Blog Archive

ಪುತ್ತೂರು : ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ವಿಡಿಯೋ ವೈರಲ್

Wednesday, July 3rd, 2019
Abvp-Girl

ಪುತ್ತೂರು : ಪುತ್ತೂರು ಕಾಲೇಜಿನ ವಿದ್ಯಾರ್ಥಿನಿ ಯೊಬ್ಬಳಿಗೆ ಗಾಂಜಾ ನೀಡಿ ನಾಲ್ಕು ಮಂದಿ ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯವಿವೇಕಾನಂದ ಕಾಲೇಜಿನ  ನಾಲ್ವರು ವಿದ್ಯಾರ್ಥಿಗಳು ತಮ್ಮದೇ ಕಾಲೇಜಿನ ಸಹಪಾಠಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು, ಅಮಲು ಬರುವಂತೆ ಮಾಡಿ ಅತ್ಯಾಚಾರ ನಡೆಸಿರುವುದಲ್ಲದೆ, ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ವಿಚಾರ […]

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿಗೆ ಹೃದಯಾಘಾತ

Friday, May 31st, 2019
puttur-Nandi

ಪುತ್ತೂರು : ತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿ ಹೆಸರಿನ ಬಸವ ಹೃದಯಾಘಾತಕ್ಕೆ ಒಳಗಾಗಿ ಮೇ.30ರ ರಾತ್ರಿ ಮೃತಪಟ್ಟಿದೆ . ನಂದಿ ದಿನ ನಿತ್ಯದಂತೆ ಮೇ30ರ ಮಧ್ಯಾಹ್ನ ಪೂಜೆ ವೇಳೆ ದೇವಸ್ಥಾನದ ಮುಂಭಾಗ ಬಂದು ದೇವರ ಪೂಜೆ ವೀಕ್ಷಿಸಿತ್ತು. ಆದರೆ ರಾತ್ರಿ 7.45 ರ ವೇಳೆಗೆ ನಂದಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಎಲ್ಲರಿಗೂ ಪ್ರೀತಿ ಪಾತ್ರವಾಗಿದ್ದ ಬಸವನ ಸಾವಿಗೆ ಭಕ್ತರು ಕಂಬನಿ ಮಿಡಿದಿದ್ದಾರೆ.

ಪುತ್ತೂರುನಲ್ಲಿ ’ಕ್ಯಾಂಪ್ಕೊದ ಬೃಹತ್ ಗೋದಾಮು ನಿರ್ಮಾಣಕ್ಕೆ ಭೂಮಿ ಪೂಜೆ

Tuesday, January 8th, 2019
Campco

ಪುತ್ತೂರು :  ಇಲ್ಲಿನ ಕಾವು ಪ್ರದೇಶದಲ್ಲಿ, ಕ್ಯಾಂಪ್ಕೊ ತನ್ನ ಸ್ವಂತ ನಿವೇಶನದಲ್ಲಿ ಅತ್ಯಾಧುನಿಕವಾದ ಬೃಹತ್ ಗೋದಾಮು ನಿರ್ಮಿಸಲು ಸಂಕಲ್ಪಸಿದ್ದು ಅದರ ಅಂಗವಾಗಿ ಭೂಮಿ ಪೂಜೆ ಕಾರ್ಯ ಮಂಗಳವಾರ  ನೆರವೇರಿತು. 1.31 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸುಮಾರು 24.5 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬೃಹತ್ ಗೋದಾಮು ಕಾವಿನಲ್ಲಿ ನಿರ್ಮಾಣಗೊಳಲ್ಲಿದ್ದು, ಅಲ್ಲಿ ಅಡಕೆ, ರಬ್ಬರ್ ಹಾಗೂ ಕಾಳುಮೆಣಸು ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಶೇಖರಣೆಗೆ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಈ ಸುಸಜ್ಜಿತ ಆಧುನಿಕ ವ್ಯವಸ್ಥೆಗಳಿಂದ ಸಂಸ್ಥೆಯ ಕಾರ್ಯಕ್ಷಮತೆ ವೃದ್ಧಿಗೊಂಡು ಸದಸ್ಯರಿಗೆ […]

ಪುತ್ತೂರು ಪ್ರೌಢ ಶಾಲೆಯ ವಿದ್ಯಾರ್ಥಿನಿಗೆ  “ಐರಿಸ್‌ -2018 ಗ್ರ್ಯಾಂಡ್ ಅವಾರ್ಡ್‌”

Saturday, December 8th, 2018
putturu

ಪುತ್ತೂರು: ಸಂತ ಫಿಲೋಮಿನಾ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಅನುಷಾ ಎನ್‌.ಡಿ. ಹೊಸದಿಲ್ಲಿಯಲ್ಲಿ ನಡೆದ ಐರಿಸ್‌ -2018 ಸ್ಪರ್ಧೆಯಲ್ಲಿ ಭಾಗವಹಿಸಿ ಗ್ರ್ಯಾಂಡ್ ಅವಾರ್ಡ್‌ ಪಡೆದು ಅಮೆರಿಕದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಸಮಾವೇಶ ಐಸೆಫ್‌ -2019ರಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎಎಸ್‌ಎಂ ಮೆಟೀರಿಯಲ್‌ ಎಜುಕೇಶನ್‌ ಫೌಂಡೇಶನ್‌ ಕೊಡಮಾಡುವ “ಮೋಸ್ಟ್‌ ಔಟ್‌ಸ್ಟಾಂಡಿಂಗ್‌ ಎಕ್ಸಿಬಿಟ್‌ ಇನ್‌ ಮ್ಯಾಥ್ಸ್ ‘ವಿಶೇಷ ಪುರಸ್ಕಾರವನ್ನು ಪಡೆದಿರುವ ಈಕೆ “ಬಯೋಡಿಗ್ರೇಡೆಬಲ್‌ ಇನ್ಸುಲೇಟರ್‌ ಫ್ರಮ್ ಅರೆಕಾ ಶೀತ್‌’ ಎಂಬ ವಿಜ್ಞಾನ ಯೋಜನೆ ಯನ್ನು ಶಾಲೆಯ ಗಣಿತ […]

ದ.ಕ. ಜಿಲ್ಲೆಯ ಮೂರು ತಾಲೂಕು ಒಟ್ಟುಗೂಡಿ ಪುತ್ತೂರು ಜಿಲ್ಲೆ ರಚನೆಯಾಗಬೇಕು: ಹೋರಾಟ ಸಮಿತಿ ಒತ್ತಾಯ

Friday, November 16th, 2018
puttur

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂರು ತಾಲೂಕುಗಳು ಒಟ್ಟುಗೂಡಿ ಪ್ರತ್ಯೇಕ ಪುತ್ತೂರು ಜಿಲ್ಲೆ ರಚನೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈಗಾಗಲೇ ಈ ಕುರಿತು ಹೋರಾಟ ಸಮಿತಿಯನ್ನೂ ರಚಿಸಲಾಗಿದೆ ಎನ್ನಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಉಡುಪಿ ಜಿಲ್ಲೆಯನ್ನು ಸರ್ಕಾರ ಪ್ರತ್ಯೇಕ ಜಿಲ್ಲೆಯಾಗಿ‌ ಘೋಷಿಸಿದ ಬಳಿಕ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ. ಇದರಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಪುತ್ತೂರು ಜಿಲ್ಲೆ ಮಾಡಬೇಕೆಂಬ ಕೂಗು ಕೇಳಿಬಂದಿದೆ. ಇದಕ್ಕಾಗಿ ಈ ಭಾಗದ ಪ್ರಮುಖರು ಒಂದು ಹಂತದ ಸಭೆಯನ್ನು […]

ದೇವಸ್ಥಾನದ ಕೆರೆಯಲ್ಲಿ ಮಹಿಳೆವೋರ್ವಳ ಮೃತದೇಹ ಪತ್ತೆ..!

Monday, November 12th, 2018
devastana

ಪುತ್ತೂರು: ನಗರದ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಇಂದು ಮಹಿಳೆವೋರ್ವಳ ಮೃತದೇಹ ಪತ್ತೆಯಾಗಿದೆ. ಪುತ್ತೂರು ಮಹಾವೀರ ಆಸ್ಪತ್ರೆಯ ಬಳಿಯ ನಿವಾಸಿ ವಿಜಯಲಕ್ಷ್ಮಿ(55) ಮೃತಪಟ್ಟ ಮಹಿಳೆ. ಕೆರೆಯಲ್ಲಿ ತೇಲುತ್ತಿದ್ದ ವಿಜಯಲಕ್ಷ್ಮಿಯವರ ಮೃತದೇಹವನ್ನು ಮೇಲಕ್ಕೆತ್ತಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮನೆಯ ಮುಂಭಾಗದಲ್ಲಿ ಹಾಕಿದ್ದ ಬಟ್ಟೆಗೆ ಬೆಂಕಿ ಹಚ್ಚಿದ ಆರೋಪ: ಆರೋಪಿ ಬಂಧನ

Wednesday, October 31st, 2018
arrested

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮನೆಯೊಂದರ ಮುಂಭಾಗದ ಸರಿಗೆಯಲ್ಲಿ ಹಾಕಿದ್ದ ಬಟ್ಟೆಗೆ ಬೆಂಕಿ ಹಚ್ಚಿ ಸುಮಾರು 5,000 ರೂ.ನಷ್ಟು ನಷ್ಟಗೊಳಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಣೇಶ್ ಕಲ್ಲಗುಡ್ಡೆ ಬಂಧಿತ ಆರೋಪಿ. ವಿದ್ಯುತ್ ಕಾಂಟ್ರಾಕ್ಟರ್ ಅಶೋಕ್ ಪೂಜಾರಿ ಪುತ್ತೂರು ಗ್ರಾಮದ ಕೆಮ್ಮಿಂಜೆ ಗ್ರಾಮದ ಕೊರಂಗು ನಿವಾಸಿ ಗೋಪಾಲ ಮುಗೇರ ಎಂಬುವರ ಮನೆಗೆ ವೈರಿಂಗ್ ಹಾಗೂ ವಿದ್ಯುತ್ ಸಂಪರ್ಕ ಕೆಲಸ ಮಾಡಿದ್ದರು. ಹೀಗಾಗಿ ಅಶೋಕ್ ಪೂಜಾರಿಗೆ 11,500 ರೂ.ಯನ್ನು ಮುಗೇರ ನೀಡಿದ್ದರು. ಆದರೆ ಈ ಬಗ್ಗೆ ಹೆಚ್ಚುವರಿಯಾಗಿ 4,000 ರೂ. ನೀಡುವಂತೆ […]

ಕರೆಂಟ್​ ಶಾಕ್​​ ಹೊಡೆದು ಎಸ್​ಡಿಪಿಐ ಮುಖಂಡ ಸಾವು

Thursday, October 11th, 2018
SDPI

ಮಂಗಳೂರು: ಕರೆಂಟ್ ಶಾಕ್ ಹೊಡೆದು ಎಸ್ಡಿಪಿಐ ಮುಖಂಡ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ದರ್ಬೆಯಲ್ಲಿ ನಡೆದಿದೆ. ನಾಳೆ ಎಸ್ಡಿಪಿಐ ಪಕ್ಷದ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿತ್ತು. ಇದರ ಫ್ಲೆಕ್ಸ್ ಕಟ್ಟುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಪುತ್ತೂರು ನಗರದ ಎಸ್ಡಿಪಿಐ ಅಧ್ಯಕ್ಷ ಹಂಝ ಅಪ್ನಾನ್ ಮೃತಪಟ್ಟಿದ್ದಾರೆ. ಪುತ್ತೂರಿನ ದರ್ಬೆ ಪೆಟ್ರೋಲ್ ಬಂಕ್ ಬಳಿ ಕಬ್ಬಿಣದ ಚೌಕಟ್ಟು ಹಾಕಿದ್ದ ಫ್ಲೆಕ್ಸನ್ನು ಕಟ್ಟುತ್ತಿರುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ತಗುಲಿ ದುರಂತ ಸಂಭವಿಸಿದೆ. ಶಾಕ್ ಹೊಡೆದ ಕಾರಣ ಫ್ಲೆಕ್ಸ್ ಕಟ್ಟುತ್ತಿದ್ದ […]

ನಕ್ಸಲ್ ಬೆಂಬಲಿಗರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಪುತ್ತೂರಿನಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನ

Tuesday, September 25th, 2018
putturu

ಪುತ್ತೂರು: ನಕ್ಸಲೀಯರಿಗೆ ಬೆಂಬಲ ನೀಡಿದ ಗಿರೀಶ್ ಕಾರ್ನಾಡ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಸನಾತನ ಸಂಸ್ಥೆಯ ಮೇಲಿನ ಸುಳ್ಳು ಆರೋಪವನ್ನು ಖಂಡಿಸಿ ಬೆಳಿಗ್ಗೆ 11.00 ಗಂಟೆಗೆ ಪುತ್ತೂರು ಬಸ್ ನಿಲ್ದಾಣದ ಬಳಿಯಿರುವ ಗಾಂಧಿ ಕಟ್ಟೆಯ ಮುಂಭಾಗದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಎಲ್ಲಾ ಹಿಂದೂಪರ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನ ನಡೆಯಿತು. ಶಂಖನಾದದ ಮೂಲಕ ಆಂದೋಲನವನ್ನು ಆರಂಭಿಸಲಾಯಿತು. ಚೇತನ ಪ್ರಭು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಹಿಂದೂ ಜನಜಾಗೃತಿ ಸಮಿತಿಯ ಮಂಗಳೂರು ಕೇಂದ್ರ ಸಮನ್ವಯಕರಾದ ಶ್ರೀ. […]

ಪತಿಯೊಂದಿಗೆ ಮುನಿಸು: ಹಣ ಹಾಗೂ ಚಿನ್ನಾಭರಣದೊಂದಿಗೆ ನಾಪತ್ತೆ

Friday, September 21st, 2018
escaped

ಮಂಗಳೂರು: ಪತಿಯೊಂದಿಗೆ ಮುನಿಸಿಕೊಂಡ ನವವಿವಾಹಿತೆ ನಗದು ಹಣ ಹಾಗೂ ಚಿನ್ನಾಭರಣದೊಂದಿಗೆ ನಾಪತ್ತೆಯಾದ ಘಟನೆ ಪುತ್ತೂರು ನಗರದ ಹಾರಾಡಿಯಲ್ಲಿ ನಡೆದಿದೆ. ಪುತ್ತೂರು ಹಾರಾಡಿ ಕಾಂಪೌಂಡ್ ನಿವಾಸಿಯ ಪತ್ನಿ ನಾಪತ್ತೆಯಾದ ನವವಿವಾಹಿತೆ. ಆರು ತಿಂಗಳ ಹಿಂದೆಯಷ್ಟೇ ನಡೆದಿತ್ತು. ವಿವಾಹವಾದ ಆರಂಭದಲ್ಲಿ ಈ ದಂಪತಿ ಅನ್ಯೋನ್ಯವಾಗಿದ್ದರು. ಬಳಿಕ ಕ್ಷುಲ್ಲಕ ಕಾರಣಕ್ಕೆ ಪತಿ ಜೊತೆ ಮುನಿಸಿಕೊಂಡಿದ್ದ ಯುವತಿ ಮನೆಯಲ್ಲಿ ಪ್ರತ್ಯೇಕ ರೂಂನಲ್ಲೇ ಒಂಟಿಯಾಗಿ ಇರುತ್ತಿದ್ದರು . ಕಳೆದ ಮಂಗಳವಾರ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದ ಪತ್ನಿ ರಾತ್ರಿ ಸುಮಾರು 11.45ರ ವೇಳೆಗೆ […]