ಶಾಲೆಗಳಲ್ಲಿ ಪುಸ್ತಕ, ಸಮವಸ್ತ್ರ, ಲೇಖನ ಸಾಮಗ್ರಿ ಖರೀದಿಗೆ ಒತ್ತಾಯಿಸುವಂತಿಲ್ಲ

Tuesday, October 26th, 2021
Uniform

ಮಂಗಳೂರು :  ಜಿಲ್ಲೆಯಲ್ಲಿನ ಅನುದಾನಿತ, ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಯವರು ಖಾಸಗಿ ಶಾಲೆಗಳಿಂದಲೇ ಅಥವಾ ನಿರ್ದಿಷ್ಟ ಮಾರಾಟಗಾರರಿಂದಲೇ ಶಾಲಾ ಮಕ್ಕಳ ಪೋಷಕರು ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು ಹಾಗೂ ಇತರೆ ಲೇಖನ ಸಾಮಾಗ್ರಿಗಳನ್ನು ಖರೀದಿಸುವಂತೆ ಒತ್ತಾಯಿಸುವಂತಿಲ್ಲ. ಪ್ರತಿ ತರಗತಿಗೆ ನಿಗದಿಪಡಿಸಿದ ನೋಟ್ ಪುಸ್ತಕಗಳನ್ನು, ಸಮವಸ್ತ್ರಗಳನ್ನು ಮತ್ತು ಇತರೆ ಲೇಖನ ಸಾಮಗ್ರಿಗಳನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಪೋಷಕರು ಸ್ವತಂತ್ರವಾಗಿರುತ್ತಾರೆ. ರಾಜ್ಯದ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆಗಳನ್ನು ನೋಂದಣಿ ಮತ್ತು ಅನುಮತಿ ಪಡೆಯುವಾಗ […]

ಉಳ್ಳಾಲದಲ್ಲಿ 15 ಕ್ಕೂ ಅಧಿಕ ಮನೆಗಳ ಗೇಟುಗಳಲ್ಲಿ ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿ ಪತ್ರ ಹಾಗೂ ಪುಸ್ತಕಗಳು ಪತ್ತೆ

Friday, September 24th, 2021
Christian

ಮಂಗಳೂರು  : ಉಳ್ಳಾಲ ರೈಲ್ವೇ ನಿಲ್ದಾಣದ ಹಿಂಭಾಗದ  15 ಕ್ಕೂ ಅಧಿಕ ಮನೆಗಳ ಗೇಟುಗಳಲ್ಲಿ  ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿ ಪತ್ರ ಹಾಗೂ ಪುಸ್ತಕಗಳು ಪತ್ತೆಯಾಗಿದ್ದು ಸೋಮೇಶ್ವರ ಪರಿಸರದಲ್ಲಿ  ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಪರಿಚಿತ ವ್ಯಕ್ತಿಯೋರ್ವ ಸೆ.21ರ ಶುಕ್ರವಾರ ಸೋಮೇಶ್ವರ ಪರಿಸರದಲ್ಲಿ ಇದನ್ನು ಮನೆಯ ಗೇಟುಗಳಲ್ಲಿ  ಸಿಕ್ಕಿಸಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಬಜರಂಗದಳ ಘಟಕ ಭೇಟಿ ನೀಡಿ ಭಿತ್ತಿ ಪತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿರುವ ಮೊಬೈಲ್ ನಂಬರಿರುವ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ‌. ಬೆಳಿಗ್ಗೆ ಲುಂಗಿ ಧರಿಸಿದ್ದ ಅಪರಿಚಿತ ವ್ಯಕ್ತಿ 15 ರಷ್ಟು […]

ಡಾ.ಜಯಶ್ರೀ ಬಿ.ಕದ್ರಿಯವರ” ಬೆಳಕು ಬಳ್ಳಿ” ಪುಸ್ತಕ ಬಿಡುಗಡೆ

Sunday, September 6th, 2020
Belaku Balli

ಮಂಗಳೂರು: ಮಂಗಳೂರಿನ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಜಯಶ್ರೀ ಬಿ.ಕದ್ರಿಯವರ “ಬೆಳಕು ಬಳ್ಳಿ” ಎಂಬ ಪುಸ್ತಕವನ್ನ ಖ್ಯಾತ ಲೇಖಕಿ ಶ್ರೀಮತಿ ಭುವನೇಶ್ವರಿ ಹೆಗಡೆ ಇವರ ಉಪಸ್ಥಿತಿಯಲ್ಲಿ ನಗರದ ಪ್ರೇಸ್ ಕ್ಲಬ್‌ ನಲ್ಲಿ ಇಂದು ಪುಸ್ತಕವನ್ನ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಎಸ್ .ಪ್ರದೀಪ ಕುಮಾರ ಕಲ್ಕೂರ. ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಇದರ ಪ್ರಾಶುಂಪಾಲರಾದ ಪ್ರೋ. ರಾಜೆಶೇಖರ ಹೆಬ್ಬಾರ.ಹಾಗೂ ಪ್ರೋ.ನಾಗವಣಿ ಮಂಚಿ […]