ಆನ್‌ಲೈನ್ ಸಾಲದ ಫೋನ್ ಕಿರಿಕಿರಿ – ಕಚೇರಿಯಲ್ಲಿ ಯುವಕ ಆತ್ಮಹತ್ಯೆ

Monday, January 10th, 2022
Sushath

ಮಂಗಳೂರು :  ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಯುವಕನೊಬ್ಬ ಆನ್‌ಲೈನ್ ಸಾಲದ ಫೋನ್ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು  ಕಿನ್ನಿಗೋಳಿ ಪಕ್ಷಿಕೆರೆ ಮೂಲದ ಸುಶಾಂತ್(26) ಎಂದು ಗುರುತಿಸಲಾಗಿದೆ. ಸೋಮವಾರ ತಾನು ಕೆಲಸ ಮಾಡಿಕೊಂಡಿದ್ದ ಸುರತ್ಕಲ್‌ನ ಕುಳಾಯಿಯ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿನ ಕುರಿತಂತೆ ತುಳುವಿನಲ್ಲಿ ಡೆತ್‌ನೋಟ್ ಬರೆದಿದ್ದಾರೆ. ‘ಸಾರಿ ಮಾತೆರೆಗ್ಲಾ. ಎಂಕ್ ಏರ‌್ನಲಾ ನಂಬಿಕೆ ಒರಿಪಾರೆ ಆಯಿಜಿ. ಕಾಸ್‌ದ ವಿಷಯೊಡ್ ತೊಂದರೆ ಆಂಡ್. ಸಾರಿ, ಆನ್‌ಲೈನ್ ಲೋನ್‌ದಕುಲ್ ಕಾಲ್ ಮಲ್ತೆರ್‌ಡ ಡೆತ್ ಆತೆ ಪನ್ಲೆ. […]