ತುಲಾಭಾರದ ವೇಳೆ ಅವಘಡ, ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Friday, November 3rd, 2023
lakshmi-hebbalkar

ಉಡುಪಿ : ತುಲಾಭಾರದ ವೇಳೆ ಆದ ಅವಘಡದ ಹಿನ್ನೆಲೆಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ಆರೋಗ್ಯದ ಕುರಿತಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ರೀಗಳ ಆರೋಗ್ಯ ವಿಚಾರಿಸಿದರು. ಶ್ರೀಗಳ ಆಪ್ತ ಸಹಾಯಕರಿಗೆ ಕರೆ ಮಾಡಿ ಸ್ವಾಮೀಜಿಗಳ ಆರೋಗ್ಯ ಕುರಿತಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಪಡೆದರು. ಶ್ರೀಗಳಿಗೆ ಸಣ್ಣ ಗಾಯವಾಗಿದ್ದನ್ನು, ಗಾಭರಿಪಡುವಂತದ್ದು ಏನಿಲ್ಲ . ಈಗ ಆರೋಗ್ಯವಾಗಿದ್ದು, ನವದೆಹಲಿಯಿಂದ ಅಯೋಧ್ಯೆಯತ್ತ ಶ್ರೀಗಳು ಪ್ರಯಾಣಿಸುತ್ತಿದ್ದಾರೆ […]

ಪೇಜಾವರ ಶ್ರೀಗಳ ವಿವಾದದ ಬಳಿಕ, ಅಭಿಮಾನಿಗಳಿಗೆ ಪತ್ರ ಬರೆದ ಹಂಸಲೇಖ

Wednesday, November 24th, 2021
Hamsalekha

ಬೆಂಗಳೂರು: ಪೇಜಾವರ ಶ್ರೀಗಳ ಕುರಿತು ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ತಿರುಗಿದ ಬೆನ್ನಲ್ಲೇ  ವಿಚಾರಣೆಗೆ ಹಾಜರಾಗುವಂತೆ ಸಂಗೀತ ನಿರ್ದೇಶಕ ಹಂಸಲೇಖಾ ಅವರಿಗೆ ಪೊಲೀಸರು  ನೋಟೀಸ್ ನೀಡಿದ್ದರು. ಆದರೆ ಅನಾರೋಗ್ಯ ಹಿನ್ನೆಲೆಯಲ್ಲಿ ಹಂಸಲೇಖಾ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ಪತ್ರ ಬರೆದಿರುವ ಹಂಸಲೇಖಾ, ಕನ್ನಡಿಗರ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. ನಾನು ಆರೋಗ್ಯದಿಂದ ಇದ್ದೇನೆ. ನಾನು ಅನಾರೋಗ್ಯಕ್ಕೀಡಾಗಿದ್ದೇನೆ ಎಂದು ಹಲವು ಕರೆಗಳು ಬರುತ್ತಿವೆ. ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಗೊತ್ತು, ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು…. […]

ಇಡ್ಯಾ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ : ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಹಿಂದಿರುಗಿದರೆ ನಮ್ಮ ಜೀವನದಲ್ಲಿ ನಿತ್ಯೋತ್ಸವ; ಪೇಜಾವರ ಶ್ರೀ

Saturday, February 8th, 2020
Edya

ಸುರತ್ಕಲ್ ‌: ಇಡ್ಯಾ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವವು 07.02.2020 ರಂದು ಶುಕ್ರವಾರದಂದು ನಡೆದಿದೆ. ದೇವರನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡು ನಾವು ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಹಿಂದಿರುಗಿದರೆ ನಮ್ಮ ಜೀವನದಲ್ಲಿ ನಿತ್ಯೋತ್ಸವವೇ ತುಂಬಿರುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಮತ್ತು ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವದಿಂದ ಒಂದು ದೇವಸ್ಥಾನ ಮಾತ್ರವಲ್ಲದೆ ಗ್ರಾಮವಿಡೀ ಕಳೆಗಟ್ಟುತ್ತದೆ; ಅಭಿವೃದ್ಧಿಯಾಗುತ್ತದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಶಾಸಕ […]

ಇನ್ನಿಲ್ಲವಾದ ದಲಿತರ ಹಿತೈಷಿ ಪೇಜಾವರ ಶ್ರೀ- ಲೋಲಾಕ್ಷ

Monday, December 30th, 2019
vishwesha-thirtha

ಮಂಗಳೂರು : ಪೇಜಾವರ ಶ್ರೀಗಳು ಇನ್ನಿಲ್ಲ ಎಂಬುದನ್ನು ಕೇಳಿ ನಮಗೆ ಅತೀವ ದುಃಖವಾಗಿದೆ. ಶ್ರೀಗಳ ನಿಧನದಿಂದ ಜಗತ್ತಿನಾದ್ಯಂತ ಇರುವ ಅವರ ಶಿಷ್ಯಂದಿರಿಗೆ, ಭಕ್ತಾಭಿಮಾನಿಗಳಿಗೆ ಅತೀವ ದುಃಖವಾಗಿದೆ. ಅವರ ದುಃಖದಲ್ಲಿ ನಾವೂ ಸಹಭಾಗಿಗಳಾಗಿದ್ದೇವೆ. ಡಾ. ಅಂಬೇಡ್ಕರ್ ಚಿಂತನೆಗೆ ತದ್ವಿರುದ್ಧವಾದ ಮಾಧ್ವ ಪರಂಪರೆಯ ಅತ್ಯಂತ ಹಿರಿಯ ಚೇತನವಾಗಿದ್ದ ಶ್ರೀಗಳು, ತಾವು ನಂಬಿದ ತತ್ವಗಳ ಪಾಲನೆ ಪೋಷಣೆಯಲ್ಲೇ ತಮ್ಮ ಜೀವನ ಸವೆಸಿದರೂ ನಿರಂತರ ದಲಿತರ ಹಿತೈಷಿಯಾಗಿದ್ದರು. ತಮ್ಮ ರಾಜಕೀಯ ನಡೆಯಿಂದ ಸದಾ ವಿವಾದಾತ್ಮಕರಾಗುತ್ತಿದ್ದ ಶ್ರೀಗಳು, ತಮ್ಮ ಇಳಿ ವಯಸ್ಸಿನಲ್ಲೂ ತಾವು ನಂಬಿದ […]

ಪೇಜಾವರ ಶ್ರೀ ಗಳ ನಿಧನಕ್ಕೆ ಶಾಸಕ ಕಾಮತ್ ತೀವ್ರ ಸಂತಾಪ

Sunday, December 29th, 2019
Vedavyasa

ಉಡುಪಿ: ಶ್ರೀ ಕೃಷ್ಣನಗರಿ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಇಂದು ಮುಖ್ಯಪ್ರಾಣಐಕ್ಯ ಸೇರಿದ್ದು, ಇಡೀ ಕರುನಾಡು ಸ್ತಬ್ಧವಾಗಿದೆ. ಶ್ರೀಗಳ ಅಗಲಿಕೆಗೆ ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ಸಂತಾಪ ಸೂಚಿಸಿದ್ದಾರೆ. ಜನರಿಗಾಗಿ ಅದರಲ್ಲಿಯೂ ಬಡವರಿಗಾಗಿ ಬದುಕಿದವರು ಶ್ರೀಗಳು. ಬಡತನ ನಿರ್ಮೂಲನೆ, ಅನ್ನ ದಾಸೋಹ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟ ದಿವ್ಯ ಚೇತನ. ದೇಶದ ಸಂಸ್ಕೃತಿ ಪ್ರತೀಕರಾಗಿದ್ದರು. ಆಧ್ಯಾತ್ಮದ ಜೊತೆಗೆ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿದವರು ಪೇಜಾವರ ಶ್ರೀಗಳು. ಸಮಾಜಕ್ಕೆ ಶ್ರೀಗಳು […]

ಪೇಜಾವರ ಶ್ರೀ ಗಳ ಕೊನೆಯಾಸೆಯಂತೆ ಬೆಳಗ್ಗಿನ ಜಾವ ಮಠಕ್ಕೆ ಸ್ಥಳಾಂತರ

Saturday, December 28th, 2019
Pejawar-seer

ಉಡುಪಿ : ಡಿಸೆಂಬರ್ 20 ರಂದು ಉಸಿರಾಟದ ತೊಂದರೆಯಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳನ್ನು ಆದಿತ್ಯವಾರ ಬೆಳಗ್ಗಿನ ಜಾವ 5 ಕ್ಕೆ ಮಠಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಉಡುಪಿ ಮಠದ ಮೂಲಗಳು ತಿಳಿಸಿವೆ. ಪೇಜಾವರ ಶ್ರೀ ಗಳ ಕೊನೆಯಾಸೆಯಂತೆ ಅವರನ್ನು ಆದಿತ್ಯವಾರ ಬೆಳಗ್ಗಿನ ಜಾವ ಮಠಕ್ಕೆ ಸ್ಥಳಾಂತರ ಮಾಡುತ್ತಿದ್ದೇವೆ ಎಂದು ಪೇಜಾವರ ಮಠದ ಕಿರಿಯ ಶ್ರೀಗಳು ಹೇಳಿದ್ದಾರೆ. ಮಠದಲ್ಲೇ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುವುದು ಅಲ್ಲದೇ ಮಠಕ್ಕೆ ಭಕ್ತರ ಪ್ರವೇಶವನ್ನ ನಿರ್ಬಂಧಿಸ ಲಾಗುವುದು ಎಂದು ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗಳು ತಿಳಿಸಿದ್ದಾರೆ. […]

ಪೇಜಾವರ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಇನ್ನಷ್ಟು ಕಾಲಾವಕಾಶ ಬೇಕು : ಕೆಎಂಸಿ ವೈದ್ಯರು

Tuesday, December 24th, 2019
KMC

ಉಡುಪಿ : ಉಸಿರಾಟದ ಸಮಸ್ಯೆಯಿಂದ ಶುಕ್ರವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿರುವ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಆರೋಗ್ಯ ಸಾಕಷ್ಟು ಸುಧಾರಿಸಿದೆ. ಪ್ರತಿ ಹಂತದಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಬೆಂಗಳೂರಿನಿಂದ ತಜ್ಞ ವೈದ್ಯರು ಬಂದಿದ್ದಾರೆ. ಏಮ್ಸ್ ವೈದ್ಯರ ಜೊತೆಗೂ ನಿರಂತರ […]

ಪೇಜಾವರ ಶ್ರೀಗಳ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಲಿರುವ ಉಮಾ ಭಾರತಿ, ಸಿದ್ದರಾಮಯ್ಯ

Monday, December 23rd, 2019
pejawar

ಮಣಿಪಾಲ : ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅನಾರೋಗ್ಯದಿಂದಾಗಿ ಕಳೆದ ಶುಕ್ರವಾರ ಪೇಜಾವರ ಶ್ರೀಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೃತಕ ಉಸಿರಾಟ ವ್ಯವಸ್ಥೆ ಮುಂದುವರಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿಯೇ ಚಿಕಿತ್ಸೆ ಮುಂದುವರಿದಿದೆ. ಔಷಧ ಪ್ರಮಾಣ ಹೆಚ್ಚಿಸುವ ಅಥವಾ ಚಿಕಿತ್ಸಾ ವಿಧಾನ ಬದಲಿಸುವ ಬಗ್ಗೆ ಇಂದು ವೈದ್ಯರ ತಂಡ ತೀರ್ಮಾನ ಮಾಡಲಿದೆ. ಬಿಜೆಪಿ ಹಿರಿಯ ನಾಯಕಿ, ಪೇಜಾವರ ಶ್ರೀಗಳ ಶಿಷ್ಯೆ ಉಮಾಭಾರತಿ ಇಂದು […]

ವೇದಾಧ್ಯಯನ ನಿರತರಿಗೆ ಶುತಿತತ್ತ್ವ ಪ್ರದೀಪಿಕಾ ಉಪಯುಕ್ತಗ್ರಂಥ : ಪೇಜಾವರ ಶ್ರೀ

Friday, November 29th, 2019
Pradipika

ಮಂಗಳೂರು : ಚತುರ್ವೇದ ಪಂಡಿತರೂ, ವ್ಯಾಖ್ಯಾನಕಾರರೂ, ವ್ಯಾಕರಣ ವಿದ್ವಾಂಸರೂ ಆಗಿರುವ ಕದ್ರಿಯ ಡಾ| ಪ್ರಭಾಕರಅಡಿಗರು ರಚಿಸಿರುವ ಶುತಿತತ್ತ್ವ ಪ್ರದೀಪಿಕಾ (ಫಿಟ್ ಸೂತ್ರಾರ್ಥವ್ಯಾಖ್ಯಾನಮ್) ಗ್ರಂಥ ಸಾರಸ್ವತ ಲೋಕಕ್ಕೆ ಅಪೂರ್ವ ಕೊಡುಗೆಯಾಗಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ನುಡಿದರು. ಇತ್ತೀಚೆಗೆ ನಗರದ ಮಲ್ಲಿಕಟ್ಟೆಯಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ’ಗ್ರಂಥ’ ಲೋಕಾರ್ಪಣೆಗೈದುಅವರು ಮಾತನಾಡಿದರು. ವೇದದ ಶಬ್ದ ಸ್ವರಗಳಿಗೆ ಸಂಬಂಧಿಸಿದ ಈ ಗ್ರಂಥವು ವೇದಾಧ್ಯಯನವನ್ನು ಸಾಂಗವಾಗಿ ಮಾಡುವವರಿಗೆಅತ್ಯಂತಉಪಯುಕ್ತವಾಗಿದೆಎಂದರು. ಶ್ರೀಯುತ ಅಡಿಗರಿಂದಇನ್ನಷ್ಟು ಮೌಲ್ಯಯುತ ಹಾಗೂ ಸಂಶೋಧನಾತ್ಮಕವಾದ ಗ್ರಂಥಗಳು ರಚಿಸಿಲ್ಪಡುವಂತಾಗಲೆಂದು ಶುಭ ಹಾರೈಸಿದರು. […]

ಅಯೋಧ್ಯೆ ತೀರ್ಪು : ದೆಹಲಿಯಲ್ಲಿ ನಡೆದ ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಪಾಲ್ಘೊಂಡ ಪೇಜಾವರ ಶ್ರೀ

Monday, November 11th, 2019
Sri-Pejawar

ಉಡುಪಿ : ಸುಪ್ರೀಂಕೋರ್ಟ್ ಶನಿವಾರದಂದು ಅಯೋಧ್ಯೆ ಕುರಿತ ತೀರ್ಪು ನೀಡಿದ ಹಿನ್ನೆಲೆ ಭಾನುವಾರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂದೂ ಸಂತರು, ಮುಸ್ಲಿಂ ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಉಡುಪಿಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಪಾಲ್ಗೊಂಡರು. ಧಾನಮಂತ್ರಿಗಳ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಅಯೋಧ್ಯೆ ಕುರಿತು ತೀರ್ಪು ಬರುವುದಕ್ಕೂ ಮುನ್ನ ಹಾಗೂ ತೀರ್ಪು ಬಂದ ಬಳಿಯ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬ ಉದ್ದೇಶದಿಂದ ಪ್ರಮುಖ ಸಂತರು, ವಿಶ್ವ ಹಿಂದೂ ಪರಿಷತ್ ಮುಖಂಡರ […]