ನಾಗರಪಂಚಮಿ, ಭೂಲೋಕದ ಪ್ರತ್ಯಕ್ಷ ಅಂದರೆ ಕಣ್ಣಿಗೆ ಕಾಣುವ ದೇವರನ್ನು ಪೂಜಿಸುವ ಹಬ್ಬ

Friday, July 28th, 2017
Kaup Govardhan

ಮಂಗಳೂರು : ಹಿಂದೂಗಳ ನೈಸರ್ಗಿಕ ಆರಾಧನೆ ಎಂದು ಕರೆಯಲ್ಪಡುವ ನಾಗರಪಂಚಮಿ, ಭೂಲೋಕದ ಪ್ರತ್ಯಕ್ಷ ಅಂದರೆ ಕಣ್ಣಿಗೆ ಕಾಣುವ ದೇವರನ್ನು ಪೂಜಿಸುವ ಹಬ್ಬ ಎಂದು ನಂಬಲಾಗಿದೆ. ಪರಶುರಾಮ ದೇವರು ಸಮುದ್ರರಾಜನಿಂದ ತುಳುನಾಡನ್ನು ಪಡೆದುಕೊಂಡಾಗ ಅದು ಉಪಯೋಗಕ್ಕೆ ಬಾರದ ಬರಡು ಭೂಮಿಯಾಗಿತ್ತು. ಉಪ್ಪಿನ ಕೋಟೆಯಂತೆ ಇದ್ದ ಭೂಮಿಯನ್ನು ಸಮೃದ್ಧ ಭೂಮಿಯನ್ನಾಗಿಸಿ ಕೊಡಲು ಪರಶುರಾಮ ನಾಗ ರಾಜನನ್ನು ಬೇಡಿಕೊಳ್ಳುತ್ತಾನೆ. ಪರಶುರಾಮನ ಮೊರೆಯನ್ನು ಕೇಳಿದ ನಾಗಗಳು ತಮ್ಮ ದೇಹವನ್ನು ಪಣಕ್ಕೆ ಇಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ಅಡಿಯಲ್ಲಿದ್ದ ಮೆಕ್ಕಲು […]

ಪರಶುರಾಮ ಸೃಷ್ಟಿಯ ದ.ಕ.ಜಿಲ್ಲೆಯಲ್ಲಿ ಶ್ರೀ ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವಿದೆ : ಶ್ರೀಧರ ಶೆಟ್ಟಿ

Friday, September 18th, 2015
Bunts Ganeshotsava

ಮಂಗಳೂರು : ಪರಶುರಾಮ ಸೃಷ್ಟಿಯ ದ.ಕ.ಜಿಲ್ಲೆಯಲ್ಲಿ ಶ್ರೀ ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವಿದ್ದು, ನಮ್ಮ ಸಂಸ್ಕೃತಿ ಪರಂಪರೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಬಂಟ ಸಮಾಜ ಆಯೋಜಿಸುತ್ತಿರುವ ಶ್ರೀಗಣೇಶೋತ್ಸವ ಯಶಸ್ವಿಯಾಗಿ ನೆರವೇರಲಿ ಎಂದು ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ನಿವೃತ್ತ ಡೀನ್ ಡಾ.ಎನ್.ಶ್ರೀಧರ ಶೆಟ್ಟಿ ಅವರು ಹೇಳಿದರು. ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀಗಣೇಶೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಧ್ವಜಾರೋಹಣ ನೆರವೇರಿಸಿದ ಬ್ರಿ.ಚಂದ್ರಶೇಖರ ಶೆಟ್ಟಿ ಅವರು ಮಾತನಾಡಿ […]

ಶ್ರೀ ಸದಾಶಿವ ಗಣಪತಿ ದೇವಾಲಯ

Saturday, October 23rd, 2010
ಶ್ರೀ ಸದಾಶಿವ ಗಣಪತಿ

ಕ್ಷೇತ್ರ-ಪುರಾಣ:  ಶ್ರೀ ಸದಾಶಿವ ಗಣಪತಿ ದೇವಾಲಯ, ಸುರತ್ಕಲ್. ಮಂಗಳೂರು : ಸೃಷ್ಟಿಕರ್ತನಾದ ಪ್ರಜಾಪತಿಯು ಜಗತ್ತನ್ನು ನಿರ್ಮಿಸಿ ಅದರಲ್ಲಿ ಪ್ರಜಾಕೋಟಿಯನ್ನು ಸೃಷ್ಟಿಸುವುದರೊಂದಿಗೆ ಹಲವು ಯಜ್ಞವಿಧಾನಗಳನ್ನೂ ರೂಪೀಕರಿಸಿ, “ಈ ಯಜ್ಞಕಾರ್ಯಗಳನ್ನು ನೀವು ಶ್ರದ್ಧಾಪೂರ್ವಕ ನಡೆಸಿಕೊಂಡು ಬನ್ನಿ, ಇದರಿಂದ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ” ಎಂದು ಹೇಳಿದನಂತೆ ಅದರಂತೆ ಈ ಕರ್ಮಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬನೂ ಇದು ತನ್ನ ಕರ್ತವ್ಯ ವೆಂದು ಭಾವಿಸಿ, ತ್ಯಾಗಭೂಯಿಷ್ಟವಾದ ಯಜ್ಞ ಯಾಗಾದಿಗಳನ್ನು ನಡೆಸುತ್ತಾ ಕುಲ ಕ್ರಮಾಗತವಾದ ಧರ್ಮಕರ್ಮಗಳಲ್ಲಿಆಸಕ್ತನಾಗಿ ಜೀವನದ ಪರಮಲಕ್ಷ್ಯ ವನ್ನು ಸಾಧಿಸುತ್ತಿದ್ದನು. ಭೌತಿಕ ಸುಖಕ್ಕಿಂತಲೂ ಶ್ರೇಷ್ಟವಾದ ಆಧ್ಯಾತ್ಮಿಕ […]