ದೀಪಾವಳಿ “ಬೆಳಕಿನ ಹಬ್ಬ” ದ ಮಹತ್ವ ತಿಳಿಯಿರಿ

Wednesday, November 3rd, 2021
Deepavali

ಮಂಗಳೂರು  : ದೀಪಾವಳಿಯನ್ನು  “ಬೆಳಕಿನ ಹಬ್ಬ” ಎಂದೂ ಕರೆಯುತ್ತಾರೆ. ಕುಟುಂಬದ ಸದಸ್ಯರು ಒಟ್ಟಿಗೆ ಸೇರಿ ತಮ್ಮ ಮನೆಗಳನ್ನು ದೀಪಗಳಿಂದ ಅಲಂಕರಿಸುತ್ತಾರೆ, ಈ ದಿನದಂದು ಅಷ್ಟೈಶ್ವರ್ಯ ಕ್ಕಾಗಿ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುವ ರೂಡಿ. ಭಾರತದ ಉತ್ತರ ರಾಜ್ಯಗಳು ಈ ಹಬ್ಬವನ್ನು ದೀವಾಲಿ ಎಂದು  ಉಲ್ಲೇಖಿಸಿದರೆ, ಇದನ್ನು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಮತ್ತು ಸಿಂಗಾಪುರ, ಮಲೇಷ್ಯಾ ಮುಂತಾದ ಏಷ್ಯಾದ ಇತರ ರಾಷ್ಟ್ರಗಳಲ್ಲಿ ದೀಪಾವಳಿ (‘ ದೀಪ್’ ಎಂದರೆ ಬೆಳಕು / ದೀಪ, ‘ವಳಿ’ ಎಂದರೆ ರಚನೆ) ಎಂದು ಕರೆಯಲಾಗುತ್ತದೆ. […]

ಪರಿಸರ ಸಂರಕ್ಷಣೆ ಹಾಗೂ ಕೋವಿಡ್ ಮುಂಜಾಗೃತೆಯೊಂದಿಗೆ ಗಣೇಶ ಹಬ್ಬ ಆಚರಿಸೋಣ

Sunday, September 5th, 2021
Eco Friendly

ಗಣೇಶ ಹಬ್ಬ ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಹಬ್ಬ) ದಿನ ಆಚರಿಸಲಾಗುತ್ತದೆ. ಈ ಹಬ್ಬದಂದು ಪ್ರಮುಖವಾಗಿ ಕಂಡು ಬರುವುದೆಂದರೆ ಪಟಾಕಿ, ಡಿಜೆ, ಡ್ಯಾನ್ಸ್ ಹೀಗೆ ಮೋಜು ಮಸ್ತಿಯಿಂದ ಬಹಳ ವಿಜೃಂಭಣೆಯಿಂದ ಆಚರಿಸುವುದು. ಅನ್ಯ ರಾಜ್ಯಗಳಿಂದ ಬೃಹತಾಕಾರದ ಗಣೇಶ ವಿಗ್ರಹ ತರುವುದು, ಮಣ್ಣಿನ ವಿಗ್ರಹಗಳ ಬಳಕೆಗಿಂತಲೂ ಪ್ಲಾಸ್ಟರ್ನಿಂದ ತಯಾರಿಸಿದ ಗಣಪತಿಗಳ ಮಾರಾಟ ಹೆಚ್ಚಳ ಇರುವುದರಿಂದ ಅವುಗಳ ಪ್ರತಿಷ್ಠಾಪನೆ ಮಾಡುವುದು. ವಿವಿಧ ರೀತಿಯ ಪಟಾಕಿಗಳನ್ನು ಬಳಸುವುದು ಇವೆಲ್ಲವುಗಳನ್ನು ಗಣೇಶ ಹಬ್ಬ […]

ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ

Sunday, December 27th, 2020
Jagadeesha

ಉಡುಪಿ : ಸಾರ್ವಜನಿಕವಾಗಿ  ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಹೊಸ ವರ್ಷದ ಆಚರಣೆಯ ಸಮಯದಲ್ಲಿ ಕೂಡ ಎಲ್ಲಾ ರೀತಿಯ ಕೊರೊನಾ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಸರ್ಕಾರ ಹೊರಡಿಸಿದ ವಿಶೇಷ ಮಾರ್ಗಸೂಚಿಗಳು ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನಾಲ್ಕು ದಿನಗಳವರೆಗೆ ಅನ್ವಯಿಸುತ್ತವೆ ಎಂದು ಅವರು ಹೇಳಿದ್ದಾರೆ. ಹೊಸ ವರ್ಷದಂದು ಯಾವುದೇ ಪಬ್, ರೆಸ್ಟೋರೆಂಟ್, ಹೋಟೆಲ್, ಕೆಫೆಗಳು […]

ಪಟಾಕಿ ತಯಾರಿಸುತ್ತಿದ್ದ ಮನೆಗೆ ಬೆಂಕಿ : ಇಬ್ಬರು ಮೃತ್ಯು

Saturday, October 19th, 2019
pataki

ಗುನಾ : ಪಟಾಕಿ ತಯಾರಿಸುತ್ತಿದ್ದ ಮನೆಗೆ ಬೆಂಕಿ ತಗುಲಿ ಇಬ್ಬರು ಮೃತಪಟ್ಟ ದಾರುಣ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮೀರ್ (18) ಮತ್ತು ರುಷ್ಕರ್ (26) ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು.