ಶತಾಯುಷಿ ಉಡುಪಿಯ ಪೇಜಾವರ ಶ್ರೀಗಳ ತಂದೆ ಅಂಗಡಿಮಾರ್ ಕೃಷ್ಣ ಭಟ್ ನಿಧನ

Monday, November 6th, 2023
Krishna-Bhat

ಉಡುಪಿ : ತುಳು ಲಿಪಿಕಾರ, ಪಂಚಾಂಗ ಕರ್ತ, ಸಾಹಿತಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರ ತಂದೆ ಅಂಗಡಿಮಾರ್ ಕೃಷ್ಣ ಭಟ್ (102) ನಿಧನರಾಗಿದ್ದಾರೆ. ಹಳೆಯಂಗಡಿ ಸಮೀಪದ ಪಕ್ಷಿಕೆರೆಯಲ್ಲಿರುವ ಸ್ವಗೃಹದಲ್ಲಿ ಮತ್ತೋರ್ವ ಪುತ್ರನೊಂದಿಗೆ ವಾಸವಿದ್ದ ಅವರು, ತುಳು ಲಿಪಿಕಾರರಾಗಿ, ಪಂಚಾಂಗ ಕರ್ತರಾಗಿ, ಭಜನೆ ರಚನಕಾರರಾಗಿದ್ದರು. ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಾಗಿ ಇವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ, ಕಲ್ಕೂರ ಪ್ರತಿಷ್ಠಾನದಿಂದ ನೀಡಲಾದ ಪೇಜಾವರ ಶ್ರೀ ಜೀವಮಾನ ಪ್ರಶಸ್ತಿ, ಬ್ರಾಹ್ಮಣರ ಸಮ್ಮೇಳನದ ಗೌರವ ಪುರಸ್ಕಾರ ಸಹಿತ ಅನೇಕ […]

ಬ್ಯಾಂಕುಗಳನ್ನು ವಿಲೀನಗೊಳಿಸದಂತೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯ

Thursday, September 19th, 2019
Pejawar

ನವದೆಹಲಿ : ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿಯಾಗಿ ಕರಾವಳಿ ಕರ್ನಾಟಕದಲ್ಲಿ ಹುಟ್ಟಿದ ಬ್ಯಾಂಕುಗಳನ್ನು ವಿಲೀನಗೊಳಿಸುವ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ಕರ್ನಾಟಕದ ಕರಾವಳಿ ಪ್ರದೇಶದ ಬ್ಯಾಂಕುಗಳನ್ನು ಇತರ ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸುವುದರಿಂದ ಅವರ ಹೆಸರಿನೊಂದಿಗೆ ಸಂಸ್ಕೃತಿಯೂ ಶಾಶ್ವತವಾಗಿ ಅಳಿಸಿ ಹೋಗುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡಲು ಬ್ಯಾಂಕುಗಳ ವಿಲೀನ ಅತ್ಯಗತ್ಯ ಎಂದು ಇದೇ ವೇಳೆ ನಿರ್ಮಲಾ ಅವರಿಗೆ […]

ಉಡುಪಿ: ಪೇಜಾವರ ಸ್ವಾಮೀಜಿಯ ಸಹೋದರ ಎಂದ ಕ್ರಿಶ್ಚಿಯನ್ ಧರ್ಮದ ನಕಲಿ ಪ್ರಚಾರಕನ ವಿರುದ್ಧ ದೂರು

Friday, August 16th, 2019
pejaavara

ಉಡುಪಿ : ಕ್ರೈಸ್ತ ಧರ್ಮದ ಪ್ರಚಾರಕ ಎಂದು ಹೇಳಲಾದ ವ್ಯಕ್ತಿಯೊಬ್ಬರು ಪೇಜಾವರ ಶ್ರೀಗಳ ಸ್ವಾಮೀಜಿ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಂಸ್ಕಾರ ಭಾರತಿ ಉಡುಪಿ ಜಿಲ್ಲಾ ಸಂಚಾಲಕ ವಾಸುದೇವ ಭಟ್ ಪೆರಂಪಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರ ಚರ್ಚ್‌ನಲ್ಲಿ ಧಾರ್ಮಿಕ ವಿಷಯಗಳನ್ನು ಒಳಗೊಂಡ ಕರಪತ್ರಗಳನ್ನು ಪ್ರಚಾರದ ರೂಪದಲ್ಲಿ ವಿತರಿಸಿದ್ದು, ಆ ವ್ಯಕ್ತಿಯೂ ಕರಪತ್ರದಲ್ಲಿ ತಾನು ಪೇಜಾವರ ಮಠದ ಶ್ರೀ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯ ಸಹೋದರ ಪಾಸ್ಟರ್ ವಸಂತ ಆರ್ . ಪೈ ಎಂದು ಉಲ್ಲೇಖಿಸಿದ್ದಾನೆ ಎಂದು ಅವರು ಹೇಳಿದ್ದಾರೆ. ಮಾತ್ರವಲ್ಲದೆ, […]