀಶರು ಮೊದಲ ಡೋಸ್ ಲಸಿಕೆ ಪಡೆದರು.

ಜೀವನದಲ್ಲಿ ಯಶಸ್ಸನ್ನು ಸಾಧಿಸಲು, ಗುರಿ ಅಗತ್ಯ : ಶ್ರೀ ರಾಮಮೋಹನ್ ರಾವ್

Thursday, March 21st, 2019
Putturu Vivekananda

ಮಂಗಳೂರು  : ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ, ಮೊದಲು ಸರಿಯಾದ ಗುರಿಯನ್ನು ಆಯ್ದುಕೊಳ್ಳಬೇಕು. ಆಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ. ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಿದ್ದಂತೆ, ಆದಾಯವು ತಾನಾಗಿಯೇ ಬರುತ್ತದೆ. ಎಂದು ಪುತ್ತೂರಿನ ಹಿರಿಯ ವಕೀಲರಾದ ಶ್ರೀ ರಾಮಮೋಹನ ರಾವ್ ಅವರು ಹೇಳಿದರು. ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಇಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾನೂನು ಉದ್ಯೋಗಾವಕಾಶಗಳ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ. ನ್ಯಾಯಾಧೀಶರು ಮತ್ತು ಕಕ್ಷಿದಾರರ ಮನವನ್ನು ಅರ್ಥ ಮಾಡಿಕೊಂಡಲ್ಲಿ ಮಾತ್ರ, ವಕೀಲ […]