ಬಂಟ್ವಾಳ ಘಟನೆ : ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ 10-00 ಘಂಟೆಯ ವರೆಗೆ 144 ರಂತೆ ನಿಷೇದಾಜ್ಞೆ

Friday, November 13th, 2015
AB Ibrahim

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ದಿನಾಂಕ 12-11-2015 ರಂದು ನಡೆದ ಅಹಿತಕರ ಘಟನೆ ನಂತರ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಜಿಲ್ಲೆಯಾದ್ಯಂತ ಶಾಂತಿಯುತ ವಾತಾವರಣ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ದಿನಾಂಕ 12-11-2015 ರ ರಾತ್ರಿ 10-00 ಘಂಟೆಯಿಂದ ದಿನಾಂಕ 15-11-2015 ರ ರಾತ್ರಿ 10-00 ಘಂಟೆಯ ತನಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973 ರ ಸೆಕ್ಷನ್ 144 ರಂತೆ ನಿಷೇದಾಜ್ಞೆ ಆದೇಶ ಹೊರಡಿಸಲಾಗಿದೆ. ಇದರಂತೆ ಸದ್ರಿ […]

ವಿಧಾನಸೌಧ ಮುಂದೆ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆಗೆ ಯತ್ನ

Friday, February 21st, 2014
Vidhana-Soudha

ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತುಮಕೂರು ಮೂಲದ ಕುಟುಂಬವೊಂದು ವಿಧಾನಸೌಧದ ಪಕ್ಕದಲ್ಲಿರುವ ವಿಕಾಸಸೌಧದ ಮುಂದೆ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಘಟನೆ ಶುಕ್ರವಾರ ನಡೆಯಿತು. ನಿವೃತ್ತ ಎಸಿಪಿ ಸುಬ್ಬಣ್ಣ ವಿರುದ್ಧ ಕಿರುಕುಳ ಆರೋಪ ಮಾಡಿರುವ ಕುಟುಂಬ, ಇಂದು ಬೆಳಗ್ಗೆ ವಿಕಾಸಸೌಧದ ಮುಂದೆ ಕುಟುಂಬದ ಆರು ಮಂದಿ ಪೆಟ್ರೋಲ್ ಕ್ಯಾನ್ ಹಿಡಿದುಕೊಂಡು ಕಾರಿನಲ್ಲಿ ಕುಳಿತು, ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಆದರೆ ಸ್ಥಳದಲ್ಲಿದ್ದ ಪೊಲೀಸರ ಮಧ್ಯಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವೊಲಿಸಿದರು. […]