ಮಗ ಸತ್ತ ನೋವು ಮರೆಯಲು ಸೀರೆಯ ಮೇಲೆ ಲಲಿತ ಸಹಸ್ರ ನಾಮ..!
Tuesday, July 3rd, 2018ಚಿಕ್ಕಮಗಳೂರು: ಮಗ ಸತ್ತ ನೋವು ಮರೆಯಲು ತಾಯಿಯೊಬ್ಬಳು ಸೀರೆಯ ಮೇಲೆ ಲಲಿತ ಸಹಸ್ರ ನಾಮವನ್ನು ಬರೆದು ಶೃಂಗೇರಿಯ ಶಾರದಾಂಬೆಗೆ ಅರ್ಪಣೆ ಮಾಡಿರುವ ವಿಡಿಯೋ ಹಾಗೂ ಫೋಟೋ ಇದೀಗ ವೈರಲ್ ಆಗಿದೆ. ತಮಿಳುನಾಡು ಮೂಲದ ಪದ್ಮಾ ಮಂಜುನಾಥ್ ಎಂಬುವರೇ ಲಲಿತ ಸಹಸ್ರ ನಾಮ ಬರೆದು ಶಾರದೆಗೆ ಅರ್ಪಣೆ ಮಾಡಿದವರು. ಕಳೆದ ವರ್ಷ ಇವರ ಪ್ರೀತಿಯ ಮಗ ಮೃತಪಟ್ಟಿದ್ದು, ಈ ನೋವನ್ನು ಮರೆಯಲೆಂದೇ ಪದ್ಮಾ ಮಂಜುನಾಥ್ ಸೀರೆಯ ಮೇಲೆ ಸಾವಿರ ನಾಮವನ್ನು ಹೆಣೆದಿದ್ದಾರಂತೆ. ಪದ್ಮಾ ಮಂಜುನಾಥ್ ಅವರು ಬ್ರಹ್ಮಾಂಡ ಪುರಾಣದಲ್ಲಿ […]