ವಸ್ತು ನಿಷ್ಠ, ಮೌಲ್ಯಯುತ ವರದಿಗೆ ಆದ್ಯತೆ ಅಗತ್ಯ: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

Saturday, January 2nd, 2021
PaGo Award

ಮಂಗಳೂರು: ಕಟ್ ಆ್ಯಂಡ್ ಫೇಸ್ಟ್ ಸುದ್ದಿಯ ಬದಲು ವಸ್ತು ನಿಷ್ಠ ಮೌಲ್ಯಯುತ ಜತೆಗೆ ವಿಮರ್ಶೆಯಿಂದ ಕೂಡಿದ ಪತ್ರಿಕಾ ವರದಿಗಳು ಜನಪರ ಆಡಳಿತ ನಡೆಸಲು ಪೂರಕವಾಗುತ್ತವೆ ಎಂದು ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು. ಗುರುವಾರ ನಗರದ ಪತ್ರಿಕಾಭವನದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜರುಗಿದ 2019ನೇ ಸಾಲಿನ ಪ.ಗೋ.(ಪದ್ಯಾಣ ಗೋಪಾಲಕೃಷ್ಣ) ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಇಲಾಖೆಯಲ್ಲಿ ವರ್ಷಕ್ಕೆ ಒಂದು ಬಾರಿ ಅಡಿಟ್ ನಡೆಯುವ ಮೂಲಕ ಪಾರದರ್ಶಕತೆಯನ್ನು ಹೆಚ್ಚು ಮಾಡುವಂತೆ […]

ಪತ್ರಕರ್ತ ನಾಗೇಶ್ ಸಾವಿಗೆ ಒಂದು ವರ್ಷ, ನೆನಪಿನಲ್ಲಿ ಸದಾ ಉಳಿದಿರುವೆ

Wednesday, July 22nd, 2020
nageshpadu

ಮಂಗಳೂರು : ಸದಾ ಉತ್ಸಾಹದಿಂದ ನಮಗೆ ಪ್ರೇರಣೆಯಾದ ಆತ ನಮ್ಮನ್ನು ಇನ್ನು ಬಿಟ್ಟುಹೋಗಿಲ್ಲ. ನಮ್ಮಿಂದ ದೂರ ಹೋದರು ನೆನಪು ಮಾತ್ರ ಇದೆ. ಈಗಲೂ ಆತನ ಮಾತುಗಳು ತಮ್ಮ ಕಿವಿಗಳಲ್ಲಿ ಸದ್ದು ಮಾಡುತ್ತಿದೆ. ನಮಗಿಂತ ಚಿಕ್ಕವನಾದರೂ ಸದಾ ಮಾರ್ಗದರ್ಶ ಮಾಡುತ್ತಿದ್ದ, ಕೊಂಚ ಎಡವಿದರು ಎಚ್ಚರಿಸುತ್ತಿದ್ದ,  ಜೀವ ದೇಹವನ್ನು ಅಗಲಿ ಪ್ರಕೃತಿಯಲ್ಲಿ ಲೀನವಾದರೂ ನೀನು ಸದಾ ನಮ್ಮ ಜೊತೆಗಿರುವೆ. ಭಗವಂತನು ನಿನ್ನ ಆತ್ಮಕ್ಕೆ ಶಾಂತಿ ನೀಡಲಿ.

ಬಿಟಿವಿ ಕ್ಯಾಮರಾಮೆನ್ ನಾಗೇಶ್ ನಿಧನ

Monday, July 22nd, 2019
Nagesh

ಮಂಗಳೂರು : ಬಿಟಿವಿ ಕ್ಯಾಮರಾಮೆನ್ ನಾಗೇಶ್ (35) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ರಾತ್ರಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನಾಗೇಶ್ ಅವರು ನಮ್ಮ ಟಿವಿ, ಜನಶ್ರೀ ಚಾನಲ್ ನಲ್ಲಿ ಕ್ಯಾಮರಾಮೆನ್ ಆಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಬಿಟಿವಿಯಲ್ಲಿ ಮಂಗಳೂರು ವಿಭಾಗದಲ್ಲಿ ಆರಂಭದಿಂದಲೇ ಕ್ಯಾಮರಾಮೆನ್ ವೃತ್ತಿ ನಿರ್ವಹಿಸುತ್ತಿದ್ದರು. ನಾಗೇಶ್ ಸರಳ ವ್ಯಕ್ತಿತ್ವ, ಜನಪರ ಕಾಳಜಿಯಿಂದ ಮಾಧ್ಯಮವಲಯದಲ್ಲಿ ಮತ್ತು ಎಲ್ಲರೊಂದಿಗೆ ಗುರುತಿಸಿಕೊಂಡಿದ್ದರು. ಪಡು, ಕಲ್ಲಚ್ಚಿಲ್ ನಲ್ಲಿ ಹಲವು ಸಂಘ ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದರು. ಪಡು, ಕಲ್ಲಚ್ಚಿಲ್ ಬಾಬು-ಲಕ್ಷ್ಮೀ ದಂಪತಿಗಳ ಪುತ್ರರಾಗಿರುವ […]