Blog Archive

ಮುಂದಿನ ವರ್ಷದೊಳಗೆ ಕನಕನ ಗುಡಿ ಸ್ಥಾಪಿಸಲಾಗುವುದು: ಪೇಜಾವರ ಶ್ರೀ

Friday, November 18th, 2016
kanaka-sadhbhavana

ಉಡುಪಿ: ಉಡುಪಿಯ ಕೃಷ್ಣ ಗಾನ ಪ್ರಿಯ. ದಾಸ ಶ್ರೇಷ್ಠರೆನಿಸಿಕೊಂಡ ಕನಕದಾಸರಿಗೆ ಒಲಿದು ಕಿಂಡಿಯ ಮೂಲಕ ದರ್ಶನ ನೀಡಿದ ಶ್ರೀ ಕೃಷ್ಣ. ಕಾಗಿನೆಲೆಯಾದಿ ಕೇಶವ ಎಂಬ ನಾಮದಿಂದ ತನ್ನ ಕೀರ್ತನೆಗಳನ್ನು ಮುಗಿಸುತ್ತಿದ್ದ ಕನಕದಾಸರಿಗೆ ಉಡುಪಿಯ ಕೃಷ್ಣ ಬಲು ಅಚ್ಚುಮೆಚ್ಚು. ಹೀಗಾಗಿ ಕೃಷ್ಣನೂರಿನಲ್ಲಿ ಕನಕದಾಸರ 529ನೇ ಜಯಂತಿಯನ್ನು ಇನ್ನೂ ಅದ್ದೂರಿಯ ಜೊತೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕನಕ ಜಯಂತಿಯ ಅಂಗವಾಗಿ ನಗರದ ಜೋಡು ಕಟ್ಟೆಯಿಂದ ರಥಬೀದಿಯವರೆಗೆ ಕನಕ ಜ್ಯೋತಿಯ ಮೆರವಣಿಗೆ ನಡೆಸಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಕನಕದಾಸರ ಅಭಿಮಾನಿಗಳು ಕನಕ ಪೂಜೆಯಲ್ಲಿ […]

ಸಾಂಕೇತಿಕ ಸ್ವಚ್ಛತಾ ಕಾರ್ಯ, ಬರೀ ಬಹಿರಂಗ ಶುದ್ಧಿ ಮಾತ್ರ ಅಲ್ಲ ಎಲ್ಲರ ಅಂತರಂಗ ಶುದ್ಧಿಯಾಗಬೇಕು: ಪೇಜಾವರ ಶ್ರೀ

Monday, October 24th, 2016
Kanaka-nade

ಉಡುಪಿ: ಯುವ ಬ್ರಿಗೇಡ್‌ನ ಕನಕ ನಡೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಮಠದ ಒಳಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಪೇಜಾವರ ಶ್ರೀ ಚಾಲನೆ ನೀಡಿದರು. ಇದೊಂದು ಸಾಂಕೇತಿಕ ಸ್ವಚ್ಛತಾ ಕಾರ್ಯ. ಬರೀ ಬಹಿರಂಗ ಶುದ್ಧಿ ಮಾತ್ರ ಅಲ್ಲ. ಎಲ್ಲರ ಅಂತರಂಗ ಶುದ್ಧಿಯಾಗಬೇಕು. ರಸ್ತೆ, ಉದ್ಯಾನ, ಸ್ವಚ್ಛವಾಗಬೇಕು. ಕನಕ ನಡೆ ಸರ್ಕಾರದ ಆದೇಶದಂತೆ ನಡೆಯುತ್ತದೆ. ಮಠದ ವಾತಾವರಣ ಸ್ವಚ್ಛ ಮಾಡಲಾಗುತ್ತದೆ. ದೇಶಾದ್ಯಂತ ಅಭಿಯಾನ ನಡೆಯಬೇಕು. ಇದೊಂದು ಮಾದರಿ ಕಾರ್ಯಕ್ರಮವಾಗಲಿ ಎಂದು ಪೇಜಾವರ ಶ್ರೀಗಳು ಹೇಳಿದರು. ಯುವ ಬ್ರಿಗೇಡ್‌ […]