ಲಂಚ ಸ್ವೀಕರಿಸುತ್ತಿದ್ದ ನಗರ ಯೋಜನೆ ಪುತ್ತೂರು ಉಪ ನಿರ್ದೇಶಕಿ ಎಸಿಬಿ ಬಲೆಗೆ
Thursday, April 13th, 2017ಮಂಗಳೂರು: ಭೂ ಪರಿವರ್ತನೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ಪುತ್ತೂರು ನಗರ ಯೋಜನೆ ಇಲಾಖೆ ಉಪ ನಿರ್ದೇಶಕರನ್ನು ಭ್ರಷ್ಟಾಚಾರ ನಿಗ್ರಹದಳ ಬಂಧಿಸಿದೆ. ಪುತ್ತೂರಿನ ಅರ್ಯಾಪು ಗ್ರಾಮದಲ್ಲಿ ವಾಸವಾಗಿರುವ ಪಿ.ಕೇಶವ ಸುವರ್ಣ ತಮ್ಮ ಜಮೀನನ್ನು ವಾಣಿಜ್ಯ ಪರಿವರ್ತನೆಗಾಗಿ ನಗರ ಅಭಿವೃದ್ಧಿ ಪ್ರಾಧಿಕಾರ, ಪುತ್ತೂರು ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕಾಗಿ ನಗರ ಯೋಜನೆ ಪುತ್ತೂರು ಉಪ ನಿರ್ದೇಶಕಿ ಲಾವಣ್ಯ ಎಂಬವರು ಸದರಿ ಜಮೀನನ್ನು ವಾಣಿಜ್ಯ ಪರಿವರ್ತನೆಗಾಗಿ ಎನ್ಓಸಿ ನೀಡಲು 10,000 ಹಣ ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ […]