Blog Archive

ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿನಲ್ಲಿ ಧಾರಾಕಾರ ಮಳೆ‌…ಶಾಲಾ-ಕಾಲೇಜುಗಳಿಗೆ ರಜೆ!

Thursday, June 14th, 2018
heavy-rain

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಸುಳ್ಯ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ‌ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಿನ್ನೆ ರಾತ್ರಿಯಿಂದ‌ ಈ ಮೂರು ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮುಂಜಾಗ್ರತ ಕ್ರಮವಾಗಿ ‌ಪುತ್ತೂರು ಸಹಾಯಕ ಆಯುಕ್ತ ಕೃಷ್ಣಮೂರ್ತಿ, ‌ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.

ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರ ಎಲ್ಲವೂ ಬಿಜೆಪಿ ತೆಕ್ಕೆಗೆ: ಡಿ.ವಿ.ಸದಾನಂದ ಗೌಡ

Friday, June 8th, 2018
sadananda-gowda

ಪುತ್ತೂರು: ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರ ಎಲ್ಲವೂ ಬಿಜೆಪಿ ತೆಕ್ಕೆಗೆ ಎಂದು ಡಿ.ವಿ.ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಸದಾನಂದ ಗೌಡ ಅವರು ಶಿಕ್ಷಕರು ,ಪದವೀಧರರು ಹಿಂದಿನಿಂದಲೂ ಬಿಜೆಪಿ ಬೆಂಬಲಿಸಿದವರು.ವಿಧಾನಸಭೆಯಲ್ಲಿ ಶಾಸಕರಿಲ್ಲದ ಕಾಲದಲ್ಲೂ ವಿಧಾನಪರಿಷತ್ ಗೆ ಶಾಸಕರನ್ನು ಕಳುಹಿಸಿದ ಇತಿಹಾಸ ಬಿಜೆಪಿಯದ್ದು.ಇತ್ತೀಚಿನ ದಿನಗಳಲ್ಲಿ ಬಿಜೆಪಿ‌ ಬಗ್ಗೆ ಒಲವು ಹೆಚ್ಚಾಗಿದೆ ಎಂದಿದ್ದಾರೆ. ರಾಜ್ಯದ ಎಲ್ಲಾ ಸ್ಥಾನಗಳನ್ನೂ ನೂರಕ್ಕೆ ನೂರು ಬಿಜೆಪಿ ಪಡೆಯಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪುತ್ತೂರು ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಗೆಲುವು

Tuesday, May 15th, 2018
sanjeev-matondar

ಪುತ್ತೂರು: ಕಾಂಗ್ರೆಸ್ ಕೈಯಲ್ಲಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ಕಸಿದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಶಕುಂತಳಾ ಶೆಟ್ಟಿಯವರು ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ವಿರುದ್ಧ ಪರಾಭವಗೊಂಡಿದ್ದಾರೆ.

ಪುತ್ತೂರಿನ ಜನಪ್ರಿಯ ಶಾಸಕಿ ಶಕುವಕ್ಕ

Friday, May 11th, 2018
shakuntala-shetty

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಎರಡನೇ ದೊಡ್ಡನಗರ ಪುತ್ತೂರು ಹೇಳಿ ಕೇಳಿ ಬಿಜೆಪಿ ಭದ್ರಕೋಟೆ.1994ರಿಂದ 2008ರ ವರೆಗೆ ಇಲ್ಲಿ ಬಿಜೆಪಿಯದ್ದೇ ರಾಜ್ಯಭಾರ.ಅದಕ್ಕೂ ಮೊದಲು ಇಲ್ಲಿ ಪರಿವಾರದ ಶಾಸಕರೇ ಆಯ್ಕೆ ಆಗಿದ್ದರು. ಕಳೆದ ಬಾರಿ ಬಿಜಪಿಯಿಂದ ವಲಸೆ ಬಂದ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಪುತ್ತೂರನ್ನು ಗೆದ್ದು ಕೊಟ್ಟರು. ಒಂದು ಬಾರಿ ಬಿಜೆಪಿಯಿಂದಲೂ ಆಯ್ಕೆ ಆಗಿದ್ದ ಶಕುವಕ್ಕ ಇಂದು ಪುತ್ತೂರಿನ ಜನಪ್ರಿಯ ಶಾಸಕಿ. ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ, ಶಿವರಾಮ ಕಾರಂತರ ಕಾರ್ಯಕ್ಷೇತ್ರ ಬಾಲವನ , ಬಿರುಮಲೆ […]

ಪುತ್ತೂರು ನಗರದಲ್ಲಿ ಬಿಜೆಪಿಯಿಂದ ರೋಡ್ ಶೋ..!

Thursday, May 10th, 2018
putturu

ಪುತ್ತೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪುತ್ತೂರು ನಗರದಲ್ಲಿ ಬಿಜೆಪಿಯಿಂದ ರೋಡ್ ಶೋ ನಡೆಯಿತು. ನಗರದ ಬೊಳುವಾರ ಆಂಜನೇಯ ಮಂತ್ರಾಲಯದ ಬಳಿಯಲ್ಲಿ ಉತ್ತರ ಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ ಡಾ. ಮಹೇಂದ್ರ ಸಿಂಗ್ ಪಕ್ಷದ ಧ್ವಜವನ್ನು ಹಿರಿಯ ಕಾರ್ಯಕರ್ತ ಗೋಪಾಲ್ ನಾಯ್ಕಿ ಅವರಿಗೆ ಹಸ್ತಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೊಳವಾರಿನಿಂದ ಹೊರಟು ಮುಖ್ಯ ರಸ್ತೆಯಲ್ಲಿ ಸಾಗಿ ದರ್ಬೆಯ ತನಕ ರೋಡ್ ಶೋ ನಡೆಸಲಾಯಿತು. ಪಕ್ಷದ ಅಭ್ಯರ್ಥಿ ಸಂಜೀವ ಮಠಂದೂರು, ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ […]

ಲಾರಿ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Wednesday, April 25th, 2018
accident

ಉಪ್ಪಿನಂಗಡಿ: ಲಾರಿಯೊಂದು ಢಿಕ್ಕಿ ಹೊಡೆದು ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಪೆದಮಲೆ ಬಳಿ ಬುಧವಾರ ಬೆಳಗ್ಗೆ ನಡೆದಿದೆ. ಪಿಲಿಗೂಡಿನ ಮೂಡಬೈಲ್‌ನ ಅಶೋಕ್ ಪೂಜಾರಿ (29) ಮೃತ ಬೈಕ್ ಸವಾರ. ಇವರು ಉಪ್ಪಿನಂಗಡಿಯಿಂದ ಬೆಳ್ತಂಗಡಿ ಕಡೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಎದುರುಗಡೆಯಿಂದ ಬಂದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅಶೋಕ್ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ತೂರು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಆಯ್ಕೆಗೆ ತೀವ್ರ ವಿರೋಧ

Tuesday, April 17th, 2018
sanjiv-matandur

ಮಂಗಳೂರು: ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿ ಸಂಜೀವ ಮಠಂದೂರು ಆಯ್ಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ತಾಣಗಳಲ್ಲಿ ಮಠಂದೂರು ಆಯ್ಕೆಗೆ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ತೂರಿನಲ್ಲಿ ಬಿಜೆಪಿ ಸೋಲು ಖಚಿತ ಅಂತ ಟ್ರೋಲ್ ಫೇಸ್‌ಬುಕ್‌ನಲ್ಲಿ ಟ್ರೋಲ್‌ ಹರಿದಾಡುತ್ತಿದೆ. ಪುತ್ತೂರಿನಲ್ಲಿ ಅಶೋಕ್ ರೈ ಮತ್ತು ಹಿಂದೂ ಮುಖಂಡ ಅರುಣ್ ಪುತ್ತಿಲ ಪರ ಒಲವಿದ್ದು, ಅವರಿಗೆ ಟಿಕೆಟ್ ನೀಡಬೇಕು ಎಂಬುದು ಬಿಜೆಪಿ ಕಾರ್ಯಕರ್ತರ ಆಗ್ರಹವಾಗಿದೆ. ಕಳೆದ ಬಾರಿ ಸೋಲು ಕಂಡಿದ್ದ ಸಂಜೀವ ಮಠಂದೂರಿಗೆ ಮತ್ತೆ ಟಿಕೆಟ್ ನೀಡಿದ್ದಕ್ಕೆ ಕಾರ್ಯಕರ್ತರು […]

ಜಮ್ಮು ಬಾಲಕಿಯ ಅತ್ಯಾಚಾರ-ಹತ್ಯೆಗೆ ಖಂಡನೆ: ಪುತ್ತೂರು ಸಿಎಫ್‌ಐಯಿಂದ ಜಾಗೃತಿ ಅಭಿಯಾನ

Friday, April 13th, 2018
jammu-kashmir

ಪುತ್ತೂರು: ಜಮ್ಮು-ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿ ಆಶಿಫಾ ಬಾನುವಿನ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‌ಐ)ದ ಪುತ್ತೂರು ತಾಲೂಕು ಸಮಿತಿಯ ವತಿಯಿಂದ ಶುಕ್ರವಾರ ಪುತ್ತೂರು ಜುಮಾ ಮಸೀದಿ ಬಳಿ ಜಾಗೃತಿ ಅಭಿಯಾನ ನಡೆಯಿತು. ಸಿಎಫ್‌ಐ ತಾಲೂಕು ಅಧ್ಯಕ್ಷ ಸವಾದ್ ಕಲ್ಲರ್ಪೆ ಮಾತನಾಡಿ, ಈ ಪ್ರಕರಣದ ಐದು ಆರೋಪಿಗಳಲ್ಲಿ ನಾಲ್ವರು ಪೊಲೀಸರಾಗಿದ್ದು ಇಲ್ಲಿ ರಕ್ಷಣೆ ಒದಗಿಸಬೇಕಾದವರು ಈ ರೀತಿಯ ನೀಚ ಕೃತ್ಯ ಎಸಗಿದ್ದು ಕಾನೂನು ವ್ಯವಸ್ಥೆಗೆ ಅವಮಾನ. ಅದೇ ರೀತಿ ಬಂಧಿಸಲ್ಪಟ್ಟ […]

ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ ಆರಂಭ…

Thursday, April 12th, 2018
puttur

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವವು ಎ.10ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡಿದೆ ಬೆಳಿಗ್ಗೆ ಗಂಟೆ 9.53ಕ್ಕೆ ವೃಷಭ ಲಗ್ನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿಯವರ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು. ಸಂಪ್ರದಾಯದಂತೆ ಪಿ.ಜಿ.ಜಗನ್ನಿವಾಸ್ ರಾವ್ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಕುಂಟಾರು ರವೀಶ್ ತಂತ್ರಿಗಳು ಧಾರ್ಮಿಕ ವಿಧಾನ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವಿ.ಎಸ್. ಭಟ್ ಮತ್ತು ವಸಂತ ಕೆದಿಲಾಯರವರು ಸಹಕಾರ ನೀಡಿದರು. […]

ಸಂಪ್ಯದಲ್ಲಿ ಕಾರು, ಬಸ್‌ ಢಿಕ್ಕಿ: ಯುವ ವಕೀಲೆ ಸಾವು

Tuesday, April 3rd, 2018
advocate

ಪುತ್ತೂರು: ಸಂಪ್ಯ ಮಸೀದಿ ಮುಂಭಾಗದಲ್ಲಿ ಶನಿವಾರ ವ್ಯಾಗನರ್‌ ಕಾರು ಹಾಗೂ ಕೆಎಸ್‌ ಆರ್‌ಟಿಸಿ ಬಸ್‌ ಮುಖಾಮುಖೀ ಢಿಕ್ಕಿಯಾಗಿ ಯುವ ವಕೀಲೆ ಸಾವಿಗೀಡಾಗಿ, ಮತ್ತೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಬೆಳ್ತಂಗಡಿಯ ಕುಳ ನಿವಾಸಿ ಗಾಯತ್ರಿ (23) ಮೃತ ವಕೀಲೆ.ಇವರ ಸಂಬಂಧಿ ಯೋಗೀಶ (35) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಗಾಯತ್ರಿ ಅವರನ್ನು ಕೂಡ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು.