ಆಟಿ ಅಮಾವಾಸ್ಯೆ ದೇವಸ್ಥಾನಗಳಲ್ಲಿ ತೀರ್ಥಸ್ನಾನ ಇಲ್ಲ, ಕೊರೊನಾ ಸೋಂಕಿನ ಹಿನ್ನೆಲೆ ಪಾಲೆ ಕಷಾಯಕ್ಕೆ ಬೇಡಿಕೆ

Monday, July 20th, 2020
palekashaya

ಬಂಟ್ವಾಳ: ಆಟಿ ಅಮಾವಾಸ್ಯೆಯ ದಿನ ಪಾಲೆ (ಹಾಲೆ) ಮರದಲ್ಲಿ ವಿಶೇಷ ರೋಗ ನಿರೋಧಕ ಶಕ್ತಿ ಇದೆ ಎಂಬ ನಂಬಿಕೆ ತಲತಲಾಂತರ ದಿಂದ ಬಂದಿದೆ. ಸೂರ್ಯೋದಯದ ಮೊದಲು ಅಂದರೆ ನಸುಕಿನಲ್ಲೇ ಕಲ್ಲಿನಿಂದ ಜಜ್ಜಿ ತಂದು ಕಷಾಯ ಮಾಡಿ ಸೇವಿಸುವುದು ರೂಢಿ. ಆಷಾಢ ತಿಂಗಳಲ್ಲಿ ಭಾರಿ ಮಳೆ. ಕ್ರಿಮಿ- ಕೀಟಬಾಧೆಯಿಂದ ಆರೋಗ್ಯದ ರಕ್ಷಣೆ, ರೋಗ ನಿರೋಧಕತೆಗಾಗಿ ಪಾಲೆ (ಹಾಲೆ) ಮರದ ತೊಗಟೆಯ ಕಷಾಯ ಮಾಡಿ ಕುಡಿದರೆ ಒಳ್ಳೆಯದಂತೆ. ಔಷಧೀಯವಾಗಿ ಈ ಕಷಾಯಕ್ಕೆ ಬಹಳಷ್ಟು ಮಹತ್ವವಿರುವುದರಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು. ಈ ಬಾರಿ ಲಾಕ್ ಡೌನ್ […]