ಫಲ್ಗುಣಿ ನದಿಗೆ ಸೇರುತ್ತಿರುವ ಕಪ್ಪು ಬಣ್ಣದ ಕಲುಷಿತ ನೀರು, ಮಂಗಳೂರಿನ ಜನರು ಇದೇ ನೀರನ್ನು ಕುಡಿಯುತ್ತಿದ್ದಾರೆ !

Friday, June 25th, 2021
Palguni-water

ಮಂಗಳೂರು : ಮಂಗಳೂರು ತಾಲೂಕಿನ ಪಚ್ಚನಾಡಿ ಮತ್ತು ಮಂದಾರ ಗ್ರಾಮದ ಸಾರ್ವಜನಿಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ಮೂಲಕ ಸಂಪರ್ಕಿಸಿ ಪಾಲ್ಗುಣಿ ನದಿಗೆ ಕಪ್ಪು ಬಣ್ಣದ ಕಲುಷಿತ ನೀರು ಬಿಡಲಾಗಿದ್ದು, ಮಂಗಳೂರಿನ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಫಾಲ್ಗುಣಿ ನದಿಯ ನೀರನ್ನು ಬಳಸಲಾಗುತ್ತಿರುವುದಾಗಿ ಸಂಬಂಧಪಟ್ಟವರಿಗೆ ದೂರನ್ನು ನೀಡಿದ್ದರು. ಆದರೆ ಸಾರ್ವಜನಿಕರು ನೀಡಿರುವ ದೂರಿನ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲವೆಂದು ತಿಳಿಸಿರುವುದರಿಂದ ಸದರಿ ಸ್ಥಳಕ್ಕೆ ಭೇಟಿ ನೀಡಲು ಅಧ್ಯಕ್ಷರು ಮತ್ತು ಪ್ರಧಾನ ಜಿಲ್ಲಾ ಮತ್ತು ಸತ್ರ […]

ಪಚ್ಚನಾಡಿ ಪ್ಲಾಸ್ಟಿಕ್ ಸಂಸ್ಕರಣಾ ಘಟಕಕ್ಕೆ ನ್ಯಾಯಾಧೀಶೆ ಶೀಲಾ ಎ.ಜಿ ಭೇಟಿ

Tuesday, April 6th, 2021
pacchanady

ಮಂಗಳೂರು : ನಗರದ ಹೊರವಲಯದ ಪಚ್ಚನಾಡಿಯಲ್ಲಿರುವ ಪ್ಲಾಸ್ಟಿಕ್ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯಗಳು ಬೆಂಕಿಗಾಹುತಿಯಾಗಿ ನಷ್ಟಸಂಭವಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯ ಮೇರೆಗೆ ಭೇಟಿ ನೀಡಿ ಸಂಗ್ರಹಣೆಯಾಗಿರುವ ಕಸಕ್ಕೆ ಬೆಂಕಿ ಬಿದ್ದು ಸ್ಥಳೀಯರಿಗೆ ತೊಂದರೆಯಾಗಿದೆಯೇ ಎಂಬ ಬಗ್ಗೆ ವರದಿ ನೀಡಲು ಸೂಚಿಸಲಾಗಿದ್ದು, ಈ […]

ಮನ:ಶಾಂತಿಗಾಗಿ ಆಯೋಜಿಸುವ ಕಾರ್ಯಕ್ರಮಕ್ಕೆ ಕಾನೂನಿನ ರಕ್ಷಣೆ ಯಾವತ್ತೂ ಇದ್ದೇ ಇರುತ್ತದೆ – ಹಿರಿಯ ನ್ಯಾಯಾಧೀಶೆ ಎ. ಜಿ. ಶಿಲ್ಪಾ

Monday, November 2nd, 2020
kssap

ಮಂಗಳೂರು  : ನಾನು ನ್ಯಾಯಾಧೀಶಳಾಗಿ ಕಾನೂನನ್ನು ಪ್ರತಿನಿಧಿಸುತ್ತೇನೆ. ಕಡಿಮೆ ಮಾತನಾಡಿದಷ್ಟು ಹೆಚ್ಚು ಗೌರವ ಎಂದುಕೊಂಡಿದ್ದೇನೆ. ಆದರೆ ಭಾಷೆ ಮತ್ತು ಕಾನೂನಿನ ವಿಚಾರ ಬಂದಾಗ ನಾನು ಮಾತನಾಡಲೇ ಬೇಕಿದೆ. ಭಾಷೆ ಎಂಬುದು ಮಾನವ ಕುಲಕ್ಕೆ ಮಾತ್ರ ಸೀಮಿತವಾಗಿದೆ. ಮಗುವಿನ ತೊದಲು ನುಡಿಯಿಂದ ತಾಯಿ ಸಂಗೀತವನ್ನು ಆಲಿಸುತ್ತಾಳೆ. ಆ ಸಂಗೀತದಿಂದ ತನ್ನ ನೋವನ್ನು ಮರೆಯುತ್ತಾಳೆ. ಭಾಷೆ ಎಂಬುದು ಒಂದು ಒಲವಿನ ಸಂಸ್ಕೃತಿ ಇದ್ದಂತೆ ಎಂದು ಹಿರಿಯ ನ್ಯಾಯಾಧೀಶೆ/ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ. ಜಿ. ಶಿಲ್ಪಾ […]